More

    ಯಾವಾಗಲೂ ಒಳಿತನ್ನೇ ಬಯಸುತ್ತಿದ್ದ ಭಾನುಪ್ರಕಾಶ್

    ಚಿಕ್ಕಮಗಳೂರು: ಯಾವಾಗಲೂ ಎಲ್ಲರಿಗೂ ಒಳಿತನ್ನೇ ಬಯಸುತ್ತಿದ್ದ ಹಸನ್ಮುಖಿ ಎಂ.ಬಿ. ಭಾನುಪ್ರಕಾಶ್. ಅವರಿಗೆ ರಾಜಕಾರಣ ಎನ್ನುವುದು ವೃತ್ತಿಯಾಗಿರಲಿಲ್ಲ. ಬದಲಿಗೆ ಪ್ರವೃತ್ತಿಯಾಗಿತ್ತು. ಅಧಿಕಾರ ಸಿಗುತ್ತದೆ ಎಂದು ರಾಜಕಾರಣಕ್ಕೆ ಬರುವವರ ಸಂಖ್ಯೆ ಹೆಚ್ಚುತ್ತಿರುವ ಕಾಲಘಟ್ಟದಲ್ಲಿ ಇದಕ್ಕೆ ವ್ಯತಿರಿಕ್ತವಾಗಿ ಸಂಘಟನೆಯನ್ನೇ ಧ್ಯೇಯವನ್ನಾಗಿಸಿಕೊಂಡಿದ್ದವರು ಎಂ.ಬಿ.ಭಾನುಪ್ರಕಾಶ್ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ ಸ್ಮರಿಸಿದರು.

    ನಗರದ ಬಿಜೆಪಿ ಕಾರ್ಯಾಲಯದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಎಂ.ಬಿ.ಭಾನುಪ್ರಕಾಶ್ ಶ್ರದ್ಧಾಂಜಲಿ ಸಭೆಯಲ್ಲಿ ಭಾನುಪ್ರಕಾಶ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ಭಾನುಪ್ರಕಾಶ್ ಅವರು ಮಾತಿಗೆ ಕುಳಿತರೆ ಹಾಸ್ಯ, ನಗು, ಗಂಭೀರತೆ ಎಲ್ಲವೂ ಇರುತ್ತಿತ್ತು. ಒಬ್ಬ ವಿಚಾರವಂತ ಚಿಂತಕನನ್ನು ನಾವು ಕಳೆದುಕೊಂಡಿz್ದೆÃವೆ ಎಂದು ಬೇಸರ ವ್ಯಕ್ತಪಡಿಸಿದರು.
    ಎಂದೂ ಸಿಟ್ಟು ಮಾಡಿಕೊಳ್ಳದೆ ಪ್ರೀತಿಯಿಂದಲೇ ಎಲ್ಲರೊಂದಿಗೆ ಬೆರೆಯುತ್ತಿದ್ದ ವ್ಯಕ್ತಿತ್ವ ಅವರದ್ದು. ಜೊತೆಗೆ ಯಾರೇ ಕೋಪಗೊಂಡಿದ್ದರು ಅವರನ್ನು ಪ್ರೀತಿಯಿಂದಲೇ ಸಮಾಧಾನ ಮಾಡುವ ಶಕ್ತಿ ಅವರಿಗಿತ್ತು. ಇದೇ ಕಾರಣದಿಂದಲೇ ಅವರು ಉತ್ತಮ ಸಂಘಟಕರಾಗಿದ್ದರು ಎಂದರು.
    ಸAಘದಲ್ಲಿ ಪ್ರಚಾರಕರಾಗಿ ಕೆಲಸ ಮಾಡಿ ಪಕ್ಷಕ್ಕೆ ಬಂದ ಭಾನುಪ್ರಕಾಶ್ ಅವರು ಜಿಲ್ಲಾ ಪಂಚಾಯತ್ ಸದಸ್ಯರಾಗಿ, ವಿಧಾನಪರಿಷತ್ ಸದಸ್ಯರಾಗಿ, ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ, ಬಿಜೆಪಿ ರಾಜ್ಯ ಪ್ರಕೋಷ್ಟಗಳ ಸಂಯೋಜಕರಾಗಿ ಪಕ್ಷವನ್ನು ಸಂಘಟಿಸುವ ಕೆಲಸ ಮಾಡಿದ್ದರು. ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಶಕ್ತಿ ಇದ್ದಿದ್ದರಿಂದಲೇ ಅವರನ್ನು ನಾಲ್ಕು ಜಿಲ್ಲೆಗಳ ಮುಖ್ಯಸ್ಥರನ್ನಾಗಿ ಬಿಜೆಪಿ ನೇಮಕ ಮಾಡಿತ್ತು ಎಂದು ಹೇಳಿದರು.
    ಶ್ರದ್ಧಾಂಜಲಿ ಸಭೆಯಲ್ಲಿ ಬಿಜೆಪಿ ಮುಖಂಡರಾದ ಪುಷ್ಪರಾಜ್, ಕೋಟೆ ರಂಗನಾಥ್, ನರೇಂದ್ರ, ರಾಜಪ್ಪ, ಜೆಸೆಂತಾ ಅನಿಲ್ ಕುಮಾರ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts