More

    ರಾ ಕಿರುಚಿತ್ರಕ್ಕೆ ಅಸಿಫ್ ಅವಾರ್ಡ್: ಮೊದಲ ತುಳು ಚಿತ್ರ ಹೆಗ್ಗಳಿಕೆ

    ಕುಂಬಳೆ: ಕೋಲ್ಕತ್ತದ ಅಮದೀರ್ ಇಂಟರ್‌ನ್ಯಾಶನಲ್ ಶಾರ್ಟ್ ಫಿಲ್ಮ್ ಫೆಸ್ಟಿವಲ್(ಅಸಿಫ್)ನಲ್ಲಿ ಕಾಸರಗೋಡಿನ ಸುಖದ ಕ್ರಿಯೇಶನ್ಸ್‌ನ ಕಣ್ಯಾರ ಫಿಲ್ಮ್ ನಿರ್ಮಿಸಿದ ರಾ ತುಳು ಕಿರುಚಿತ್ರ ಅತ್ಯುತ್ತಮ ಸ್ಕ್ರೀನ್ ಪ್ಲೇ ಬಹುಮಾನ ಗೆದ್ದುಕೊಂಡಿದೆ.

    ಗೌತಮ್ ಶೆಟ್ಟಿ ಪುತ್ತಿಗೆ ನಿರ್ದೇಶಿಸಿರುವ ಈ ಕಿರುಚಿತ್ರ ಕಳೆದ ಫೆ.18ರಂದು ನೀರ್ಚಾಲಲ್ಲಿ ಬಿಡುಗಡೆಗೊಂಡಿತ್ತು. ಶಿವರಾಜ್ ಕುಲಾಲ್, ರಕ್ಷಣ್, ಅಭಿಷೇಕ್, ಚಿತ್ತರಂಜನ್, ಅಶ್ವಥ್ ಸಹ ನಿರ್ದೇಶನ ನೀಡಿರುವ ಕಿರುಚಿತ್ರಕ್ಕೆ ಮನೀಶ್ ವಿದ್ಯಾಗಿರಿ ಸಂಗೀತ ನಿರ್ದೇಶನ ನೀಡಿದ್ದಾರೆ. ಅವಿನೇಶ್ ಶೆಟ್ಟಿ ಹಾಡಿರುವ ಚಿತ್ರಕ್ಕೆ ಶಿವರಾಜ್ ಕುಲಾಲ್ ಸಂಗೀತ ನೀಡಿದ್ದಾರೆ. ಗೌತಮ್ ಶೆಟ್ಟಿ, ಪೃಥ್ವಿನ್ ಕೃಷ್ಣ ಪುದುಕೋಳಿ, ಸಂದೀಪ್, ಹವ್ಯಾಸ್, ಪ್ರದೀಪ್, ಕಿರಣ್ ಕಲಾಂಜಲಿ ನಟಿಸಿದ್ದಾರೆ. ಶಿವದಾಸ್ ಕಾಮತ್ ಚಿತ್ರಸಂಪಾದನೆ ಮಾಡಿದ್ದು, ದೀಕ್ಷಿತ್ ಕಾಸರಗೋಡು ಸಹಕಾರ ನೀಡಿದ್ದಾರೆ.

    ಬುಧವಾರ ಕೊಲ್ಕತ್ತಾದ ರಬೀಂದ್ರ ಸರಣಿ ಗಣೇಶ ಟಾಕೀಸಿನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಗೌತಮ್ ಶೆಟ್ಟಿ ಪುತ್ತಿಗೆ ಹಾಗೂ ಮನೀಶ್ ವಿದ್ಯಾಗಿರಿ ಅವರಿಗೆ ಅಸಿಫ್‌ನ ಪ್ರಮುಖರಾದ ಆಕಾಶ್ ಬ್ಯಾನರ್ಜಿ ಪ್ರಶಸ್ತಿ ನೀಡಿ ಗೌರವಿಸಿದರು. ಕಿರುಚಿತ್ರ ಉತ್ಸವದಲ್ಲಿ ಅಂತಾರಾಷ್ಟ್ರೀಯ ವಲಯದಿಂದ ಸಾವಿರದ ಮೂವತ್ತು ಚಿತ್ರಗಳು ಆಯ್ಕೆಗೆ ಬಂದಿದ್ದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts