More

    ಮಾದಕ ವಸ್ತುಗಳಿಂದ ದೂರವಿರಿ

    ಅಳವಂಡಿ: ವಿದ್ಯಾರ್ಥಿ ಜೀವನ ಭವಿಷ್ಯವನ್ನು ನಿರ್ಧರಿಸಲಿದೆ. ಹಾಗಾಗಿ ವಿದ್ಯಾಭ್ಯಾಸದೊಂದಿಗೆ ಗುರಿಯನ್ನು ತಲುಪಬೇಕು ಎಂದು ಮುಂಡರಗಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಈಶ್ವರ ಪೂಜಾರ ಹೇಳಿದರು.

    ಗ್ರಾಮದ ಶ್ರೀಸಿದ್ಧೇಶ್ವರ ಸಂಯುಕ್ತ ಪದವಿ ಪೂರ್ವ ವಿದ್ಯಾಲಯದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಸ್ವಾಸ್ಥ ಸಂಕಲ್ಪ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ ಮಾದಕ ವಸ್ತು ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಗುರುವಾರ ಮಾತನಾಡಿದರು.

    ವಿದ್ಯಾರ್ಥಿಗಳು ದುಶ್ಚಟಗಳಿಗೆ ದಾಸರಾದರೆ ಜೀವನ ಹಾಳಾಗಲಿದೆ. ಕಾರಣ ಮಾದಕ ವಸ್ತುಗಳಿಂದ ದೂರ ಇರಬೇಕು. ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಡುವಲ್ಲಿ ವಿದ್ಯಾರ್ಥಿಗಳು ಪಣ ತೊಡಬೇಕು. ಅಲ್ಲದೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.

    ಹಿರಿಯ ಉಪನ್ಯಾಸಕ ಎಚ್.ಮಹಾನಂದಿ, ಉಪನ್ಯಾಸಕರಾದ ಸಿದ್ದು ಅಂಗಡಿ, ನವೀನ ಇನಾಮದಾರ, ದೇವಮ್ಮ, ಶಿಕ್ಷಕರಾದ ನೀಲಪ್ಪ ಹಕ್ಕಂಡಿ, ಮಲ್ಲಪ್ಪ ತಿಗರಿ, ಸಿಬ್ಬಂದಿ ಚನ್ನಯ್ಯ ಹಿರೇಮಠ, ವಲಯ ಮೇಲ್ವಿಚಾರಕ ಮೋಟಯ್ಯ, ಸೇವಾ ಪ್ರತಿನಿಧಿ ಅಕ್ಕಮ್ಮ, ಬಸಮ್ಮ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts