More

    ಅಮರನಾಥ ಯಾತ್ರೆಗೆ ಆಫ್​ಲೈನ್​ ನೋಂದಣಿ ಆರಂಭ; ಇಲ್ಲಿದೆ ಕಂಪ್ಲೀಟ್​ ಡೀಟೇಲ್ಸ್​

    ಶ್ರೀನಗರ: ಅಮರನಾಥ ಯಾತ್ರೆಯ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ಅಮರನಾಥ ಯಾತ್ರೆ ಜೂನ್​ 29 ರಿಂದ ಪ್ರಾರಂಭವಾಗಿ ಆಗಸ್ಟ್ 19ರವರೆಗೆ ನಡೆಯಲಿದೆ. ಇದಕ್ಕಾಗಿ ಜೂನ್ 28ರಂದು ಮೊದಲ ತಂಡ ಜಮ್ಮುವಿನ ಭಗವತಿ ನಗರದ ಬೇಸ್​​ ಕ್ಯಾಂಪ್​ನಿಂದ ಕಾಶ್ಮೀರ ಕಣಿವೆಗೆ ತೆರಳಲಿದೆ. ಆನ್‌ಲೈನ್ ನಂತರ ಈಗ ಯಾತ್ರೆಗೆ ಆಫ್‌ಲೈನ್ ನೋಂದಣಿ ಪ್ರಕ್ರಿಯೆ ಬುಧವಾರದಿಂದ (ಜೂನ್​​​ 26) ಪ್ರಾರಂಭವಾಗಿದೆ.

    ಇದನ್ನು ಓದಿ: ವಿರೋಧ ಪಕ್ಷದ ನಾಯಕನಾಗಿ ಸದನದಲ್ಲಿ ರಾಹುಲ್​ ಗಾಂಧಿ ಮೊದಲ ಭಾಷಣ; ಹೇಳಿದ್ದೇನು?

    ತಕ್ಷಣದ ನೋಂದಣಿ ಸೌಲಭ್ಯ ಗುರುವಾರದಿಂದ (ಜೂನ್ 27)​​​ ಲಭ್ಯವಾಗಲಿದೆ. ಜಮ್ಮುವಿನ ವಿವಿಧ ಗೊತ್ತುಪಡಿಸಿದ ಕೇಂದ್ರಗಳಲ್ಲಿ ಆಫ್‌ಲೈನ್ ನೋಂದಣಿ ಸೌಲಭ್ಯವನ್ನು ಲಭ್ಯಗೊಳಿಸಲಾಗಿದೆ. ಯಾತ್ರಾರ್ಥಿಗಳಿಗೆ ಟೋಕನ್‌ಗಳನ್ನು ನೀಡಲಾಗುತ್ತಿದೆ. ಈ ಟೋಕನ್‌ಗಳ ಆಧಾರದ ಮೇಲೆ ನೋಂದಣಿ ನಡೆಯುತ್ತದೆ ಮತ್ತು ನಂತರ ಅವರು ಯಾವ ದಿನ ಪ್ರಯಾಣಿಸುತ್ತಾರೆ ಎಂಬುದನ್ನು ನಿರ್ಧರಿಸಲಾಗುತ್ತದೆ. ಮೊದಲ ದಿನವೇ ನೋಂದಣಿ ಮಾಡಿಸಲು ಜನರು ಸರತಿ ಸಾಲಿನಲ್ಲಿ ನಿಂತಿರುವುದು ಕಂಡುಬಂತು.

    ಕೇಂದ್ರಗಳಲ್ಲಿ ಯಾತ್ರಾರ್ಥಿಗಳಿಗೆ ಆಫ್‌ಲೈನ್ ಟೋಕನ್‌ಗಳನ್ನು ನೀಡಲಾಗುತ್ತಿದೆ. ಒಟ್ಟು ಮೂರು ಆಫ್‌ಲೈನ್ ಕೇಂದ್ರಗಳಿವೆ – ವೈಷ್ಣವಿ ಧಾಮ್, ಪಂಚಾಯತ್ ಭವನ ಮತ್ತು ಮಹಾಜನ್ ಹಾಲ್​​ ಇಲ್ಲಿಂದ ಯಾತ್ರಾರ್ಥಿಗಳಿಗೆ ಟೋಕನ್ ಸ್ಲಿಪ್ ನೀಡಲಾಗುತ್ತಿದೆ. ಅವರ ನೋಂದಣಿಯನ್ನು ಅದೇ ಆಧಾರದ ಮೇಲೆ ಮಾಡಲಾಗುತ್ತದೆ ಎಂದು ಎಸ್‌ಡಿಎಂ ದಕ್ಷಿಣ ಜಮ್ಮು ಮನು ಹಂಸ ತಿಳಿಸಿದ್ದಾರೆ.

    ಟೋಕನ್​ ಪಡೆಯಲು ಯಾತ್ರಾರ್ಥಿಗಳು ತಮ್ಮ ಆಧಾರ್ ಕಾರ್ಡ್‌ನೊಂದಿಗೆ ಕೇಂದ್ರಗಳಿಗೆ ತಲುಪಬೇಕು. ಅದೇ ಆಧಾರದ ಮೇಲೆ ಟೋಕನ್‌ಗಳನ್ನು ನೀಡಲಾಗುವುದು. 13 ವರ್ಷದೊಳಗಿನ ಮಕ್ಕಳನ್ನು ಅನುಮತಿಸಲಾಗುವುದಿಲ್ಲ. 6 ತಿಂಗಳ ಅಥವಾ ಅದಕ್ಕಿಂತ ಹೆಚ್ಚಿನ ಗರ್ಭಿಣಿ ಮಹಿಳೆಯರಿಗೆ ಅನುಮತಿಸಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

    ಎಲ್ಲ ಯಾತ್ರಾರ್ಥಿಗಳಿಗೆ ಸಹಾಯ ಮಾಡಲು ಟೋಕನ್ ಸೆಂಟರ್‌ಗಳು, ವಾಟರ್ ಫಿಲ್ಟರ್‌ಗಳು ಮತ್ತು ಡೈನಿಂಗ್ ಹಾಲ್ ಅನ್ನು ವ್ಯವಸ್ಥೆ ಮಾಡಲಾಗಿದೆ. ಇದರಿಂದ ನೋಂದಣಿ ಪ್ರಕ್ರಿಯೆಯು ಸುಗಮವಾಗಿ ನಡೆಯುತ್ತದೆ. ಹೆಚ್ಚುವರಿಯಾಗಿ ಭದ್ರತಾ ಸಿದ್ಧತೆಯನ್ನು ಪರಿಶೀಲಿಸಲು ಮಂಗಳವಾರ ಜಮ್ಮುವಿನ ಯಾತ್ರಿ ನಿವಾಸ ಭಗವತಿ ನಗರದಲ್ಲಿ ಅಮರನಾಥ ಯಾತ್ರೆಯ ಪ್ರಾಯೋಗಿಕ ಚಾಲನೆಯನ್ನು ನಡೆಸಲಾಯಿತು ಎಂದು ಹೇಳಿದರು.(ಏಜೆನ್ಸೀಸ್​​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts