More

    ಕ್ರಿಕೆಟ್​ ಇತಿಹಾಸದಲ್ಲೇ ಇದುವರೆಗೂ ಯಾರೂ ಮಾಡಿರದ ವಿಶ್ವದಾಖಲೆ ಬರೆದ ಆರ್​ಸಿಬಿ ಸ್ಟಾರ್​ ಆಟಗಾರ!

    ನ್ಯೂಯಾರ್ಕ್​: ವಿಶ್ವ ಕ್ರಿಕೆಟ್​ನಲ್ಲಿ ಹಲವು ದಾಖಲೆಗಳು ದಾಖಲಾಗುತ್ತಿವೆ. ಆದರೆ ಈ ಒಂದು ದಾಖಲೆ ಎಲ್ಲ ದಾಖಲೆಗಳಿಗಿಂತ ವಿಭಿನ್ನವಾಗಿದೆ ಮತ್ತು ವಿಶೇಷವಾಗಿದೆ. ಈಗ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಅನಿರೀಕ್ಷಿತ ದಾಖಲೆಯೊಂದು ದಾಖಲಾಗಿದೆ. ಬೌಲರ್‌ಗಳ ಪ್ರಾಬಲ್ಯವಿರುವ ಈ ಮೆಗಾ ಟೂರ್ನಿಯಲ್ಲಿ ಕಿವೀಸ್ ಬೌಲರ್ ಊಹೆಗೂ ನಿಲುಕದ ದಾಖಲೆಯೊಂದನ್ನು ತಮ್ಮ ಹೆಸರಿನಲ್ಲಿ ಬರೆದಿದ್ದಾರೆ. ಟಿ20 ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಬೌಲರ್ ಎನಿಸಿಕೊಂಡಿದ್ದಾರೆ.

    ಟಿ20 ವಿಶ್ವಕಪ್‌ ಅಂಗವಾಗಿ ನ್ಯೂಜಿಲೆಂಡ್ ಮತ್ತು ಪಪುವಾ ನ್ಯೂಗಿನಿ ತಂಡಗಳ ನಡುವೆ ನಿನ್ನೆ ಲೀಗ್​ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಕಿವೀಸ್ ಬೌಲರ್ ಲಾಕಿ ಫರ್ಗ್ಯಸನ್ ಟಿ20 ವಿಶ್ವಕಪ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದಿದ್ದಾರೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಗಿನಿಯಾ ತಂಡ, ಫರ್ಗ್ಯುಸನ್ ಬೌಲಿಂಗ್​ ದಾಳಿಗೆ ತತ್ತರಿಸಿತು.

    ಫರ್ಗ್ಯೂಸನ್​ ಈ ಪಂದ್ಯದಲ್ಲಿ ತಮ್ಮ ನಾಲ್ಕು ಓವರ್‌ಗಳ ಕೋಟಾದಲ್ಲಿ ಯಾವುದೇ ರನ್ ನೀಡದೆ 3 ವಿಕೆಟ್ ಪಡೆದರು. 4 ಓವರ್​ಗಳನ್ನೂ ಮೇಡನ್ ಮಾಡುವ ಮೂಲಕ ವಿಶ್ವ ಕ್ರಿಕೆಟ್​ಗೆ ಶಾಕ್ ನೀಡಿದರು. ಈ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲಿ 4 ಓವರ್​ ಮೇಡನ್​ ಮಾಡಿ 3 ವಿಕೆಟ್​ ಪಡೆದ ಪ್ರಪ್ರಥಮ ಬೌಲರ್​ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಕೆನಡಾದ ಬೌಲರ್ ಸಾದ್ ಬಿನ್ ಜಾಫರ್ ಕೂಡ ನಾಲ್ಕು ಮೇಡನ್ ಓವರ್ ಎಸೆದು 2 ವಿಕೆಟ್ ಪಡೆದರು. ಪನಾಮಾ ತಂಡದ ವಿರುದ್ಧ ಟಿ20 ಅರ್ಹತಾ ಸುತ್ತಿನಲ್ಲಿ ಜಾಫರ್​ ಈ ಸಾಧನೆ ಮಾಡಿದರು.

    ಇನ್ನು ಪಂದ್ಯದ ವಿಚಾರಕ್ಕೆ ಬಂದರೆ ಮೊದಲು ಬ್ಯಾಟ್ ಮಾಡಿದ ಪುಪುವಾ ನ್ಯೂಗಿನಿ 19.4 ಓವರ್‌ಗಳಲ್ಲಿ 78 ರನ್‌ಗಳಿಗೆ ಆಲೌಟ್ ಆಯಿತು. ಆ ಬಳಿಕ ಕಿವೀಸ್ 12.2 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಈ ಗೆಲುವಿನೊಂದಿಗೆ ಕಿವೀಸ್ C ಗುಂಪಿನಲ್ಲಿ ಮೂರನೇ ಸ್ಥಾನದೊಂದಿಗೆ ತಮ್ಮ ವಿಶ್ವಕಪ್​ ಪ್ರಯಾಣವನ್ನು ಕೊನೆಗೊಳಿಸಿತು. ಲಾಕಿ ಫರ್ಗ್ಯೂಸನ್​ 4 ಎಸೆದು ಯಾವುದೇ ರನ್​ ನೀಡದೆ 3 ವಿಕೆಟ್​ ಪಡೆಯುವ ಮೂಲಕ ವಿಶ್ವದಾಖಲೆ ಬರೆದರು.

    ಫರ್ಗ್ಯೂಸನ್​ ಅವರು ಕಳೆದ ತಿಂಗಳು ಮುಕ್ತಾಯಗೊಂಡ ಐಪಿಎಲ್​ ಸೀಸನ್​ 17ರಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡದ ವಿರುದ್ಧ ಆಡಿದರು. (ಏಜೆನ್ಸೀಸ್​)

    ನೇರಳೆ ಹಣ್ಣು ತಿನ್ನುವುದರಿಂದ ಇಷ್ಟೆಲ್ಲ ಪ್ರಯೋಜನಗಳಿವೆಯಾ? ಇಲ್ಲಿದೆ ನೋಡಿ ಅಚ್ಚರಿಯ ಮಾಹಿತಿ…

    ಆ ದಿನವೇ ದರ್ಶನ್ ಎಚ್ಚೆತ್ತುಕೊಂಡಿದ್ದರೆ ಈ ರೀತಿ ಅನಾಹುತ ಆಗುತ್ತಿರಲಿಲ್ಲ: ಇಂದ್ರಜಿತ್​ ಲಂಕೇಶ್​ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts