More

    ಅಶಕ್ತರಿಗೆ ಸೂಕ್ತ ನೆರವು : ರೋಟೆರಿಯನ್ ಪಾಲಾಕ್ಷ ಆಶಯ ; ಪದಗ್ರಹಣ ಸಮಾರಂಭ

    ಬ್ರಹ್ಮಾವರ: ರೋಟರಿ ಸಂಸ್ಥೆ ಸದಸ್ಯರು ಅನಗತ್ಯ ಸಮಯವನ್ನು ಒಳ್ಳೆ ಕೆಲಸಗಳಿಗೆ ಉಪಯೋಗ ಮಾಡಿ ಮತ್ತು ಸಮಾಜದಲ್ಲಿ ಅಶಕ್ತರನ್ನು ಗುರುತಿಸಿ ಅವರಿಗೆ ಸೂಕ್ತ ನೆರವು ನೀಡಿ ಮುಖ್ಯವಾಹಿನಿಗೆ ಬರುವಂತೆ ಮಾಡಬೇಕು ಎಂದು ರೋಟೆರಿಯನ್ ಪಾಲಾಕ್ಷ ಹೇಳಿದರು. ಬುಧವಾರ ರೋಟರಿ ಬ್ರಹ್ಮಾವರ 2024 -25 ನೇ ಸಾಲಿನ ಪದಗ್ರಹಣ ಸಮಾರಂಭದಲ್ಲಿ ರೋಟರಿಯ 52 ನೇ ಅಧ್ಯಕ್ಷ ಆರೂರು ಶ್ರೀಧರ ವಿ.ಶೆಟ್ಟಿ ಮತ್ತು ಕಾರ್ಯದರ್ಶಿ ರೋಟರಿ ಉದಯ ಪೂಜಾರಿ ಅವರಿಗೆ ಪದಗ್ರಹಣ ನೆರವೇರಿಸಿ ಮಾತನಾಡಿದರು.

    ನೂತನ ಸದಸ್ಯರ ಸೇರ್ಪಡೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ನಗದು ಪುರಸ್ಕಾರದೊಂದಿಗೆ ಗೌರವಿಸಲಾಯಿತು. ರೋವರ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ರೋಟರಿ ನಿಕಟಪೂರ್ವ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಅಸಿಸ್ಟೆಂಟ್ ಗವರ್ನರ್ ರಾಘವೇಂದ್ರ ಎಂ. ಸಾಮಗ, ಪಿ.ಎಚ್.ಎಫ್. ಆಲ್ವಿನ್ ಕ್ವಾಡ್ರಸ್, ವಲಯ ಪ್ರತಿನಿಧಿ ದಿನೇಶ್ ಕುಮಾರ್ ನಾಯರಿ, ವಿಜಯ ಶೆಟ್ಟಿ ಕಾಜ್ರಳ್ಳಿ, ಬ್ರಹ್ಮಾವರ ರೋಟರಿ ಕಾರ್ಯದರ್ಶಿ ಗುರುರಾಜ್ ನಾಯಕ್ ಉಪಸ್ಥಿತರಿದ್ದರು.

    ರೋಟರಿ ಆರೂರು ತಿಮ್ಮಪ್ಪ ಶೆಟ್ಟಿ, ಆಲ್ವಿನ್ ಅಂದ್ರಾದೆ ಸುಂದರ ರಾಮ ಶೆಟ್ಟಿ ಪರಿಚಯಿಸಿದರು. ಅಶೋಕ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
    ಬಡತನದಿಂದ ಬಟ್ಟೆ ಧರಿಸಲು ಕಷ್ಟಪಡುವ ಜನರು ಮತ್ತು ಸಿರಿತನದಿಂದ ಬಟ್ಟೆಯ ಪರಿವೆ ಇಲ್ಲದ ಜನರ ನಡುವಿನ ಸಮಾಜದ ಮುಂದೆ ರೋಟರಿ ಸಂಸ್ಥೆ ಜನಸೇವಕರಾಗಿ ಸಮಾನತೆ ಸೃಷ್ಟಿಸುವ ಕಾರ್ಯ ಮಾಡಬೇಕಾಗಿದೆ.
    -ಆರೂರು ಶ್ರೀಧರ ವಿ.ಶೆಟ್ಟಿ, ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts