More

    ಬಿಡಿಎಯಿಂದ ಅದಾಲತ್ ನಡೆಸಲು ಚಿಂತನೆ: ಎನ್.ಎ.ಹ್ಯಾರಿಸ್

    ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಸಂಬಂಧಿಸಿದ ಪ್ರಕರಣಗಳಲ್ಲಿ ನಾಗರಿಕರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಶೀಘ್ರವೇ ಅದಾಲತ್ ಆರಂಭಿಸುವುದಾಗಿ ಸಂಸ್ಥೆಯ ಅಧ್ಯಕ್ಷ ಎನ್.ಎ.ಹ್ಯಾರಿಸ್ ತಿಳಿಸಿದ್ದಾರೆ.

    ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ವ್ಯವಸ್ಥೆಯಲ್ಲಿ ಸಾರ್ವಜನಿಕರಿಗೆ ತ್ವರಿತವಾಗಿ ಪರಿಹಾರ ಸಿಗುತ್ತಿಲ್ಲ ಎಂಬ ಆಕ್ಷೇಪ ಕೇಳಿಬಂದಿದೆ. ಜತೆಗೆ ಕೆಲವೊಂದು ಪ್ರಕರಣಗಳು ಹಲವು ವರ್ಷಗಳಿಂದ ಇತ್ಯರ್ಥವಾಗದೆ ಹಾಗೆಯೇ ಉಳಿದುಕೊಂಡಿದೆ. ಹೀಗಾಗಿ ಕಾಲಮಿತಿಯಲ್ಲಿ ಪರಿಹಾರ ನೀಡುವ ಹೊಸ ವ್ಯವಸ್ಥೆಯೊಂದಿಗೆ ಮಾಸಿಕವಾರು ಅದಾಲತ್ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದರು.

    ಬಿಡಿಎ ನಗರದ ವಿವಿಧ ಭಾಗಗಳಲ್ಲಿ ವಸತಿ ಸಮುಚ್ಚಯಗಳನ್ನು ನಿರ್ಮಿಸಿದೆ. ಅಲ್ಲಿ ಕೆಲ ಫ್ಲ್ಯಾಟ್‌ಗಳು ಮಾರಾಟವಾಗದೆ ಹಾಗೆಯೇ ಉಳಿದುಕೊಂಡಿವೆ. ಇವುಗಳನ್ನು ಸಾರ್ವಜನಿಕರಿಗೆ ವಿತರಿಸಲು ಈಗಾಗಲೇ ಮೇಳ ಆರಂಭಿಸಿ ಸ್ಥಳದಲ್ಲೇ ಹಂಚಿಕೆ ಹಾಗೂ ಪ್ರಮಾಣಪತ್ರ ನೀಡುವ ಉಪಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಫ್ಲ್ಯಾಟ್‌ಗಳು ಮಾರಾಟ ಮಾಡುವ ದೃಷ್ಟಿಯಿಂದ ಹೊಸ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗುವುದು. ಫ್ಲ್ಯಾಟ್ ಮಾರಾಟ ವಿಭಾಗಕ್ಕಾಗಿಯೇ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಹ್ಯಾರಿಸ್ ತಿಳಿಸಿದರು.

    ಸ್ಲಮ್ ನಿವಾಸಿಗಳಿಗೆ ಮಾಲೀಕತ್ವದ ಪತ್ರ:

    ಬೆಂಗಳೂರು ನಗರದ ವಿವಿಧೆಡೆ ಬಿಡಿಎಗೆ ಸೇರಿದ ಜಾಗಗಳಲ್ಲಿ ಕೆಲ ಸ್ಲಂಗಳು ಮೇಲೆದ್ದಿವೆ. ಇಲ್ಲಿ ನೂರಾರು ಮಂದಿ ವಾಸ್ತವ್ಯ ಹೂಡಿದ್ದಾರೆ. ಅವರಿಗೆ ಸೂರಿನ ಸೌಲಭ್ಯ ಕಲ್ಪಿಸಲು ನೈಜ ಲಾನುಭವಿಗಳಿಗೆ ಹಕ್ಕುಪತ್ರ ಒಳಗೊಂಡ ಮಾಲೀಕತ್ವದ ಪತ್ರಗಳನ್ನು ವಿತರಿಸಲು ಸಿದ್ಧತೆ ನಡೆಸಲಾಗಿದೆ. ಕಾನೂನು ಅಡ್ಡಿ ಬಾರದ ರೀತಿ ಹಾಗೂ ಹಾಲಿ ಲಾನುಭವಿಗಳು ತಮ್ಮ ಸ್ವತ್ತನ್ನು ವಿಸ್ತರಿಸುವ ಅಥವಾ ಮಾರಾಟ ಮಾಡುವ ಅಧಿಕಾರವನ್ನು ಹೊಂದಿರುತ್ತಾರೆ ಎಂದು ಬಿಡಿಎ ಅಧ್ಯಕ್ಷರು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts