More

    ಬಾಲ ಕಾರ್ಮಿಕರ ರಕ್ಷಣೆ ಪ್ರತಿಯೊಬ್ಬರ ಮೇಲಿದೆ; ನ್ಯಾಯಾಧೀಶೆ ಮೇಘಶ್ರೀ


    ರಾಣೆಬೆನ್ನೂರ: 6ರಿಂದ 18 ವರ್ಷದ ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಬೇಕು. ಯಾವುದೇ ಕಾರಣಕ್ಕೂ ಅಂಥವರನ್ನು ಕಾರ್ಖಾನೆ ಸೇರಿ ಇತರೆಡೆ ಕೆಲಸಗಳಿಗೆ ಸೇರಿಸಿಕೊಳ್ಳಬಾರದು. ಬಾಲಕರು ಕೆಲಸದಲ್ಲಿರುವುದು ಕಂಡು ಬಂದರೆ ಕೂಡಲೇ ಅವರನ್ನು ಶಾಲೆಗೆ ಸೇರಿಸುವ ಕಾರ್ಯ ಪ್ರತಿಯೊಬ್ಬರಿಂದಲೂ ಆಗಬೇಕು ಎಂದು ಇಲ್ಲಿಯ 2ನೇ ಹೆಚ್ಚುವರಿ ಜೆಎಂಎಂಸಿ ದಿವಾಣಿ ನ್ಯಾಯಾದೀಶೆ ಮೇಘಶ್ರೀ ಹೇಳಿದರು.
    ನಗರದಲ್ಲಿ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಅಂಗವಾಗಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ, ತಾಲೂಕು ಆಡಳಿತ, ಕಾರ್ಮಿಕ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಲಯನ್ಸ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರೌಢ ಶಾಲೆ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಜಾಗೃತಿ ಜಾಥಾ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
    ಯಾವುದೇ ವಿದ್ಯಾರ್ಥಿ ತಮ್ಮ ಮನೆ ಕೆಲಸ ಬಿಟ್ಟು ಇನ್ನಿತರ ಹೊರಗಿನ ಕಾರ್ಖಾನೆಗಳಲ್ಲಿ , ಬಾರ್‌ಗಳಲ್ಲಿ, ಇಟ್ಟಿಗೆ ತಯಾರಿಸುವುದರಲ್ಲಿ ಇನ್ನು ಬೇರೆ ಬೇರೆ ಹತ್ತಿರ ಕೆಲಸ ಮಾಡುತ್ತಿರುವಾಗ ಭಾರತೀಯ ಪ್ರಜೆಗಳಾದ ನಾವು ನಮ್ಮ ಕೈಯಲ್ಲಿ ಎಷ್ಟು ಪ್ರಯತ್ನವೋ ಅಷ್ಟು ಪ್ರಯತ್ನ ಮಾಡಿ ಶಾಲೆಗೆ ಹೋಗುವಂತೆ ಮಕ್ಕಳಿಗೆ ಮತ್ತು ಪಾಲಕರಿಗೆ ತಿಳಿ ಹೇಳಬೇಕು. ಅದು ಆಗದಿದ್ದರೆ ಪೋಲಿಸ್ ಇಲಾಖೆಯವರು ಕ್ರಮ ಕೈಗೊಳ್ಳುತ್ತಾರೆ. ಬಾಲ ಕಾರ್ಮಿಕರು ಕಂಡಾಗ ನಮ್ಮ ಸಹಾಯವಾಣಿ 1098ಗೆ ಕರೆ ಮಾಡಬೇಕು. ಇಲ್ಲವೇ ನ್ಯಾಯಾಲಯದಲ್ಲಿ ಬಂದು ತಾವು ಮೌಖಿಕವಾಗಿ ತಿಳಿಸಬೇಕು ಎಂದರು.
    ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್ ಪಾಟೀಲ, ಪ್ಯಾನಲ್ ವಕೀಲೆ ಜಯಶ್ರೀ ಎಚ್.ಆರ್., ಪ್ರಭುಲಿಂಗಪ್ಪ ಹಲಗೇರಿ, ಎಲ್.ಜಿ. ಶೆಟ್ಟರ್, ಬಿ.ಎನ್. ಪಾಟೀಲ, ಶಿವಪ್ಪ ಗುರಿಕಾರ, ಮಂಜು ನಾಯಕ, ಗುತ್ತೆಪ್ಪ ಹಳೇಮನಿ, ಮಹೇಶ ಕುಳಲಿ, ಅಕ್ರಂ ಅಲ್ಲಾಪುರ, ಲಕ್ಷ್ಮಣ ಕೆಂಗೊಂಡ ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts