More

    ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಲು ಪ್ರಯತ್ನ

    ಲೋಕಾಪುರ: ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಆರೋಗ್ಯ ಸಚಿವ ದಿನೇಶ ಗುಂಡುರಾವ ಭರವಸೆ ನೀಡಿದರು.

    ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗುರುವಾರ ಭೇಟಿ ನೀಡಿ ಅವರು ಮಾತನಾಡಿ, ಆರೋಗ್ಯ ಕೇಂದ್ರಕ್ಕೆ ಬರುವ ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆ ನೀಡಲು ಸೂಚಿಸಿದರು.

    ಕೇಂದ್ರದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಬಾಣಂತಿಯರಿಗೆ ಉತ್ತಮ ಚಿಕಿತ್ಸೆ ನೀಡಲು ಕ್ರಮಕೈಗೊಳ್ಳಬೇಕು. ಆರೋಗ್ಯ ಕೇಂದ್ರದ ಜಾಗದ ವಿವಾಧ ಬಗೆಹರಿಸಿಕೊಂಡು ಸರ್ವೇ ನಡೆಸಿ ಸುತ್ತಲೂ ತಂತಿ ಬೇಲಿ ನಿರ್ಮಿಸಲು ತಿಳಿಸಿದರು.

    ಸಚಿವರ ಮುಂದ ಸಾರ್ವಜನಿಕರು ಪ್ರಾಥಮಿಕ ಕೇಂದ್ರದ ಸಮಸ್ಯೆಯ ಬಗ್ಗೆ ವಿವರಿಸಿ, ಲೋಕಾಪುರ ಸೇರಿ ಸುತ್ತಲಿನ 50 ಸಾವಿರ ಜನರು ಇದೇ ಆರೋಗ್ಯ ಕೇಂದ್ರಕ್ಕೆ ಆಗಮಿಸುತ್ತಿದ್ದಾರೆ. ನಿತ್ಯ 200 ರಿಂದ 300 ಹೊರ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೆದ್ದಾರಿ ಇರುವುದರಿಂದ ಅಪಘಾತಗಳು ಹೆಚ್ಚಾಗುತ್ತಿದ್ದು, ಈ ಕೇಂದ್ರದ ಮೇಲೆ ಹೆಚ್ಚಿನ ಒತ್ತಡವಿದ್ದು ಪ್ರಾಥಮಿಕ ಕೇಂದ್ರದಲ್ಲಿ 24 ಗಂಟೆಗಳವರೆಗೆ ಕಾಯಂ ನುರಿತ ಎಂಬಿಬಿಎಸ್ ಪದವಿಯ ಪಡೆದ ವೈದ್ಯಾಧಿಕಾರಿಗಳು, ಹೆರಿಗೆ ಮಾಡಿಸಿಕೊಳ್ಳಲು ನುರಿತ ಸೀ ತಜ್ಞರು ಇಲ್ಲ. ಹೀಗಾಗಿ ಮುಧೋಳ ಅಥವಾ ಬಾಗಲಕೋಟೆಗೆ ಹೋಗಬೇಕಿದೆ. ಇದರಿಂದ ಸಾರ್ವಜನಿಕರು ಬಹಳ ತೊಂದರೆಯಾಗುತ್ತಿದೆ ಎಂದು ಅಳಲು ತೋಡಿಕೊಂಡರು.

    ಸ್ಥಳದಲ್ಲಿದ್ದ ಡಿಎಚ್‌ಒ ಡಾ. ಜಯಶ್ರೀ ಎಮ್ಮಿ ಅವರಿಗೆ ಲೋಕಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಾಯಂ 24 ಗಂಟೆಗಳವರೆಗೂ ಕಾರ್ಯನಿರ್ವಹಿಸಲು ಎಂಬಿಬಿಎಸ್ ವೈದ್ಯರನ್ನು ನಿಯೋಜಿಸಲು ಸೂಚಿಸಿದರು.
    ಭ್ರೂಣ ಹತ್ಯೆಗಳು ಸಾಮಾಜಿಕ ಪಿಡುಗಾಗಿದ್ದು, ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದ ಭ್ರೂಣ ಹತ್ಯೆಗಳ ಬಗ್ಗೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು. ಆರೋಗ್ಯ ಮತ್ತು ಪೊಲೀಸ್ ಇಲಾಖೆ ಕ್ರಮ ಜರುಗಿಸಿದ್ದಾರೆ. ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಇಲಾಖೆ ವತಿಯಿಂದ ಕಟ್ಟು ನಿಟ್ಟಿನ ತಪಾಸಣೆ ನಡೆಸಲಾಗುವುದು. ಬಾಗಲಕೋಟೆಯಲ್ಲಿ ನಡೆಯುವ ಸಭೆಯಲ್ಲಿ ಈ ವಿಷಯ ಕುರಿತು ಸಮಗ್ರವಾಗಿ ಚರ್ಚಿಸಲಾಗುವುದು ಎಂದರು.

    ಜಿಲ್ಲಾ ಬಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ ಅವರು ಲೋಕಾಪುರ ಹಾಗೂ ಸುತ್ತಲಿನ ಗ್ರಾಮಸ್ಥರ ಪರ ಸಚಿವರಿಗೆ ಮನವಿ ಸಲ್ಲಿಸಿ ಮಾತನಾಡಿ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಒಬ್ಬ ಆಯುಷ್ ವೈದ್ಯಾಧಿಕಾರಿ ಇರುವುದರಿಂದ ತೀವ್ರ ತೊಂದರೆಯಾಗಿದೆ. ಶೀಘ್ರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿಸಲು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ಇದಕ್ಕೆ ಸಚಿವರು ಸ್ಪಂದಿಸಿ ಬೇಗನೆ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.

    ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷಾ ಗುಪ್ತಾ, ಡಿಡಿ ಡಾ. ಅನಂತ ದೇಸಾಯಿ, ಎಂಡಿಟಿಎಚ್‌ಎಂ ಡಾ. ನವೀನ್ ಭಟ್, ವಿಭಾಗೀಯ ನಿರ್ದೇಶಕ ಡಾ. ಶಶಿಕಾಂತ ಮುನ್ಯಾಳ, ತಾಲೂಕು ಆರೋಗ್ಯಾಧಿಕಾರಿ ಡಾ. ವೆಂಕಟೇಶ ಮಲಘಾಣ, ಡಾ. ಸುನೀಲ ಬೆನ್ನೂರ, ಡಾ. ವಿನಯ ಕುಲಕರ್ಣಿ, ಬಾಗಲಕೋಟೆ ಜಿಲ್ಲೆಯ ಆರೋಗ್ಯ ಇಲಾಖೆಯ ಎಲ್ಲ ಕಾರ್ಯಕ್ರಮಗಳ ಅನುಷ್ಠಾನದ ಅಧಿಕಾರಿಗಳು, ಮುಖಂಡರಾದ ಲೋಕಣ್ಣ ಕೊಪ್ಪದ, ಆನಂದ ಹಿರೇಮಠ, ಗೋಪಾಲಗೌಡ ಪಾಟೀಲ, ಮುತ್ತಪ್ಪ ಚೌಧರಿ, ಭೀಮನಗೌಡ ಪಾಟೀಲ, ಕೆ.ಕೆ. ಭಾಗವಾನ, ಕುಮಾರ ಕಾಳಮ್ಮನವರ, ಶಬ್ಬೀರ್ ಭಾಗವಾನ, ಲೋಕಣ್ಣ ಉಳ್ಳಾಗಡ್ಡಿ, ಶಿವಾನಂದ ದಂಡಿನ, ಮಾನಿಂಗಪ್ಪ ಹುಂಡೇಕಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts