More

    ಭಾವಸಾರ ಕ್ಷತ್ರಿಯ ವಲಯ ಸಮಾವೇಶ

    ಹುಬ್ಬಳ್ಳಿ: ಅಖಿಲ ಭಾರತ ಭಾವಸಾರ ಕ್ಷತ್ರಿಯ ಮಹಾಸಭಾ ಹುಬ್ಬಳ್ಳಿ -ಧಾರವಾಡ, ಹಾವೇರಿ ಹಾಗೂ ಉತ್ತರಕನ್ನಡ ಜಿಲ್ಲೆಗಳ ವಲಯ ಮಟ್ಟದ ಸಮಾವೇಶ ಇತ್ತೀಚೆಗೆ ಇಲ್ಲಿಯ ವಿದ್ಯಾನಗರ ತಿಮ್ಮಸಾಗರ ದೇವಸ್ಥಾನ ರಸ್ತೆಯ ಭಾವಸಾರ ಭವನದಲ್ಲಿ ಏರ್ಪಡಿಸಲಾಗಿತ್ತು.

    ಸಮಾವೇಶ ಉದ್ಘಾಟಿಸಿದ ಮಹಾಸಭಾ ಕರ್ನಾಟಕ ಅಧ್ಯಕ್ಷ ಶ್ರೀನಿವಾಸ ಪಿಸ್ಸೆ ಮಾತನಾಡಿ, ಸಮಾಜವು ಬಹಳ ಹಿಂದುಳಿದಿದ್ದು, ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ತಾಲೂಕು, ಹೋಬಳಿ, ಪಂಚಾಯತಿ ವ್ಯಾಪ್ತಿಯಲ್ಲಿ ಭಾವಸಾರರನ್ನು ಗುರುತಿಸಿ ಸಂಲಗ್ನ ಸಂಸ್ಥೆಗಳನ್ನು ಸ್ಥಾಪಿಸಲು ಸಲಹೆ ನೀಡಿದರು.

    ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಡಾ. ರಾಜು ಜವಳಕರ ಮಾತನಾಡಿ, ಭಾವಸಾರರು ಆಥಿರ್ಕವಾಗಿ, ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಇಂತಹ ಸಂಸ್ಥೆಗಳು ಅವಶ್ಯಕ ಎಂದರು.

    ಮಹಾಸಭಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕಿಶನ್ ರಾವ್ ಗಡ್ಡಾಳೆ, ಸಲಹೆಗಾರರಾದ ಕೆ.ಜಿ. ಟಿಕಾರೆ ಮತ್ತು ಮಹಿಳಾ ಪರಿಷತ್ತಿನ ಅಧ್ಯಕ್ಷೆ ಅರ್ಚನಾ ವಡೋಣೆ ಮಾತನಾಡಿದರು.

    ಪಪ್ಪಣ್ಣಿ ಉತ್ತರಕರ, ಜಗದೀಶ ಉಂಡಾಳೆ, ಅರುಣಕುಮಾರ ಕುಂಠೆ, ಪ್ರಕಾಶ ಮಾಳದಕರ, ಡಾ. ಬಿ.ಐ. ಮಿರಜಕರ, ರಾಕೇಶ ತಿರುಮಲ್ಲೆ, ಪ್ರಕಾಶ ತಿರುಮಲ್ಲೆ, ಜಗದೀಶ ಹಂಚಾಟೆ, ದೀಪಕ ಮಾತಾಡೆ, ಸುಜಾತಾ ಸುಲಾಖೆ, ಜಯಶ್ರೀ ಲೋಖಂಡೆ ಉಪಸ್ಥಿತರಿದ್ದರು.

    ಮಹಾಸಭಾ ರಾಜ್ಯ ಉಪಾಧ್ಯಕ್ಷ ಡಾ. ಸುರೇಶ ಕಪಟಕರ ಸ್ವಾಗತಿಸಿದರು. ಕಾರ್ಯದರ್ಶಿ ಸುದರ್ಶನ ಸುಲಾಖೆ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts