ಇಂದಿನಿಂದ ಏಷ್ಯಾಕಪ್​ ಕ್ರಿಕೆಟ್​ ಹಬ್ಬ; ಪಾಕ್​-ನೇಪಾಳ ಉದ್ಘಾಟನಾ ಪಂದ್ಯ

ಮುಲ್ತಾನ್​/ಕೊಲಂಬೊ: ಉಪಖಂಡದ ಅತಿದೊಡ್ಡ ಕ್ರಿಕೆಟ್​ ಹಬ್ಬ ಎನಿಸಿರುವ ಏಷ್ಯಾಕಪ್​ ಟೂರ್ನಿಗೆ ವೇದಿಕೆ ಸಜ್ಜಾಗಿದೆ. ವಿಶ್ವಕಪ್​ ಸಿದ್ಧತೆ ದೃಷ್ಟಿಯಿಂದ ಈ ಬಾರಿ ಮತ್ತೆ ಏಕದಿನ ಮಾದರಿಗೆ ಟೂರ್ನಿ ಮರಳುತ್ತಿದೆ. ಬುಧವಾರ ಮುಲ್ತಾನ್​ನಲ್ಲಿ ನಡೆಯಲಿರುವ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಪಾಕಿಸ್ತಾನ ತಂಡ ನೇಪಾಳ ವಿರುದ್ಧ ಸೆಣಸಲಿದೆ. ಕಳೆದ ವರ್ಷದ ಟಿ20 ಏಷ್ಯಾಕಪ್​ನಲ್ಲಿ ಶ್ರೀಲಂಕಾ ಪ್ರಶಸ್ತಿ ಗೆದ್ದಿದ್ದರೂ, ಏಕದಿನ ಮಾದರಿಯಲ್ಲಿ 2018ರಲ್ಲಿ ನಡೆದ ಕೊನೇ ಏಷ್ಯಾಕಪ್​ನಲ್ಲಿ ಭಾರತ ಪ್ರಶಸ್ತಿ ಗೆದ್ದಿತ್ತು. ಹೀಗಾಗಿ ಭಾರತವನ್ನೇ ಹಾಲಿ ಚಾಂಪಿಯನ್​ ಮತ್ತು ಫೇವರಿಟ್​ ತಂಡವನ್ನಾಗಿ ಪರಿಗಣಿಸಬಹುದು. … Continue reading ಇಂದಿನಿಂದ ಏಷ್ಯಾಕಪ್​ ಕ್ರಿಕೆಟ್​ ಹಬ್ಬ; ಪಾಕ್​-ನೇಪಾಳ ಉದ್ಘಾಟನಾ ಪಂದ್ಯ