More

    ಏರ್‌ಟೆಲ್ ಮೊಬೈಲ್ ಸೇವಾ ಸುಂಕ ಶೇ.10-21 ಹೆಚ್ಚಳ..ಈ ದಿನದಿಂದ ಪರಿಷ್ಕೃತ ದರ ಜಾರಿ!

    ನವದೆಹಲಿ: ಜಿಯೋ ಹಾದಿಯಲ್ಲೇ ಏರ್‌ಟೆಲ್ ಹೆಜ್ಜೆ ಹಾಕಿದೆ. ಮೊಬೈಲ್ ಸೇವೆಗಳ ಸುಂಕ ಹೆಚ್ಚಿಸುವುದಾಗಿ ಶುಕ್ರವಾರ ಘೋಷಿಸಿದೆ. ಜುಲೈ 3 ರಿಂದ ಹೊಸ ದರಗಳು ಜಾರಿಗೆ ಬರಲಿವೆ ಎಂದು ಕಂಪನಿ ತಿಳಿಸಿದೆ.

    ಇದನ್ನೂ ಓದಿ: ಅಮೆರಿಕದಲ್ಲಿ ‘ಕಲ್ಕಿ’ ಅಬ್ಬರ.. ಸಾರ್ವಕಾಲಿಕ ದಾಖಲೆ ಬರೆದ ಭಾರತೀಯ ಚಿತ್ರ! ಕಲೆಕ್ಷನ್ಸ್ ಎಷ್ಟು ಗೊತ್ತಾ?

    ಯೋಜನೆಗಳಿಗೆ ತಕ್ಕಂತೆ ಹೆಚ್ಚಳವು ಶೇ.10-21 ಆಗಿದೆ. ಪ್ರತಿ ಬಳಕೆದಾರನಿಂದ ಬರುವ ಆದಾಯವು (ಎಆರ್​ಪಿಯು) 300ರೂ. ಗಿಂತ ಹೆಚ್ಚು ಇರಬೇಕು. ಅದರ ಭಾಗವಾಗಿಯೇ ಸುಂಕವನ್ನು ಹೆಚ್ಚಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

    ಹೆಚ್ಚಳದಿಂದ ಬರುವ ಆದಾಯವನ್ನು ಉತ್ತಮ ಸೇವೆಗಳನ್ನು ಒದಗಿಸಲು ಬಳಸಲಾಗುವುದು ಎಂದು ಏರ್​ಟೆಲ್​ ಸಂಸ್ಥೆ ಹೇಳಿದೆ. ದಿನಕ್ಕೆ 70 ಪೈಸೆಗಿಂತ ಕಡಿಮೆ ಹೆಚ್ಚಳವಾಗಿದೆ ಎಂದು ವಿವರಿಸಿದೆ. ಇದು ಪ್ರಿಪೇಯ್ಡ್ ಮತ್ತು ಪೋಸ್ಟ್ಪೇಯ್ಡ್ ಯೋಜನೆಗಳ ಬೆಲೆ ಹೆಚ್ಚಳಕ್ಕೆ ಕಾರಣವಾಗಿದೆ.

    ರಿಲಯನ್ಸ್ ಜಿಯೋ ತನ್ನ ಸುಂಕದ ದರಗಳನ್ನು ಶೇ.15 ವರೆಗೆ ಹೆಚ್ಚಿಸಿದ ಒಂದು ದಿನದ ನಂತರ ಭಾರ್ತಿ ಏರ್‌ಟೆಲ್ ತನ್ನ ಎಲ್ಲಾ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಯೋಜನೆಗಳಲ್ಲಿ ಬೆಲೆ ಏರಿಕೆಯನ್ನು ಘೋಷಿಸಿದೆ.

    ದರ ಹೆಚ್ಚಿಸಿದ ಯೋಜನೆಗಳು ದುಬಾರಿಯಾಗಿದ್ದರೂ, ಡೇಟಾ, ಕರೆ ನಿಮಿಷಗಳು ಮುಂತಾದ ಪ್ರಯೋಜನಗಳು ಒಂದೇ ಆಗಿರುತ್ತವೆ ಎಂಬುದನ್ನು ಇಲ್ಲಿ ಗಮನಿಸಬೇಕು.

    ಒಟ್ಟಾರೆಯಾಗಿ, ಏರ್‌ಟೆಲ್ 15 ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಯೋಜನೆಗಳ ಬೆಲೆಯನ್ನು ಹೆಚ್ಚಿಸಿದೆ. ಈ ಬೆಲೆಗಳು ಭಾರ್ತಿ ಹೆಕ್ಸಾಕಾಮ್ ಲಿಮಿಟೆಡ್ ಸರ್ಕಲ್‌ಗಳು ಸೇರಿದಂತೆ ಎಲ್ಲಾ ವಲಯಗಳಿಗೆ ಅನ್ವಯಿಸುತ್ತವೆ.

    ಪರಿಷ್ಕೃತ ಸುಂಕವು 179ರೂ. ಮಾಸಿಕ ಯೋಜನೆಯ ಬೆಲೆ 199ರೂ. ಗೆ ಹೆಚ್ಚಿಸುತ್ತದೆ. ಈ ಯೋಜನೆಯು ದಿನಕ್ಕೆ 2ಜಿಬಿ ಮೊಬೈಲ್ ಡೇಟಾ, ಅನಿಯಮಿತ ಕರೆ ಮತ್ತು ಪ್ರತಿದಿನ 100 ಎಸ್​ಎಂಎಸ್​ ಗಳನ್ನು ನೀಡುತ್ತದೆ. ಅದೇ ರೀತಿ 1,799 ರೂ.ಗಳ ಅನಿಯಮಿತ ಕರೆ ವಾರ್ಷಿಕ ಯೋಜನೆಯು ಈಗ 1,999 ರೂ. ಆಗಿದೆ.

    ಏರ್‌ಟೆಲ್‌ನ ದೈನಂದಿನ ಆಡ್-ಆನ್ ಯೋಜನೆ 19 ರೂ.ನಿಂದ 22ರೂ. ಗೆ ಏರಿಕೆಯಾಗಿದೆ. (3ರೂ. ಹೆಚ್ಚಳ). ಏರ್‌ಟೆಲ್‌ನ ಪೋಸ್ಟ್‌ಪೇಯ್ಡ್ ಯೋಜನೆಗಳಿಗೆ ಬರುವುದಾದರೆ, ದಿನಕ್ಕೆ 3ಜಿಬಿ ಡೇಟಾವನ್ನು ನೀಡುವ ದೈನಂದಿನ ಡೇಟಾ ಯೋಜನೆ 265 ರೂ ಇದ್ದಿದ್ದು ಈಗ ಬೆಲೆ 449 ರೂ.ಗೆ ಏರಿದೆ.

    ‘ಕುಸಿದ ಮೇಲ್ಛಾವಣಿ ಮೋದಿ ಆಡಳಿತದಲ್ಲಿ ನಿರ್ಮಿಸಿದ್ದಲ್ಲ’: ರಾಂ ಮೋಹನ್​ ನಾಯ್ಡು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts