More

    ಜೂಡ್ ಬೆಲ್ಲಿಂಗ್ ಹ್ಯಾಮ್ ಬೈಸಿಕಲ್ ಕಿಕ್: ಎಂಟರ ಘಟ್ಟಕ್ಕೇರಿದ ಸ್ಪೇನ್, ಇಂಗ್ಲೆಂಡ್

    ಕಲೋನ್: ಆರಂಭಿಕ ಹಿನ್ನಡೆಯಿಂದ ಪುಟಿದೆದ್ದ ಮೂರು ಬಾರಿಯ ಚಾಂಪಿಯನ್ ಸ್ಪೇನ್ ತಂಡ ಪ್ರತಿಷ್ಠಿತ ಯುರೋ ಕಪ್ ುಟ್‌ಬಾಲ್ ಟೂರ್ನಿಯಲ್ಲಿ ಕ್ವಾರ್ಟರ್‌ೈನಲ್‌ಗೇರಿದೆ. ಭಾನುವಾರ ನಡೆದ 16ರ ಘಟ್ಟದ ಪಂದ್ಯದಲ್ಲಿ ಸ್ಪೇನ್ 4-1 ಗೋಲುಗಳಿಂದ ಜಾರ್ಜಿಯಾ ತಂಡವನ್ನು ಮಣಿಸಿತು. ಇದರೊಂದಿಗೆ ಟೂರ್ನಿಯಲ್ಲಿ ಮೊದಲ ಬಾರಿ ಕಣಕ್ಕಿಳಿದಿದ್ದ ಜಾರ್ಜಿಯಾ ತಂಡದ ಹೋರಾಟ ಕೊನೆಗೊಂಡಿದೆ.

    ಪಂದ್ಯದ 18ನೇ ನಿಮಿಷದಲ್ಲಿ ಸ್ವಯಂಕೃತ ಪ್ರಮಾದದಿಂದಾಗಿ ರಾಬಿನ್ ಲೆ ನಾರ್ಮಂಡ್ ಸ್ವಗೋಲು ದಾಖಲಿಸಿ ಜಾರ್ಜಿಯಾಗೆ ಅಚ್ಚರಿಯ ಮುನ್ನಡೆ ಒದಗಿಸಿದರು. ಒಂದು ಪಂದ್ಯದ ನಿಷೇಧದಿಂದ ಹಿಂತಿರುಗಿದ ರೋಡ್ರಿ 39ನೇ ನಿಮಿಷದಲ್ಲಿ ಬಾಕ್ಸ್‌ನ ಹೊರಗಿನಿಂದ ಚೆಂಡನ್ನು ಗೋಲು ಪೆಟ್ಟಿಗೆ ಒಳಗೆ ಸೇರಿಸಿ ಸಮಬಲ ತಂದರು. ನಂತರ ಮಿಡ್‌ಫೀಲ್ಡರ್ ಫ್ಯಾಬಿಯಾನ್ ರೂಯಿಜ್ 51ನೇ ನಿಮಿಷದಲ್ಲಿ ಸ್ಪೇನ್‌ಗೆ ಮೊದಲ ಬಾರಿ ಮುನ್ನಡೆ ತಂದುಕೊಟ್ಟರು.

    ಇದರೊಂದಿಗೆ ಪಂದ್ಯದಲ್ಲಿ ಕಂಬ್ಯಾಕ್ ಮಾಡಿದ ಸ್ಪೇನ್, ಜಾರ್ಜಿಯಾ ಎದುರು ಹಿಡಿತ ಸಾಧಿಸಿತು. ನಿಕೊ ವಿಲಿಯಮ್ಸ್ (75ನೇ ನಿಮಿಷ) ಮತ್ತು ಬದಲಿ ಆಟಗಾರನಾಗಿ ಕಣಕ್ಕಿಳಿದ ಡ್ಯಾನಿ ಒಲಮೊ (83) ಜಯದ ಅಂತರ ಹಿಗ್ಗಿಸಿದರು. ಪಂದ್ಯದ ಕೊನೆಯ 20 ನಿಮಿಷ ಸ್ಪೇನ್ ನಿಕಟ ಸ್ಪರ್ಧೆ ಎದುರಿಸಿತು.
    ಶುಕ್ರವಾರ ಸ್ಟಟ್‌ಗಾರ್ಟ್‌ನಲ್ಲಿ ನಡೆಯಲಿರುವ ಕ್ವಾರ್ಟರ್‌ಫೈನಲ್‌ನಲ್ಲಿ ಸ್ಪೇನ್, ಆತಿಥೇಯ ಜರ್ಮನಿ ಸವಾಲು ಎದುರಿಸಲಿದೆ. 2008ರ ಯುರೋ ಕಪ್‌ನ ೈನಲ್‌ನ ಮರುಪಂದ್ಯ ಇದಾಗಿದ್ದು, ಜರ್ಮನಿಯನ್ನು 1-0 ಗೋಲುಗಳಿಂದ ಮಣಿಸಿದ ಸ್ಪೇನ್ ಅಂತಾರಾಷ್ಟ್ರೀಯ ುಟ್‌ಬಾಲ್‌ನಲ್ಲಿ ತನ್ನ ಸುವರ್ಣಯುಗದ ಆರಂಭ ಕಂಡಿತ್ತು.

    ಇಂಗ್ಲೆಂಡ್ ಗೆಲ್ಲಿಸಿದ ಬೆಲ್ಲಿಂಗ್‌ಹ್ಯಾಮ್
    ಗೆಲ್ಸೆನ್‌ಕಿರ್ಚೆನ್ (ಜರ್ಮನಿ): ಇಂಜುರಿ ಟೈಮ್‌ನಲ್ಲಿ ಜೂಡ್ ಬೆಲ್ಲಿಂಗ್ ಹ್ಯಾಮ್ ಅವರ ಅದ್ಭುತ ಓವರ್ ಹೆಡ್ ಕಿಕ್ ಗೋಲಿನ ನೆರವಿನಿಂದ ಇಂಗ್ಲೆಂಡ್ ತಂಡ ಯುರೋ ಕಪ್‌ನಲ್ಲಿ ಸೋಲಿನಿಂದ ಪಾರಾಗಿದೆ. ಭಾನುವಾರ ನಡೆದ 16ರ ಘಟ್ಟದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಸ್ಲೋವಾಕಿಯಾ ವಿರುದ್ಧ 2-1 ಅಂತರದಿಂದ ಗೆದ್ದು ಬೀಗಿದೆ. ಇದರೊಂದಿಗೆ 1966ರ ಬಳಿಕ ಪ್ರಮುಖ ಟ್ರೋಫಿ ಜಯಿಸುವ ಭರವಸೆಯೂ ಜೀವಂತವಾಗಿದೆ.

    2020ರ ಆವೃತ್ತಿ ರನ್ನರ್ ಅಪ್ ಇಂಗ್ಲೆಂಡ್ ವೆಲ್ಟಿನ್ಸ್ ಅರೆನಾದಲ್ಲಿ ನಡೆದ ಪಂದ್ಯದಲ್ಲಿ ಇಂಜುರಿ ಸಮಯಕ್ಕೂ ಮುನ್ನ 0-1 ಗೋಲುಗಳ ಹಿನ್ನಡೆಯಿಂದ ಸೋಲಿನ ಭೀತಿ ಎದುರಿಸಿತು. 90 ನಿಮಿಷಗಳ ನಿಗದಿತ ಸಮಯದ ಬಳಿಕ 6 ನಿಮಿಷಗಳ ಇಂಜುರಿ ಸಮಯದಲ್ಲಿ ಕೈಲ್ ವಾಕರ್ ನೀಡಿದ ಲಾಂಗ್ ಥ್ರೋ ಪಾಸ್ ಅನ್ನು ಬಾಕ್ಸ್‌ನ ಬಳಿಯಿದ್ದ ಬೆಲ್ಲಿಂಗ್ ಹ್ಯಾಮ್ (90+5) ಓವರ್‌ಹೆಡ್ (ಬೈಸಿಕಲ್)ಕಿಕ್ ಮೂಲಕ ಸ್ಲೋವಾಕಿಯಾ ಗೋಲು ಕೀಪರ್ ಮಾರ್ಟಿನ್ ಡುಬ್ರಾವ್ಕಾ ಅವರನ್ನು ವಂಚಿಸಿ ಚೆಂಡನ್ನು ಗೋಲು ಪೆಟ್ಟಿಗೆ ಸೇರಿಸಿದರು. ಇದು ಪಂದ್ಯವನ್ನು ಹೆಚ್ಚುವರಿ ಸಮಯಕ್ಕೆ ಕೊಂಡೊಯ್ಯಿತು. ಬಳಿಕ ನಾಯಕ ಹ್ಯಾರಿ ಕೇನ್ (91ನೇ ನಿಮಿಷ) ಇಂಗ್ಲೆಂಡ್ ಗೆಲುವಿನ ಗೋಲು ಸಿಡಿಸಿದರು.

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts