More

    ಮೂರು ದಿನದಲ್ಲಿ 60 ಮಂದಿಯನ್ನು ಮದ್ವೆಯಾದ ಮಹಿಳೆ! ಕಾರಣ ಕೇಳಿದ್ರೆ ನಿಮ್ಮ ಹುಬ್ಬೇರೋದು ಖಚಿತ

    ಸಿಡ್ನಿ: ಕೇವಲ ಮೂರು ದಿನದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 60 ಮದುವೆಯಾಗುವ ಮೂಲಕ ಮದುವೆ ಎಂಬುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂಬ ಮಾತನ್ನು ಇಲ್ಲೊಬ್ಬ ಮಹಿಳೆ ಅಕ್ಷರಶಃ ಸುಳ್ಳು ಮಾಡಿದ್ದಾಳೆ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆಗೂ ಗುರಿಯಾಗಿದ್ದಾಳೆ.

    ಆಸ್ಟ್ರೇಲಿಯಾ ಮೂಲದ ಕಾರ್ಲಿ ಸಾರಿ ಹೆಸರಿನ 40 ವರ್ಷದ ಮಹಿಳೆ ವೃತ್ತಿಯಲ್ಲಿ ಮದುವೆಯ ಫೋಟೋಗ್ರಾಫರ್ ಆಗಿದ್ದು, ಕಳೆದ ಮೂರು ದಿನಗಳ ಮದುವೆ ಸಮಾರಂಭದಲ್ಲಿ ಒಟ್ಟು 60 ಮಂದಿಯನ್ನು ವಿವಾಹವಾಗಿದ್ದಾರೆ. ಅಷ್ಟಕ್ಕೂ ಆಕೆ ಮೂರು ದಿನಗಳಲ್ಲಿ ಇಷ್ಟು ಜನರನ್ನು ಏಕೆ ಮದುವೆಯಾದಳು? ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು. ಅದಕ್ಕೆ ಕಾರಣವನ್ನು ಸಹ ಆಕೆ ನೀಡಿದ್ದಾಳೆ. ಅದೇನೆಂದು ನಾವೀಗ ತಿಳಿಯೋಣ.

    ಅಂದಹಾಗೆ ಕಾರ್ಲಿ ಸಾರಿ ಕೇವಲ ಪುರುಷರನ್ನು ಮಾತ್ರವಲ್ಲದೆ ಮಹಿಳೆಯರನ್ನೂ ಮದುವೆಯಾಗಿದ್ದಾಳೆ. ಈ ಸಂಗತಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿದೆ. ಭಾರಿ ಟೀಕೆಗಳಿಗೂ ಕ್ಯಾರೆ ಎನ್ನದ ಕಾರ್ಲಿ ಸಾರಿ, ತನ್ನ ನಿರ್ಧಾರದ ಬಗ್ಗೆ ತನಗೆ ಹೆಮ್ಮೆ ಇದೆ ಎನ್ನುವ ಮೂಲಕ ಟೀಕಿಸುವವರಿಗೆ ತಿರುಗೇಟು ನೀಡಿದ್ದಾಳೆ. ಮದುವೆಯಾದ ಎಲ್ಲರು ನನ್ನ ಜೀವನದಲ್ಲಿ ತುಂಬಾ ಮುಖ್ಯ ಎಂದು ಹೇಳಿದ್ದಾಳೆ. ಮದುವೆಗೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಕಾರ್ಲಿ ಸಾರಿ ಅನೇಕ ಮದುವೆಗಳಲ್ಲಿ ವೆಡ್ಡಿಂಗ್ ಫೋಟೋಗ್ರಾಫರ್ ಆಗಿ ಕೆಲಸ ಮಾಡಿದ್ದಾರೆ. ಆ ಮದುವೆಗಳಿಗೆ ಎಲ್ಲರೂ ಒಟ್ಟಿಗೆ ಸೇರುವುದು, ಹಾಡುಗಳನ್ನು ಹಾಡುವುದು, ನೃತ್ಯ ಮತ್ತು ಪಾರ್ಟಿಗಳು ಅಕೆಯನ್ನು ಮದುವೆಯಾಗಲು ಪ್ರಭಾವ ಬೀರಿದವು ಎಂದು ಹೇಳಿಕೊಂಡಿದ್ದಾಳೆ. ತನ್ನ ಮದುವೆಯನ್ನು ವಿಭಿನ್ನವಾಗಿ ಯೋಚಿಸಿದ ಆಕೆ ತನ್ನ ಸ್ನೇಹಿತರಿಗೆ ಮದುವೆ ಆಮಂತ್ರಣ ಪತ್ರಿಕೆಗಳನ್ನು ಕಳುಹಿಸಿ, ತನ್ನನ್ನು ಮದುವೆಯಾಗಲು ಬಯಸುವವರೆಲ್ಲ ತನ್ನ ಮದುವೆಗೆ ಅತಿಥಿಯಾಗಿ ಬಂದು ತನ್ನ ಜೀವನ ಸಂಗಾತಿಯಾಗುವಂತೆ ಕೇಳಿಕೊಂಡಳು.

    ಕಾರ್ಲಿ ಸಾರಿಯ ಕೋರಿಕೆಯಂತೆ, ಅವಳನ್ನು ಮದುವೆಯಾಗಲು ಉದ್ದೇಶಿಸಿರುವ 60 ಜನರು ಮಾತ್ರ ಮದುವೆಗೆ ಹಾಜರಾಗಿದ್ದರು. ಮೂರು ದಿನಗಳು ಕಾಲ ನಡೆದ ಸಮಾರಂಭದಲ್ಲಿ 60 ಜನರನ್ನು ಆಕೆ ಮದುವೆಯಾದಳು. ತನಗೆ ಒಬ್ಬ ಜೀವನ ಸಂಗಾತಿ ಸಾಕಾಗಲ್ಲ ಮತ್ತು ಒಬ್ಬನಿಗೆ ಮಾತ್ರ ತನ್ನ ಜೀವನವನ್ನು ಮುಡಿಪಾಗಿಡಲು ಬಯಸುವುದಿಲ್ಲ. ಅದಕ್ಕಾಗಿಯೇ 60 ಜನರನ್ನು ಮದುವೆಯಾಗಿದ್ದೇನೆ ಎಂದು ಕಾರ್ಲೆ ಸಾರಿ 60 ಜನರನ್ನು ಮದುವೆಯಾಗಲು ಹಿಂದಿರುವ ಕಾರಣವನ್ನು ಬಿಚ್ಚಿಟ್ಟಿದ್ದಾಳೆ.

    ಇನ್ನು ಮದುವೆಗೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಇದನ್ನು ನೋಡಿದ ನೆಟ್ಟಿಗರು ಇದು ಹುಚ್ಚುತನ ಎಂದು ಕಮೆಂಟ್ ಮಾಡುತ್ತಿದ್ದಾರೆ. (ಏಜೆನ್ಸೀಸ್​)

    ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಕೊಹ್ಲಿ ನಿವೃತ್ತಿ ಘೋಷಣೆ ಹಿಂದಿರುವ ಅಸಲಿ ಕಾರಣ ಇದು! ಬಿಸಿಸಿಐ ವಿರುದ್ಧ ಆಕ್ರೋಶ

    ಟಿ20 ವಿಶ್ವಕಪ್​ ಗೆದ್ದ ಬೆನ್ನಲ್ಲೇ ಪಿಚ್​ನಲ್ಲಿನ ಮಣ್ಣು ತಿಂದ ರೋಹಿತ್​ ಶರ್ಮ! ಹಿಟ್​ಮ್ಯಾನ್ ನಡೆಗೆ ಎಲ್ಲೆಡೆ ಮೆಚ್ಚುಗೆ​

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts