More

    ನಟ ಬಾಲಯ್ಯ ಅಭಿಮಾನಿಗಳಿಗೆ ಇದು ಬೇಸರ ಸುದ್ದಿ!

    ಆಂಧ್ರಪ್ರದೇಶ: ತೆಲುಗು ಚಿತ್ರರಂಗದ ಸ್ಟಾರ್​ ನಟ ಬಾಲಯ್ಯ ಎಂದೇ ಖ್ಯಾತರಾದ ನಟಸಿಂಹ ನಂದಮೂರಿ ಬಾಲಕೃಷ್ಣ ಅಭಿನಯಿಸಿದ್ದ 1994 ರಲ್ಲಿ ಬಿಡುಗಡೆಗೊಂಡು ಬ್ಲಾಕ್​ಬಸ್ಟರ್​ ಹಿಟ್​ ಆದ ‘ಭೈರವ ದ್ವೀಪಂ’ ಸಿನಿಮಾದ ರಿ-ರಿಲೀಸ್​ ಇದೀಗ ರದ್ದಾದ ಸಂಗತಿ ಅಭಿಮಾನಿಗಳಲ್ಲಿ ಭಾರೀ ಬೇಸರ ಮೂಡಿಸಿದೆ.

    ಇದನ್ನೂ ಓದಿ: 🔴LIVE: CM Siddaramaiah Reminisces His Advocate Days | Mysuru Bar Association | ನೆನಪು ಮೆಲುಕು ಹಾಕಿದ ಸಿದ್ರಾಮಯ್ಯ

    ಬಾಲಯ್ಯ ನಟನೆಯ ಕ್ಲಾಸಿಕ್ ಹಿಟ್​ ‘ಭೈರವ ದ್ವೀಪಂ’ ಚಿತ್ರವನ್ನು ಮತ್ತೊಮ್ಮೆ ಅಭಿಮಾನಿಗಳ ಮುಂದೆ ಮರು ಬಿಡುಗಡೆಗೊಳಿಸುವ ಮುಖೇನ ತರಲಾಗುವುದು ಎಂದು ಚಿತ್ರತಂಡ ಈ ಹಿಂದೆಯೇ ತಿಳಿಸಿತ್ತು. ಆದ್ರೆ, ಇದೀಗ ಚಿತ್ರ ತಯಾರಕರು ರಿ-ರಿಲೀಸ್​ ಅನ್ನು ದಿಢೀರ್​ ರದ್ದಗೊಳಿಸಿದ್ದಾರೆ. ಈ ಬಗ್ಗೆ ವಿಷಾದ ವ್ಯಕ್ತಪಡಿಸಿದ ಅವರು, ಕಳಪೆ ಮುಂಗಡ ಬುಕಿಂಗ್‌ಗಳ ಕಾರಣದಿಂದಾಗಿ ನವೆಂಬರ್ 2023ಕ್ಕೆ ಮರು ನಿಗದಿಪಡಿಸಲಾಗಿದೆ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ರಾಜಕಾರಣದಿಂದ ಹೆಜ್ಜೆ ಹೊರಗಿಟ್ಟಿದ್ದೇನೆ ಎಂಬ ಭಾವನೆ ಬೇಡ – ನಿಖಿಲ್ ಕುಮಾರಸ್ವಾಮಿ ಸ್ಪಷ್ಟನೆ

    ಸದ್ಯ ಅನಿಲ್ ರವಿಪುಡಿ ನಿರ್ದೇಶನದ ಆಕ್ಷನ್ ಜಾನರ್​ನ ‘ಭಗವಂತ ಕೇಸರಿ’ ಚಿತ್ರವು ಅಕ್ಟೋಬರ್ 19, 2023 ರಂದು ಅದ್ಧೂರಿಯಾಗಿ ಬಿಡುಗಡೆಯಾಗಲು ಸಿದ್ಧವಾಗಿದೆ. ಚಿತ್ರದಲ್ಲಿ ಬಾಲಯ್ಯಗೆ ನಾಯಕಿಯಾಗಿ ಕಾಜಲ್​ ಅಗರ್​ವಾಲ್​ ಅಭಿನಯಿಸಿದ್ದಾರೆ. ಅರ್ಜುನ್​ ರಾಂಪಾಲ್​, ಸರತ್​ ಕುಮಾರ್​, ಟಿ.ಎನ್​. ಬಾಲಕೃಷ್ಣ, ಶ್ರೀಲೀಲಾ ಸೇರಿದಂತೆ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ,(ಏಜೆನ್ಸೀಸ್).

    ಮರಗಳ್ಳತನಕ್ಕೆ ಮಾಸ್ಟರ್​ ಪ್ಲ್ಯಾನ್​; ಮಾವು ಸೇರಿದಂತೆ 5 ಜಾತಿಯ ಮರ ಕಡಿಯಲು ನಿಷೇಧ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts