More

    ಕೇದಾರನಾಥದ ಗಾಂಧಿ ಸರೋವರದಲ್ಲಿ ಹಿಮಕುಸಿತ; ತಪ್ಪಿದ ಭಾರೀ ಅನಾಹುತ

    ಡೆಹ್ರಾಡೂನ್​: ಉತ್ತರಾಖಂಡದ ಕೇದಾರನಾಥದಲ್ಲಿರುವ ಗಾಂಧಿ ಸರೋವರದಲ್ಲಿ ಭಾನುವಾರ(ಜೂನ್​​ 30) ಹಿಮಕುಸಿತ ಸಂಭವಿಸಿದೆ. ಯಾವುದೇ ಪ್ರಾಣ ಅಥವಾ ಆಸ್ತಿ ಹಾನಿಯಾಗಿಲ್ಲ ಎಂದು ರುದ್ರಪ್ರಯಾಗದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಡಾ.ವಿಶಾಖ ಅಶೋಕ್ ಭದನೆ ತಿಳಿಸಿದ್ದಾರೆ. ದೇವಾಲಯದ ಹಿಂಭಾಗದಲ್ಲಿರುವ ಪರ್ವತದಲ್ಲಿ ಹಠಾತ್​ ಹಿಮಕುಸಿತವಾಗಿದ್ದು, ಹಿಮವು ಹೆಚ್ಚಿನ ವೇಗದಲ್ಲಿ ಕೆಳಮುಖವಾಗಿ ಚಲಿಸುತ್ತಿದೆ. ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ಘಟನೆ ದೇವಸ್ಥಾನದ ಸುತ್ತ ನಿಂತಿದ್ದ ಜನರಲ್ಲಿ ಆತಂಕ ಸೃಷ್ಟಿಮಾಡಿತ್ತು.

    ಇದನ್ನು ಓದಿ: ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ವಿರುದ್ಧ ಯಾವುದೇ ಸಾಕ್ಷ್ಯವಿಲ್ಲ; ಸಂಸದ ಸಂಜಯ್​ ಸಿಂಗ್​ 

    ಉತ್ತರಾಖಂಡದಲ್ಲಿ ಚಾರ್ ಧಾಮ್​​​ ಯಾತ್ರೆ ಆರಂಭವಾದಾಗಿನಿಂದಲೂ ಭಕ್ತರ ದಂಡೇ ಹರಿದು ಬಂದಿದೆ. ಜೂನ್ 6 ರವರೆಗೆ 7 ಲಕ್ಷಕ್ಕೂ ಹೆಚ್ಚು ಭಕ್ತರು ಕೇದಾರನಾಥಕ್ಕೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಮೇ 10 ರಿಂದ ಕೇವಲ 28 ದಿನಗಳಲ್ಲಿ ಒಟ್ಟು 7,10,698 ಯಾತ್ರಿಕರು ವಿಶ್ವವಿಖ್ಯಾತ 11ನೇ ಜ್ಯೋತಿರ್ಲಿಂಗ ಕೇದಾರನಾಥ ಧಾಮಕ್ಕೆ ಪ್ರಯಾಣಿಸಿದ್ದಾರೆ ಎಂದು ರುದ್ರಪ್ರಯಾಗದ ಜಿಲ್ಲಾ ಮ್ಯಾಜಿಸ್ಟ್ರೇಟ್ ತಿಳಿಸಿದ್ದಾರೆ ಎಂದು ಪಿಟಿಐನಲ್ಲಿ ವರದಿಯಾಗಿದೆ.

    ಅಂದ್ಹಾಗೆ, ಕೇದಾರನಾಥದಲ್ಲಿ ಇಂತಹ ಘಟನೆಗಳು ಇದೇ ಮೊದಲೆನಲ್ಲ. ಈ ಹಿಂದೆಯೂ ಕೇದಾರನಾಥದಲ್ಲಿ ಪ್ರಕೃತಿ ವಿಕೋಪಗಳು ಸಂಭವಿಸಿವೆ. 2013ರಲ್ಲಿ ನಡೆದ ದುರಂತ, ಕೇದಾರನಾಥ ದೇವಸ್ಥಾನದಿಂದ ಹಲವಾರು ಕಿಲೋಮೀಟರ್ ಎತ್ತರದಲ್ಲಿರುವ ಚೋರಬರಿ ಸರೋವರದಲ್ಲಿ ಮೇಘಸ್ಫೋಟದಿಂದಾಗಿ ಮಂದಾಕಿನಿ ನದಿ ಉಕ್ಕಿ ಹರಿದಿತ್ತು. ಈ ಘಟನೆಯಲ್ಲಿ ಹಲವಾರು ಮಂದಿ ಪ್ರಾಣ ಕಳೆದುಕೊಂಡು ಸಾವಿರಾರು ಮಂದಿ ಗಾಯಗೊಂಡಿದ್ದರು.

    ಹಿಂದೂ ತೀರ್ಥಯಾತ್ರೆ ಚಾರ್ ಧಾಮ್ ಸರ್ಕ್ಯೂಟ್ ನಾಲ್ಕು ತಾಣಗಳನ್ನು ಒಳಗೊಂಡಿದೆ. ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥ್. ಕೇದಾರನಾಥ ಭಾರತದ 12 ಜ್ಯೋತಿರ್ಲಿಂಗಗಳಲ್ಲಿ ಒಂದೆಂದು ಪೂಜಿಸಲ್ಪಟ್ಟಿದೆ. ನಾಲ್ಕು ಚೋಟಾ ಸರ್ ಧಾಮ್ ಯಾತ್ರಾ ಸ್ಥಳಗಳಲ್ಲಿ ಇದು ಅತ್ಯಂತ ದೂರದಲ್ಲಿದೆ. (ಏಜೆನ್ಸೀಸ್​​)

    ಕಲ್ಕಿ 2898 ಎಡಿ ಸಿನಿಮಾ ಬಗ್ಗೆ ಟಾಲಿವುಡ್​ ಐಕಾನ್​ ಸ್ಟಾರ್​​ ಅಲ್ಲು ಅರ್ಜುನ್​ ಹೇಳಿದ್ದೇನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts