More

    ರಸ್ತೆ, ಕಾಲುವೆ ನಿರ್ಮಾಣಕ್ಕೆ ಭೂಮಿ ಪೂಜೆ

    ರಟ್ಟಿಹಳ್ಳಿ: ತಾಲೂಕಿನ ತಿಪ್ಪಾಯಿಕೊಪ್ಪ ಗ್ರಾಮದ ಬಳಿ ದುರ್ಗಾದೇವಿ ಕೆರೆ ತುಂಬಿಸುವ ಯೋಜನೆಯ ಜಾಕ್‌ವೆಲ್ ಬಳಿ ಸಂಪರ್ಕ ರಸ್ತೆ, ಸಿಮೆಂಟ್ ಕಾಲುವೆ ಮತ್ತು ಕಾಂಪೌಂಡ್ ನಿರ್ಮಾಣಕ್ಕೆ ಶಾಸಕ ಯು.ಬಿ. ಬಣಕಾರ ಶನಿವಾರ ಭೂಮಿ ಪೂಜೆ ನೆರವೇರಿಸಿದರು.

    ಕರ್ನಾಟಕ ನೀರಾವರಿ ನಿಗಮ ನಿಯಮಿತ ತುಂಗಾ ಮೇಲ್ದಂಡೆ ಯೋಜನೆಯ 49.75 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಕಾಮಗಾರಿ ನಿರ್ವಹಿಸಲಾಗುತ್ತಿದೆ ಎಂದು ಹೇಳಿದರು.

    ಕೋಡಮಗ್ಗಿ ಗ್ರಾಪಂ ಅಧ್ಯಕ್ಷೆ ಲೀಲಾವತಿ ಕಬ್ಬಾರ, ಮಾಸೂರು ಗ್ರಾಪಂ ಅಧ್ಯಕ್ಷೆ ಪ್ರಮೀಳಾ ನಡುವಿನಮನಿ, ಮಾಜಿ ಅಧ್ಯಕ್ಷೆ ಕಾವ್ಯಾ ಹಿತ್ತಲಮನಿ, ಯಶವಂತ ಯಡಗೋಡಿ, ನಾರಾಯಣಪ್ಪ ಗೌರಕ್ಕನವರ, ಸಾಹಿತಿ ಡಾ. ನಿಂಗಪ್ಪ ಚಳಗೇರಿ, ಮಂಜುನಾಥ ತಳವಾರ, ಜಪ್ರುಲ್ಲಾ ಮುಲ್ಲಾ, ಬಸಪ್ಪ ಮಟ್ಟಿಮನಿ, ಹಜರತ್‌ಅಲಿ ಮುಲ್ಲಾ, ಮಲ್ಲೇಶಪ್ಪ ಗುತ್ತೇಣ್ಣನವರ, ಮಧು ಹಳದಣ್ಣನವರ, ಸುರೇಶ ಬಡಿಗೇರ, ಕುಮಾರ ಜಕ್ಕಪ್ಪನವರ, ತುಂಗಾ ಮೇಲ್ದಂಡೆ ಯೋಜನೆ ಸಹಾಯಕ ಕಾರ್ಯಾಪಾಲಕ ಇಂಜಿನಿಯರ್ ಹನುಮಂತಪ್ಪ ವಿ, ಸಹಾಯಕ ಇಂಜಿನಿಯರ್ ರವಿಕುಮಾರ ಟಿ, ಕೋಡಮಗ್ಗಿ, ತಿಪ್ಪಾಯಿಕೊಪ್ಪ ಮತ್ತು ಮಾಸೂರು ಗ್ರಾಮಸ್ಥರು ಉಪಸ್ಥಿತರಿದ್ದರು.

    ಏತ ನೀರಾವರಿ ಮೋಟಾರಿಗೆ ಚಾಲನೆ: ತಾಲೂಕಿನ ಹಳ್ಳೂರು ಗ್ರಾಮದ ಬಳಿ ತುಂಗಭದ್ರಾ ನದಿಯಿಂದ ರಟ್ಟಿಹಳ್ಳಿ ತಾಲೂಕಿನ ಗ್ರಾಮಗಳ 13 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಮೋಟಾರ್ ಚಾಲನೆಯನ್ನು ಶಾಸಕ ಯು.ಬಿ. ಬಣಕಾರ ನೇರವೇರಿಸಿದರು. ಕಳೆದ 2 ವರ್ಷಗಳಿಂದ ಈ ಯೋಜನೆ ಚಾಲನೆಯಲ್ಲಿದೆ. ಈ ವರ್ಷ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಹೆಚ್ಚಳವಾಗಿರುವುದರಿಂದ ತಾಲೂಕಿನ ಗ್ರಾಮಗಳಾದ ಮೈದೂರು, ಹಿರೇಕಬ್ಬಾರ, ಗಲಗಿನಕಟ್ಟಿ, ತಡಕನಹಳ್ಳಿ, ಹೊಸಕಟ್ಟಿ, ಗಂಗಯಿಕೊಪ್ಪ ಗ್ರಾಮಗಳ ಒಟ್ಟು 13 ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts