More

    ರೇಣುಕಸ್ವಾಮಿ ನನಗೂ ಇಂಥದ್ದೇ ಸಂದೇಶ ಕಳಿಸಿದ್ದ; ಸಾಕ್ಷಿ ಸಮೇತ ವಿವರಿಸಿದ ನಟಿ ಚಿತ್ರಾಲ್ ರಂಗಸ್ವಾಮಿ

    ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಆಕೆಯ ಸ್ನೇಹಿತೆ ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಆರೋಪಿಗಳನ್ನು ಬಂಧಿಸಿದ ಬೆಂಗಳೂರು ಪೊಲೀಸರು, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ವಿಚಾರಣೆ ಬಳಿಕ ಕೋರ್ಟ್​ ದರ್ಶನ್​ರನ್ನು ಎರಡು ದಿನ ಪೊಲೀಸ್​ ಕಸ್ಟಡಿಗೆ ಒಪ್ಪಿಸಿದ್ದರು. ನ್ಯಾಯಾಲಯದ ವಿಚಾರಣೆ ಬಳಿಕ ಜುಲೈ 04ರವರೆಗೂ ಆರೋಪಿ ದರ್ಶನ್​ ಮತ್ತು ಆತನ ಸಹಚರರನ್ನು ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರಿಸಲಾಗಿದ್ದು, ವಿಚಾರಣಧೀನ ಕೈದಿ ನಂಬರ್ ಕೂಡ ಹಸ್ತಾಂತರಿಸಲಾಗಿದೆ.

    ಇದನ್ನೂ ಓದಿ: ಕ್ಯಾಪ್ಟನ್ ರೋಹಿತ್ ಶರ್ಮ​ ಜತೆ ಹೀಗಿರಬೇಕು… ಉಪನಾಯಕನಿಗೆ ಗೌತಮ್ ಗಂಭೀರ್​ ಕೊಟ್ಟ ಮಹತ್ವದ ಸಲಹೆಯಿದು

    ತನ್ನ ಸ್ನೇಹಿತೆ ಪವಿತ್ರಾ ಗೌಡಗೆ ಆಶ್ಲೀಲ ಸಂದೇಶ ಮತ್ತು ಫೋಟೋಗಳನ್ನು ಕಳಿಸಿದ್ದ ಕಾರಣ ನಟ ದರ್ಶನ್‌ ಮತ್ತು ಆತನ ಸಹಚರರು ರೇಣುಕಸ್ವಾಮಿಗೆ ಚಿತ್ರಹಿಂಸೆ ಕೊಟ್ಟು ಹತ್ಯೆ ಮಾಡಿದ್ದಾರೆ. ಈ ಘಟನೆಗೆ ಪ್ರಮುಖ ಕಾರಣ ಅಶ್ಲೀಲ ಮೆಸೇಜ್​ಗಳು! ಅನೇಕರು ಮೃತ ರೇಣುಕಸ್ವಾಮಿ ಕೆಟ್ಟದಾಗಿ ಮೆಸೇಜ್ ಮಾಡಿದ್ದು ತಪ್ಪು. ಆತ ಈ ಹಿಂದೆಯೂ ಕೆಲವರಿಗೆ ನಕಲಿ ಖಾತೆಗಳಿಂದ ಇದೇ ರೀತಿಯಲ್ಲಿ ಅಶ್ಲೀಲ ಸಂದೇಶಗಳನ್ನು ಕಳಿಸಿದ್ದ ಎಂಬ ಆರೋಪಗಳನ್ನು ಎಸಗಿದ್ದರು. ನನಗೂ ಕೂಡ ಇಂತಹದ್ದೇ ಮೆಸೇಜ್​ ಬಂದಿತ್ತು ಎಂದು ಕಿರುತೆರೆ ನಟಿ ಚಿತ್ರಾಲ್ ರಂಗಸ್ವಾಮಿ ಹೇಳಿಕೊಂಡಿದ್ದಾರೆ.

    ನನಗೂ ಕೂಡ ಫೇಕ್​ ಅಕೌಂಟ್‌ನಿಂದ ಮೃತ ರೇಣುಕಸ್ವಾಮಿ ಮೆಸೇಜ್ ಮಾಡಿದ್ದ ಎಂದು ತಮ್ಮ ಸಾಮಾಜಿಕ ಜಾಲತಾಣವಾದ ಇನ್​ಸ್ಟಾಗ್ರಾಮ್​ ಸ್ಟೋರಿಯ​ಲ್ಲಿ ಚಿತ್ರಾಲ್​ ವಿವರಿಸಿದ್ದಾರೆ. ವಿಡಿಯೋದಲ್ಲಿ ಆತ ಮಾಡಿರುವ ನಕಲಿ ಖಾತೆ ಇದೆ ಎಂದು ತೋರಿಸಿರುವ ನಟಿ, ಅದನ್ನು ತಮ್ಮ ಅನುಯಾಯಿಗಳ ಮುಂದೆ ಬಹಿರಂಗಪಡಿಸಿದ್ದಾರೆ.

    ಇದನ್ನೂ ಓದಿ: ಕಲ್ಕಿ 2898 AD; ಟಿಕೆಟ್ ದರ ಏರಿಕೆ ಜತೆಗೆ ವಿಶೇಷ ಪ್ರದರ್ಶನಕ್ಕೆ ಅವಕಾಶ.. ಎಷ್ಟಿದೆ ಗೊತ್ತಾ ?

    “ಭಗವಂತ ರೇಣುಕಸ್ವಾಮಿ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಿಲಿ. ಆದರೆ, ನಕಲಿ ಖಾತೆಗಳಿಂದ ಅವರು ಇಂತಹ ಆಶ್ಲೀಲ ಮೆಸೇಜ್ ಮಾಡಿರುವುದು ತಪ್ಪು. ಈ ಬಗ್ಗೆ ಕಳೆದ ಕೆಲವು ತಿಂಗಳುಗಳ ಹಿಂದೆ ಪೊಲೀಸ್‌ ಠಾಣೆಯಲ್ಲಿ ದೂರು ಕೂಡ ದಾಖಲಾಗಿದೆ. ಗೌತಮ್‌ ಎನ್ನುವ ಹೆಸರಲ್ಲಿ ಫೇಕ್ ಅಕೌಂಟ್​ ಇತ್ತು. ಈ ಖಾತೆಯಿಂದ ಅಂತಹದ್ದೇ ಕೆಟ್ಟ ಸಂದೇಶಗಳನ್ನು ಹಲವರಿಗೆ ರೇಣುಕಸ್ವಾಮಿ ಕಳುಹಿಸಿದ್ದರಂತೆ. ನನಗೂ ಸಹ ಶಾಕ್ ಆಯಿತು. ನನ್ನ ಇನ್‌ಸ್ಟಾಗ್ರಾಮ್ ಬ್ಲಾಕ್ ಲಿಸ್ಟ್ ಚೆಕ್ ಮಾಡಿದಾಗ, ಈ ಅಕೌಂಟ್ ಅಲ್ಲಿತ್ತು” ಎಂದು ವಿಡಿಯೋದಲ್ಲಿ ವಿವರಿಸಿದ್ದಾರೆ. ಹೆಚ್ಚಿನ ಮಾಹಿತಿ ತಿಳಿಯಲು ನಟಿಯ ಇನ್​ಸ್ಟಾಗ್ರಾಮ್​ ಖಾತೆ ಪರಿಶೀಲಿಸಿ.

    ನಟಿಯ ಇನ್​ಸ್ಟಾಗ್ರಾಂ ಖಾತೆ: 

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts