More

    ರೇಣುಕಾ ಸ್ವಾಮಿ ಕೊಲೆ ಕೇಸ್‌: ಕೆಲ ಹೊತ್ತಲ್ಲೇ ಕೋರ್ಟ್​ ಮುಂದೆ ನಟ ದರ್ಶನ್​, ಪವಿತ್ರಾ ಗೌಡ!

    ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಅವರನ್ನು ಬೆಂಗಳೂರಿನಲ್ಲಿ ಕೊಲೆ ಮಾಡಿದ ಆರೋಪದಲ್ಲಿ ಬಂಧಿತರಾಗಿರುವ ನಟ ದರ್ಶನ್​, ಪವಿತ್ರಾ ಗೌಡ ಸೇರಿ ಒಟ್ಟು 13 ಆರೋಪಿಗಳನ್ನು ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಲು ತಯಾರಿ ನಡೆಸಿದ್ದಾರೆ. ನ್ಯಾಯಾಲಯದಲ್ಲಿ ಪೊಲೀಸರು ಆರೋಪಿಗಳನ್ನು ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡುವ ನಿರೀಕ್ಷೆ ಇದೆ.

    ಇದನ್ನೂ ಓದಿ: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌: ಸಿಬಿಐ ತನಿಖೆಗೆ ಒತ್ತಾಯ

    ಈ ಹತ್ಯೆ ಪ್ರಕರಣದ ಸಂಬಂಧ ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ದರ್ಶನ್ ಸೇರಿ 13 ಆರೋಪಿಗಳ ವಿಚಾರಣೆಯನ್ನು ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ನಡೆಸಿದ್ದರು. ಇದೀಗ ನಟ ದರ್ಶನ್​, ಪವಿತ್ರಾ ಗೌಡ ಸೇರಿದಂತೆ ಒಟ್ಟು 13 ಆರೋಪಿಗಳನ್ನು ಬೆಂಗಳೂರು ನಗರದ 24ನೇ ಎಸಿಎಂಎಂ ಕೋರ್ಟ್‌ಗೆ 5.30ಕ್ಕೆ ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ.

    ರೇಣುಕಾ ಸ್ವಾಮಿ ಕೊಲೆ ಕೇಸ್‌: ಕೆಲ ಹೊತ್ತಲ್ಲೇ ಕೋರ್ಟ್​ ಮುಂದೆ ನಟ ದರ್ಶನ್​, ಪವಿತ್ರಾ ಗೌಡ!

    ವಿಚಾರಣೆ ನಡೆಸಿದ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಠಾಣೆಯಿಂದ ನೇರವಾಗಿ ನಗರದ ಬೌರಿಂಗ್ ಆಸ್ಪತ್ರೆಗೆ ದರ್ಶನ್​ನ್ನು ಕರೆದುಕೊಂಡು ಹೋಗಿ  ಮೆಡಿಕಲ್ ಚೆಕಪ್ ಮಾಡಿಸಲಿದ್ದಾರೆ. ಜೊತೆಗೆ ದರ್ಶನ್ ಸೇರಿದಂತೆ 13 ಆರೋಪಿಗಳ ಬಿ.ಪಿ, ಶುಗರ್, ಯೂರಿನ್, ಬ್ಲಡ್​ ಚೆಕಪ್​ ನಡೆಸಲಿದ್ದಾರೆ. ಬಳಿಕ ಬೆಂಗಳೂರು ನಗರದ 24ನೇ ಎಸಿಎಂಎಂ ಕೋರ್ಟ್‌ಗೆ ಆರೋಪಿಗಳನ್ನು ಹಾಜರುಪಡಿಸಲಿದ್ದು, ಅದಕ್ಕಾಗಿ ಕೋರ್ಟ್‌ ಆವರಣದಲ್ಲಿಯೂ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

    ರೇಣುಕಾ ಸ್ವಾಮಿ ಕೊಲೆ ಕೇಸ್‌: ಕೆಲ ಹೊತ್ತಲ್ಲೇ ಕೋರ್ಟ್​ ಮುಂದೆ ನಟ ದರ್ಶನ್​, ಪವಿತ್ರಾ ಗೌಡ!

    ದರ್ಶನ್​, ಪವಿತ್ರಾ ಗೌಡ ಜೊತೆ ವಿ. ವಿನಯ್, ಆರ್.ನಾಗರಾಜು, ಎಂ. ಲಕ್ಷ್ಮಣ್​, ಎಸ್​. ಪ್ರದೋಶ್​, ಕೆ. ಪವನ್, ದೀಪಕ್​ ಕುಮಾರ್, ನಂದೀಶ್​, ಕಾರ್ತಿಕ್​, ನಿಖಿಲ್ ನಾಯಕ್​, ಕೇಶವಮೂರ್ತಿ, ರಾಘವೇಂದ್ರ ಅಲಿಯಾಸ್​ ರಾಘು ಈಗ ಪೊಲೀಸರ ವಶದಲ್ಲಿ ಇದ್ದಾರೆ. ಇಂದು (ಜೂನ್ 11) ಸಂಜೆ 4.30ಕ್ಕೆ ಎಲ್ಲರನ್ನೂ ಪೊಲೀಸರು ಕೋರ್ಟ್​ಗೆ ಹಾಜರುಪಡಿಸಲಿದ್ದಾರೆ.

    ಕೊಲೆಯಾದ ರೇಣುಕಾ ಸ್ವಾಮಿ ಕೂಡ ದರ್ಶನ್​ ಅಭಿಮಾನಿ ಆಗಿದ್ದ. ಪವಿತ್ರಾ ಗೌಡಗೆ ಮೆಸೇಜ್ ಮಾಡಿದ ಬಗ್ಗೆ ಕೊಲೆಗೂ ಮುನ್ನ ಸ್ನೇಹಿತರ ಬಳಿ ರೇಣುಕಾಸ್ವಾಮಿ ಕೊಲೆಗೂ ಮುನ್ನ ಸ್ನೇಹಿತರ ಬಳಿ ಹೇಳಿಕೊಂಡಿದ್ದ ರೇಣುಕಾಸ್ವಾಮಿ.‘ನಮ್ಮ ಬಾಸ್ ಸಂಸಾರವನ್ನು ಪವಿತ್ರಾ ಗೌಡ ಹಾಳು ಮಾಡಿದ್ದಾಳೆ. ಅದಕ್ಕೆ ಪವಿತ್ರಾ ಗೌಡಗೆ ಮೆಸೇಜ್ ಮಾಡಿದ್ದೆ’ ಎಂದು ರೇಣುಕಾ ಸ್ವಾಮಿ ಹೇಳಿಕೊಂಡಿದ್ದ ಎನ್ನಲಾಗಿದೆ. ತನಿಖೆ ಮುಂದುವರಿದಂತೆಲ್ಲ ಹೊಸ ಹೊಸ ಮಾಹಿತಿಗಳು ಹೊರಬೀಳುತ್ತಿವೆ.

    ಕೊಲೆ ಕೇಸ್; ‘ಚಾಲೆಂಜಿಂಗ್ ಸ್ಟಾರ್’ ನಟ ದರ್ಶನ್​ಗೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ, ರೀಟ್ವೀಟ್ ಮಾಡಿದ ನಟಿ ರಮ್ಯಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts