More

    ಬಿಹಾರದಲ್ಲಿ ಮತ್ತೊಂದು ಸೇತುವೆ ಕುಸಿತ..!

    ಪಾಟ್ನಾ: ಬಿಹಾರದಲ್ಲಿ ಕಳಪೆ ಕಾಮಗಾರಿಗಳಿಂದಾಗಿ ಸೇತುವೆಗಳ ಕುಸಿತದ ಸರಣಿ ಮುಂದುವರಿದಿದೆ. ಅರಾರಿಯಾದಲ್ಲಿ ಬಕ್ರಾ ನದಿ ಮೇಲೆ ನಿರ್ಮಾಣ ಹಂತದ ಸೇತುವೆ ಇತ್ತೀಚೆಗೆ ಕುಸಿತವಾದ ಬೆನ್ನಲ್ಲೇ ಶನಿವಾರದಂದು ಸಿವಾನ್ ಜಿಲ್ಲೆಯ ಗಂಡಕ್ ಕಾಲುವೆಯ ಮೇಲಿನ ಮತ್ತೊಂದು ಸೇತುವೆ ಕುಸಿದಿದೆ. ಈ ಕುಸಿತವು ಸುತ್ತಮುತ್ತಲಿನ ಪ್ರದೇಶದಲ್ಲಿ ಭೀತಿ ಉಂಟುಮಾಡಿದೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

    ಇದನ್ನೂ ಓದಿ: ಅರಳಿ ಎಲೆ ಮೇಲೆ ಅರಳಿದ ಯೋಗಾಸನಗಳು! ಶಿವಕುಮಾರ್ ಪ್ರತಿಭೆಗೆ ನೆಟ್ಟಿಗರು ಫಿದಾ..

    ದಾರೋಂಡಾ ಬ್ಲಾಕ್‌ನ ರಾಮಗಢ ಪಂಚಾಯತ್‌ ವ್ಯಾಪ್ತಿಯಲ್ಲಿ ಈ ಸೇತುವೆ ಕುಸಿದಿದೆ. ಸೇತುವೆ ಹಳೆಯದಾಗಿದ್ದು, ಇತ್ತೀಚೆಗೆ ಕಾಲುವೆ ನಿರ್ಮಾಣದ ವೇಳೆ ನಿರ್ಲಕ್ಷ್ಯ ವಹಿಸಿದ್ದರಿಂದ ಕುಸಿದು ಬಿದ್ದಿದೆ ಎಂದು ವರದಿಗಳು ತಿಳಿಸಿವೆ. ಬಲವಾದ ನೀರಿನ ಹರಿವು ಸೇತುವೆಯ ಪಿಲ್ಲರ್‌ಗಳನ್ನು ದುರ್ಬಲಗೊಳಿಸಿದ್ದು, ಇದು ಕುಸಿತಕ್ಕೆ ಪ್ರಮುಖ ಕಾರಣವಾಗಿದೆ ಎನ್ನಲಾಗಿದೆ.

    ಸ್ಥಳೀಯ ನಿವಾಸಿಗಳು ಸೇತುವೆ ಬೀಳುವ ಮೊದಲು ದೊಡ್ಡ ಶಬ್ದವನ್ನು ಕೇಳಿದ್ದಾರೆ. ಇದರಿಂದಾಗಿ ಅವರು ತಮ್ಮ ಮನೆಗಳಿಂದ ಹೊರ ಓಡಿ ಬಂದಿದ್ದರು. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಸೇತುವೆ ಕುಸಿದು ಬಿದ್ದಿರುವ ವಿಡಿಯೋ ವೈರಲ್​ ಆಗುತ್ತಿದೆ.

    ಈ ಸೇತುವೆಯ ಕುಸಿತದಿಂದಾಗಿ ಮಹಾರಾಜಗಂಜ್ ಬ್ಲಾಕ್‌ನ ಪಥೇಡಿ ಬಜಾರ್ ಮತ್ತು ದಾರೋಂಡಾ ಬ್ಲಾಕ್‌ನ ರಾಮಗಢ ಪಂಚಾಯತ್ ನಡುವಿನ ಸಂಪರ್ಕ ಕಡಿತಗೊಂಡಿದ್ದು, ಸಾವಿರಾರು ಜನರ ದೈನಂದಿನ ಸಂಚಾರಕ್ಕೆ ತೊಂದರೆಯಾಗಿದೆ.

    ಸೇತುವೆ ಕುಸಿತದ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಸಾಧ್ಯವಾದಷ್ಟು ಬೇಗ ಹೊಸ ಸೇತುವೆ ನಿರ್ಮಿಸಬೇಕು ಎಂದು ಸುತ್ತಲಿನ ಗ್ರಾಮಸ್ಥರು ಸರ್ಕಾರವನ್ನು ಆಗ್ರಹಿಸಿದ್ದಾರೆ.

    ಕಳೆದ ವಾರ, ಅರಾರಿಯಾ ಜಿಲ್ಲೆಯ ಬಕ್ರಾ ನದಿಯ ಮೇಲಿನ ನೂತನ ಸೇತುವೆ ಕುಸಿದಿದು ಬಿದ್ದಿತ್ತು. ಇದರ ಬಗ್ಗೆ ತನಿಖೆ ನಡೆಸಲು ಅಧಿಕಾರಿಗಳು ಆಗಮಿಸಿದ್ದಾರೆ ಎಂದು ಅರಾರಿಯಾದ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ರಂಜನ್ ತಿಳಿಸಿದ್ದಾರೆ. ಇದಕ್ಕೂ ಮೊದಲು, ಮಾರ್ಚ್‌ನಲ್ಲಿ ಸುಪೌಲ್ ಜಿಲ್ಲೆಯಲ್ಲಿ ಕೋಸಿ ನದಿ ಮೇಲೆ ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದು, ಒಬ್ಬ ಮೃತಪಟ್ಟು, ಹತ್ತು ಮಂದಿ ಗಾಯಗೊಂಡಿದ್ದರು.

    ಅನುಪಮ್ ಖೇರ್ ಕಚೇರಿ ದರೋಡೆ ಪ್ರಕರಣ: ಇಬ್ಬರನ್ನು ಬಂಧಿಸಿದ ಮುಂಬೈ ಪೊಲೀಸರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts