More

    ನಟಿ ತಮನ್ನಾ ವಿಷಯ ಬೋಧನೆ: ಸಿಂಧಿ ಶಾಲೆ ವಿರುದ್ಧ ಪೋಷಕರ ದೂರು: ದೂರಿಗೂ ತಮನ್ನಾಗೂ ಏನು ಸಂಬಂಧ? ಇಲ್ಲಿದೆ ಮಾಹಿತಿ

    ಬೆಂಗಳೂರು ಹೆಬ್ಬಾಳದ ಸಿಂಧಿ ಹೈಸ್ಕೂಲ್‌ನಲ್ಲಿ ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರಿರುವ ಅಧ್ಯಾಯದ ಕುರಿತು ಪಾಲಕರು ಆಕ್ಷೇಪ ವ್ಯಕ್ತಪಡಿಸಿರುವುದು ವಿವಾದಕ್ಕೆ ಕಾರಣವಾಗಿದೆ.

    ಈ ಸಂಬಂಧ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಮತ್ತು ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಒಕ್ಕೂಟ (ಕ್ಯಾಮ್ಸ್)ನಲ್ಲಿ ದೂರು ದಾಖಲಿಸಿದ್ದಾರೆ.

    ತಮ್ಮನಾ ಭಾಟಿಯಾ ಅವರು ಹದಿಹರೆಯದ ದೃಶ್ಯಗಳಲ್ಲಿ ಅಭಿನಯಿಸಿದ್ದಾರೆ. ಇಂತಹ ದೃಶ್ಯಗಳನ್ನು ಮಕ್ಕಳಿಗೆ ಯಾವ ರೀತಿಯಲ್ಲಿ ವಿಶ್ಲೇಷಿಸಿ ಹೇಳಿಕೊಡಬೇಕು ಎಂಬುದು ಪಾಲಕರ ಪ್ರಶ್ನೆಯಾಗಿದೆ. ಈ ವಿಷಯವನ್ನು ಪ್ರಶ್ನಿಸಿದ್ದಕ್ಕೆ ಪಾಲಕರ ವಿರುದ್ಧ ದೌರ್ಜನ್ಯ ಕೂಡ ಎಸಗಲಾಗಿದೆ ಎಂದು ತಿಳಿದು ಬಂದಿದೆ.

    ಶಾಲೆಯು ತಮ್ಮ ಸಿಂಧಿ ಸಮುದಾಯದ ಬಗ್ಗೆ ತಿಳಿಸಿಕೊಡುವ ಉದ್ದೇಶದಿಂದ 7ನೇ ತರಗತಿಗೆ ಪಾಠವೊಂದನ್ನು ಬೋಧಿಸುತ್ತಿದೆ. ಪಾಠದಲ್ಲಿ ‘ವಿಭಜನೆಯ ನಂತರದ ಜೀವನ: ಸಿಂಧ್‌ನಲ್ಲಿ ವಲಸೆ, ಸಮುದಾಯ ಮತ್ತು ಕಲಹ 1947 ರಿಂದ 1962’ ಎಂಬ ಅಧ್ಯಾಯವಿದೆ.

    ಇದರಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಸೇರಿ ಹಲವು ಪ್ರಮುಖ ಮತ್ತು ಯಶಸ್ವಿ ಸಿಂಧಿಗಳನ್ನು ಹೊಂದಿದೆ. ಆದರೆ, ಪಾಲಕರು ಮಾತ್ರ ತಮನ್ನಾ ಭಾಟಿಯಾ ಅವರ ವಿಷಯಕ್ಕೆ ಮಾತ್ರ ವಿರೋಧ ವ್ಯಕ್ತಪಡಿಸಿದ್ದಾರೆ.

    ಸಂಸ್ಥೆಯು ಭಾಷಿಕವಾಗಿರುವುದರಿಂದ ವಿದ್ಯಾರ್ಥಿಗಳಿಗೆ ಅವರ ಸಮುದಾಯ ಮತ್ತು ಸಂಸ್ಕೃತಿಯನ್ನು ಪರಿಚಯಿಸಲು ಅವಕಾಶವಿದೆ. ಅಲ್ಪಸಂಖ್ಯಾತ ಶಾಲೆಯು ನಿರ್ದಿಷ್ಟ ಸಮುದಾಯಕ್ಕೆ ಮಕ್ಕಳನ್ನು ಪರಿಚಯಿಸಬಹುದು. ಆ ಸಮುದಾಯದ ಮತ್ತೊಂದು ಸಂಸ್ಕೃತಿ ಮತ್ತು ಇತಿಹಾಸವನ್ನು ಮಕ್ಕಳಿಗೆ ಪರಿಚಯಿಸಲು ನಮ್ಮ ಅಭ್ಯಂತರವಿಲ್ಲ. ಆದರೆ, ವಿದ್ಯಾರ್ಥಿಗಳಿಗೆ ಸೂಕ್ತವಲ್ಲದ ನಟಿಯ ಅಧ್ಯಾಯವನ್ನು ಹೊಂದಿರುವುದು ನಮ್ಮ ಆಕ್ಷೇಪವಾಗಿದೆ ಎಂದು ಆಯೋಗ ಮತ್ತು ಕ್ಯಾಮ್ಸ್‌ಗೆ ಸಲ್ಲಿಸಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಡಿ ಶಶಿಕುಮಾರ್ ಮಾತನಾಡಿ, ಇಂತಹ ನಟ-ನಟಿಯರ ಕುರಿತ ಪಾಠವನ್ನು ನೀಡಿ ಮಕ್ಕಳಿಗೆ ಯಾವ ರೀತಿಯ ಮೌಲ್ಯವನ್ನು ನೀಡುತ್ತಿದ್ದೇವೆ ಎಂಬ ಯಕ್ಷ ಪ್ರಶ್ನೆ ನಮಗೂ ಕಾಡುತ್ತಿದೆ. ಶಾಲೆಗಳು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ. ಶಾಲಾ ಶಿಕ್ಷಣ ಇಲಾಖೆ ಗಮನಕ್ಕೆ ತರುವ ಕೆಲಸವನ್ನು ಕ್ಯಾಮ್ಸ್ ಮಾಡಲಿದೆ. ಆಕ್ಷೇಪಾರ್ಹ ವಿಷಯಗಳನ್ನು ಮಕ್ಕಳಿಗೆ ನೀಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts