More

    ಪರದೆ ಪದ್ಧತಿಯಿಂದ ಉತ್ತಮ ಆದಾಯ

    ಶ್ರೀರಂಗಪಟ್ಟಣ: ಜಿಲ್ಲೆಯ ರೈತರು ಪರದೆ ಪದ್ಧತಿಯಲ್ಲಿ ಸಾವಯವ ತೋಟಗಾರಿಕೆ ಬೆಳೆಗಳ ಕೃಷಿ ಆರಂಭಿಸುವ ಮೂಲಕ ಉತ್ತಮ ಇಳುವರಿಯೊಂದಿಗೆ ಆದಾಯಗಳಿಸಲು ಅವಕಾಶವಿದೆ ಎಂದು ಕೃಷಿ ವಿಜ್ಞಾನಿ ಹಾಗೂ ಕಾವೇರಿ ಕನ್ಯಾಗುರುಕುಲ ಸಂಸ್ಥಾಪಕ ಕೆ.ಕೆ.ಸುಬ್ರಮಣ್ಯ ತಿಳಿಸಿದರು.
    ತಾಲೂಕಿನ ಬೊಮ್ಮೂರು ಅಗ್ರಹಾರ ಹೊರವಲಯದ ತಮ್ಮ ಗುರುಕುಲ ಬಳಿ ತಾಲೂಕಿನ ರೈತರೊಂದಿಗೆ ಆಯೋಜಿಸಿದ್ದ ಹೃದಯಸ್ಥ ಸರಳ ಪ್ರಾತಕ್ಷಿತೆ ಕಾರ್ಯಾಗಾರದಲ್ಲಿ ಮಾತನಾಡಿದರು.


    ಉತ್ತರ ಭಾರತದ ಹಲವೆಡೆ ಪ್ರಸಿದ್ಧಿಯಾಗಿರುವ ಪರದೆ ಪದ್ಧತಿಯ ತೋಟಗಾರಿಕೆ ಕೃಷಿಯನ್ನು ತಾಲೂಕಿನಲ್ಲಿ ಅಳವಡಿಕೊಂಡಿದ್ದಾರೆ. ಹೈದರಾಬಾದ್ ಮೂಲದ ರಾಜಕುಮಾರ್ ಚೌಹಾಣ್ ಅವರು ಸೂಕ್ಷ್ಮಹವಾಮಾನದಲ್ಲಿ ವಿದೇಶಿ ತಳಿಯ ಸಾವಯವ ಸೌತೆಕಾಯಿ ಬೆಳೆದು ಸಮೃದ್ದ ಇಳುವರಿಯೊಂದಿಗೆ ಉತ್ತಮ ಲಾಭ ಕಂಡುಕೊಂಡಿದ್ದಾರೆ. ಈ ಹಿಂದೆ ಇದ್ದ ಹಸಿರು ಮನೆ ಪ್ರಯೋಗ ಹಾಗೂ ಪಾಲಿಹೌಸ್‌ಗಳು ನಮ್ಮ ಪರಿಸರಕ್ಕೆ ಹೊಂದಿಕೊಳ್ಳದ ಕಾರಣ ಅವುಗಳಲ್ಲಿ ಕೆಲ ವೈಫಲ್ಯತೆಗಳಿವೆ. ಈ ರೀತಿ ಬಿಳಿ ಪರದೆ(ನೆಟ್‌ಹೌಸ್)ಪದ್ಧತಿಯಲ್ಲಿ ಬೆಳೆಗಳಿಗೆ ಕೀಟಗಳು ಹಾಗೂ ಹವಾಮಾನದ ಏರುಪೇರುಗಳಿಂದ ರಕ್ಷಣೆ ನೀಡಬಹುದಾಗಿದೆ. ಈ ಆಧುನಿಕ ತೋಟಗಾರಿಕಾ ಕೃಷಿಯನ್ನು ಗುಜರಾತ್ ಮೂಲದ ಹೃದಯಸ್ಥ ಎಂಬ ಕಂಪನಿ ಪರಿಚಯಿಸುವ ಜತೆಗೆ ಟೊಮ್ಯಾಟೋ, ಬೀನ್ಸ್ ಸೇರಿದಂತೆ ಹಲವು ಬಿತ್ತನೆ ಬೀಜಗಳು, ಕೃಷಿ ವಿಧಾನ, ಅವಶ್ಯಬಿದ್ದಲ್ಲಿ ನಿರ್ವಹಣೆ ಮತ್ತು ಕಟಾವಿಗೆ ಕೂಲಿ ಕಾರ್ಮಿಕರನ್ನು ಸಹ ಒದಗಿಸಿ ಜತೆಗೆ ಮಾರುಕಟ್ಟೆಗೆ ರವಾನಿಸಿ ಉತ್ತಮ ಬೆಲೆ ಕೊಡಿಸಲಿದೆ. ಹೀಗಾಗಿ ಅವಶ್ಯ ಹಾಗೂ ಅನೂಕೂಲ ಮಾರ್ಪಾಡುಗೊಂಡಲ್ಲಿ ಅಧಿಕ ಆದಾಯಗಳಿಸಲು ಸಹಕಾರಿಯಾಗಲಿದೆ ಎಂದರು.


    ಹೃದಯಸ್ಥ ಕಂಪನಿ ನಿರ್ದೇಶಕ ಬಿಂದೇಶ್ ಭಾಯಿ ಮಾತನಾಡಿ, ಗುಜರಾತ್ ಸೇರಿದಂತೆ ಉತ್ತರ ಭಾರತದ ಹಲವೆಡೆ ಈಗಾಗಲೇ ಇಂತಹ ಪದ್ಧ್ದತಿಯಲ್ಲಿ ಸಾವಿರಾರು ರೈತರು ಆತ್ಯಾಧುನಿಕ ಶೈಲಿಯಲ್ಲಿ ಕೃಷಿ ಆರಂಭಿಸಿದ್ದು, ಅವರೊಂದಿಗೆ ಬಿತ್ತನೆಯಿಂದ, ಮಾರುಕಟ್ಟೆ ಹಾಗೂ ಆದಾಯಗಳಿಕೆವರೆಗೂ ಕಂಪೆನಿ ನಿಂತಿದೆ. 1 ಎಕರೆ ಅಳವಡಿಕೆಗೆ ಇದರ ವೆಚ್ಚ 15 ಲಕ್ಷ ರೂ. ತಗುಲಲಿದ್ದು, ಹಲವಾರು ವರ್ಷ ಸದೃಢವಾಗಿರಲಿದೆ. ಪ್ರಸ್ತುತ ಕರ್ನಾಟಕದಲ್ಲಿ ಮೊದಲ ಬಾರಿಗೆ ಶ್ರೀರಂಗಪಟ್ಟಣದಲ್ಲಿ ರೈತ ರಾಜಕುಮಾರ್ ಚೌಹಣ್ ವಿದೇಶಿ ಸೌತೆಕಾಯಿ ಬೆಳೆಯಿಂದ ಪ್ರಾರಂಭಿಸಿ 1 ತಿಂಗಳಿನಿಂದಲೇ ಆದಾಯ ಗಳಿಕೆಯಲ್ಲಿ ನಿರತರಾಗಿದ್ದಾರೆ ಎಂದರು.


    ಗುಜರಾತಿನ ಹೃದಯಸ್ಥ ಕಂಪನಿ ಮುಖ್ಯಸ್ಥರಾದ ಕಮಲೇಶ್ ಭಾಯಿ, ಹರ್ಷದ್ ಭಾಯಿ, ಡಿವೈಎಸ್ಪಿ ವಿಕ್ರಂ, ಕೃಷಿ ಇಲಾಖೆ ಸಹಾಯಕ ನಿರ್ದೆಶಕಿ ಪ್ರಿಯದರ್ಶಿನಿ, ಭವಾನಿ ಇಂಡಸ್ಟ್ರೀಸ್ ಮುಖ್ಯಸ್ಥ ಮೋಹನ್‌ಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts