More

    ಕೇಂದ್ರವು ಅಗ್ನಿವೀರರನ್ನು ಯೂಸ್​ ಆ್ಯಂಡ್​ ಥ್ರೋ ಎಂಬಂತೆ ನಡೆಸಿಕೊಳ್ಳುತ್ತಿದೆ; ರಾಹುಲ್​ ಗಾಂಧಿ

    ನವದೆಹಲಿ: ಲೋಕಸಭೆಯಲ್ಲಿ ಕೇಂದ್ರದ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿ ಸರ್ಕಾರದ ವಿರುದ್ಧ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೋಮವಾರ (ಜುಲೈ 1) ವಾಗ್ದಾಳಿ ನಡೆಸಿದರು. ಅಗ್ನಿವೀರರನ್ನು ಕೇಂದ್ರ ಸರ್ಕಾರ ಯೂಸ್​ ಆ್ಯಂಡ್​ ಥ್ರೋ ಎಂಬಂತೆ ಪರಿಗಣಿಸುತ್ತಿದೆ ಎಂದು ಆರೋಪಿಸಿದರು.

    ಇದನ್ನು ಓದಿ: ಸದನದಲ್ಲಿ ‘ಹಿಂದೂ’ ಗದ್ದಲ; ರಾಹುಲ್​ಗಾಂಧಿ ಹೇಳಿಕೆಗೆ ಗಂಭೀರ ವಿಚಾರ ಎಂದು ‘ನಮೋ’ ಖಂಡನೆ

    ಕೆಲವು ದಿನಗಳ ಹಿಂದೆ ಪಂಜಾಬ್‌ನಲ್ಲಿ ನೆಲಬಾಂಬ್ ಸ್ಫೋಟದಲ್ಲಿ ಹುತಾತ್ಮನಾದ ಅಗ್ನಿವೀರನ ಕುಟುಂಬವನ್ನು ಭೇಟಿಯಾಗಿದ್ದೇನೆ. ನಾನು ಅವರನ್ನು ಹುತಾತ್ಮ ಎಂದು ಕರೆಯುತ್ತಿದ್ದೇನೆ ಆದರೆ ನರೇಂದ್ರ ಮೋದಿ ಸರ್ಕಾರ ಅವರನ್ನು ಹುತಾತ್ಮ ಎಂದು ಕರೆಯುವುದಿಲ್ಲ. ಪ್ರಧಾನಿ ಮೋದಿ ಅವರನ್ನು ಅಗ್ನಿವೀರ್ ಎಂದು ಕರೆಯುತ್ತಾರೆ ಎಂದಿದ್ದಾರೆ. ಅಗ್ನಿವೀರರಿಗೆ ಹುತಾತ್ಮ ಸ್ಥಾನಮಾನ ಸಿಗುವುದಿಲ್ಲ. ಅವರ ಕುಟುಂಬಕ್ಕೆ ಪಿಂಚಣಿ ಅಥವಾ ಪರಿಹಾರ ಸಿಗುವುದಿಲ್ಲ. ಅಗ್ನಿವೀರ್​ ಸಿಬ್ಬಂದಿಯನ್ನು ‘ಯೂಸ್ ಅಂಡ್ ಥ್ರೋ’ ಕಾರ್ಮಿಕರಂತೆ ನಡೆಸುಕೊಳ್ಳಲಾಗುತ್ತಿದೆ ಎಂದು ಹೇಳಿದರು.

    ಸೈನಿಕನಿಗೆ ಭಾರತ ಸರ್ಕಾರ ಸಹಾಯ ಮಾಡುತ್ತದೆ. ಅವರು ಕುಟುಂಬಕ್ಕೆ ಪಿಂಚಣಿ ಸಿಗುತ್ತದೆ. ಕೇಂದ್ರ ಸರ್ಕಾರವು ಭಾರತೀಯ ಸೇನಾ ಸಿಬ್ಬಂದಿ ಮತ್ತು ಅಗ್ನಿವೀರರನ್ನು ವಿಭಿನ್ನವಾಗಿ ಪರಿಗಣಿಸುವ ಮೂಲಕ ಅವರ ನಡುವೆ ಬಿರುಕು ಮೂಡಿಸುತ್ತಿದೆ ಎಂದು ಆರೋಪಿಸಿದರು. ನೀವು ಅಗ್ನಿವೀರ್‌ಗೆ ಆರು ತಿಂಗಳ ತರಬೇತಿ ನೀಡಿ ಮತ್ತು ಐದು ವರ್ಷಗಳ ತರಬೇತಿ ಪಡೆಯುವ ಚೀನಾದ ಸಿಬ್ಬಂದಿ ವಿರುದ್ಧ ಕಣಕ್ಕಿಳಿಸುತ್ತೀರಿ. ಪ್ರಯೋಜನಗಳ ಕಾರಣದಿಂದ ಜವಾನ್ ಮತ್ತು ಅಗ್ನಿವೀರ್ ನಡುವೆ ವ್ಯತ್ಯಾಸವನ್ನು ಸೃಷ್ಟಿಸುತ್ತಿದ್ದೀರಿ. ಆಡಳಿತ ಪಕ್ಷದ ಕಡೆ ನೋಡಿ ‘ನಿಮ್ಮನ್ನು ದೇಶಪ್ರೇಮಿ ಎನ್ನುತ್ತೀರಿ, ಆದರೆ ನೀವು ಎಂತಹ ದೇಶಪ್ರೇಮಿ’ ಎಂದು ಪ್ರಶ್ನಿಸಿದರು.

    ಇದಕ್ಕೆ ಪ್ರತಿಕ್ರಿಯಸಿದ ರಕ್ಷಣಾ ಸಚಿವ ರಾಜನಾಥ್​ ಸಿಂಗ್​​, ಸದನದಲ್ಲಿ ರಾಹುಲ್ ಗಾಂಧಿ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಕರ್ತವ್ಯದ ವೇಳೆ ಮೃತಪಟ್ಟ ಅಗ್ನಿವೀರ್ ಅವರ ಕುಟುಂಬ ಸದಸ್ಯರಿಗೆ ಸರ್ಕಾರ 1 ಕೋಟಿ ರೂ. ಪರಿಹಾರ ನೀಡುತ್ತದೆ ಎಂದರು. ಇದಕ್ಕೆ ಉತ್ತರಿಸಿದ ರಾಹುಲ್ ಗಾಂಧಿ, ರಾಜನಾಥ್ ಸಿಂಗ್ ಅವರ ಸ್ವಂತ ಅಭಿಪ್ರಾಯವಿದೆ. ಆದರೆ ದೇಶದ ಅಗ್ನಿವೀರರಿಗೆ ವಾಸ್ತವದ ಅರಿವಿದೆ ಎಂದು ಹೇಳಿದರು. (ಏಜೆನ್ಸೀಸ್​​)

    ದೆಹಲಿ ಕೋರ್ಟ್​​; 23 ವರ್ಷದ ಹಳೆಯ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್​ಗೆ ಜೈಲು ಶಿಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts