More

    ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್‌ಆರ್‌ಐ ಕೋಟಾಗೆ ಎಐಡಿಎಸ್‌ಒ ವಿರೋಧ

    ಮೈಸೂರು: ರಾಜ್ಯ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್‌ಆರ್‌ಐ ಕೋಟಾದ ಪ್ರಸ್ತಾವನೆಯನ್ನು ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ ಆರ್ಗನೈಸೇಷನ್ (ಎಐಡಿಎಸ್‌ಒ) ವಿರೋಧಿಸಿದೆ.


    ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್‌ಆರ್‌ಐ ಕೋಟಾಗೆ ಅನುಮತಿ ನೀಡುವಂತೆ ರಾಜ್ಯ ಸರ್ಕಾರವು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎಎಂಸಿ)ಗೆ ಮನವಿ ಸಲ್ಲಿಸಿದೆ. ಪ್ರಸ್ತುತ ಲಭ್ಯವಿರುವ ಸೀಟ್‌ಗಳಲ್ಲೇ ಎನ್‌ಆರ್‌ಐ ಕೋಟಾ ತೆರೆಯದೆ, ಶೇ.15 ಹೆಚ್ಚುವರಿ ಸೀಟುಗಳಿಗೆ ವಿನಂತಿಸಿದೆ.

    ಒಂದು ವೇಳೆ, ಎನ್‌ಆರ್‌ಐ ಕೋಟಾ ಜಾರಿಯಾದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸಂಪೂರ್ಣ ವ್ಯಾಪಾರೀಕರಣಕ್ಕೆ ಪರವಾನಿಗೆ ನೀಡಿದಂತಾಗುತ್ತದೆ ಎಂದು ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ ಪ್ರಕಟಣೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


    ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಉದ್ದೇಶಕ್ಕೆ ಇದರಿಂದ ಹೊಡೆತ ಉಂಟಾಗುತ್ತದೆ. ಸರ್ಕಾರವು ಸೀಟ್‌ಗಳನ್ನು ಹೆಚ್ಚಿಸುವುದಾದರೆ ರಾಜ್ಯದ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚಿಸಲಿ. ಅದನ್ನು ಬಿಟ್ಟು ಎನ್‌ಆರ್‌ಐ ಕೋಟಾ ಹೆಸರಿನಲ್ಲಿ ವೈದ್ಯಕೀಯ ಸೀಟುಗಳ ಮಾರಾಟ ನಡೆಸಬಾರದು.

    ಸರ್ಕಾರವು ಈ ನಡೆಯನ್ನು ಹಿಂಪಡೆದು ವೈದ್ಯಕೀಯ ಸೀಟ್‌ಗಳನ್ನು ಹೆಚ್ಚಿಸಬೇಕು. ವೈದ್ಯಕೀಯ ಶಿಕ್ಷಣದಿಂದ ದೂರ ತಳ್ಳಲ್ಪಡುತ್ತಿರುವ ರಾಜ್ಯದ ಬಡ, ಗ್ರಾಮೀಣ ವಿದ್ಯಾರ್ಥಿಗಳಿಗೆ ಅದನ್ನು ತಲುಪಿಸಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts