More

    ಉನ್ನತಮಟ್ಟದ ತನಿಖೆಗೆ ಕ್ರಮ

    ಕೋಲಾರ: ಮಾಲೂರು ತಾಲೂಕು ಆನಂದ ಆಶ್ರಮದ ಆಚಾರ್ಯ ಚಿನ್ಮಯಾನಂದ ಅವಧೂತ ಕೊಲೆ ಪ್ರಕರಣದ ಸಂಬಂಧ ಮೂವರು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದ್ದು, ಉನ್ನತಮಟ್ಟದ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಎಂ.ನಾರಾಯಣ ತಿಳಿಸಿದರು.

    ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನಂದ ಆಶ್ರಮವು 1978ರಿಂದ ಕಾರ್ಯನಿರ್ವಹಿಸುತ್ತಿದ್ದು, ಆಡಳಿತ ಮಂಡಳಿ ಹಾಗೂ ಆನಂದ ಮಾರ್ಗ ಪಾಲಿಟೆಕ್ನಿಲ್ ಕಾಲೇಜು ವ್ಯಾಜ್ಯ ವಿಚಾರಣೆ ನಡೆಯುತ್ತಿತ್ತು, ಈ ಸಂಬಂಧ ಎರಡು ಗುಂಪುಗಳ ನಡುವೆ ಜಗಳದಿಂದ ಕೃತ್ಯ ಸಂಭವಿಸಿದ್ದು, ತನಿಖೆ ನಡೆಯುತ್ತಿದೆ ಎಂದರು.
    ಕೊಲ್ಕತ್ತದಿಂದ ಆಚಾರ್ಯ ಅಮಿಶೈನಂದ ಅವಧೂತ ಅವರು ಇಲ್ಲಿಗೆ ಬಂದು ಕಾಲೇಜು ನಡೆಸುತ್ತಿರುತ್ತಾರೆ, ಆನಂತರ ಆಚಾರ್ಯ ಚಿನ್ಮಯಾನಂದ ಅವಧೂತ ಅವರನ್ನು ಪ್ರಾಂಶುಪಾಲರಾಗಿ ನೇಮಕ ಮಾಡುತ್ತಾರೆ. ಇದಕ್ಕೆ ಅಮಿಶೈನಂದ ಅವರು ಸಹ ಸಂಪೂರ್ಣ ಸಹಕಾರ ನೀಡುತ್ತಿರುತ್ತಾರೆ, ಇದನ್ನು ಸಹಿಸಲಾಗದ ಆರೋಪಿಗಳು ಸಂಚು ರೂಪಿಸಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ತಿಳಿಸಿದರು.
    ಚಿನ್ಮಯಾನಂದ ಅವಧೂತ ಅವರು ಕಿತ್ತಂಡೂರು ಗ್ರಾಮದಲ್ಲಿ ಆಶ್ರಮ ನಡೆಸುತ್ತಿದ್ದರು. ಚಿನ್ಮಯಾನಂದ ಮತ್ತು ಧರ್ಮ ಪ್ರಾಣಾನಂದ ನಡುವೆ ವ್ಯಾಜ್ಯ ಉಂಟಾಗಿ, ೨೦೦೨ರಿಂದ ನಡೆದುಕೊಂಡು ಬರುತ್ತಿದೆ. ಚಿನ್ಮಯಾನಂದ ಅವರು ಕೋಲಾರದ ನ್ಯಾಯಾಲಯದಲ್ಲಿ ದಾವೆ ಹೂಡಿ, ಆಶ್ರಮದಿಂದಲೇ ಕಾಲೇಜು ನಡೆಸಲು ಹೋರಾಟ ಮಾಡುತ್ತಿದ್ದರು ಎಂದರು.
    ನ್ಯಾಯಾಲಯಕ್ಕೆ ದಾಖಲೆ ಸಲ್ಲಿಸಲು ಮೂಲ ಜಮೀನುದಾರ ಸೀನಪ್ಪ ಅವರನ್ನು ಕರೆಯಿಸಿ ದಾಖಲೆ ಕಲೆ ಹಾಕುತ್ತಿದ್ದರು. ಚಿನ್ಮಯಾನಂದ ಅವರಿಗೆ ಅಮಿಶೈನಂದ ಅವರ ಸಹಕಾರ ಸಂಪೂರ್ಣವಾಗಿತ್ತು, ಇದನ್ನು ಸಹಿಸಲಾಗದ ಇನ್ನಿಬ್ಬರು ಅವಧೂತರು ಸುಮಾರು ವರ್ಷಗಳಿಂದ ಗಲಾಟೆ ಮಾಡುತ್ತಿದ್ದರು. ಈ ಸಂಬAಧ ಪ್ರಕರಣ ಸಹ ದಾಖಲಾಗಿತ್ತು, ಆದರೆ ಕೊಲೆ ಮಾಡುವ ಹಂತಕ್ಕೆ ತಲುಪುತ್ತದೆ ಎಂದು ಯಾರೂ ಊಹಿಸಿರಲಿಲ್ಲ ಎಂದು ತಿಳಿಸಿದರು.
    ಬಾತ್‌ರೂಂನಲ್ಲಿದ್ದ ಚಿನ್ಮಯಾನಂದ ಅವರ ಮುಖಕ್ಕೆ ಸ್ಪ್ರೆ ಹೊಡೆದು ಹಲ್ಲೆ ನಡೆಸಿದ್ದಾರೆ. ಆನಂತರ ಅಲ್ಲಿಂದ ಕುಟೀರಕ್ಕೆ ಎಳೆದುತಂದು ತಲೆ ಕೂದಲು ತೆಗೆದಿದ್ದಾರೆ, ಕಾಲು, ಕೈ ಹಾಗೂ ತಲೆಗೆ ಬಲವಾಗಿ ಹೊಡೆದು ಗಾಯಗೊಳಿಸಿದ್ದಾರೆ. ಆನಂತರ ರಕ್ತದ ಕಲೆಯಾಗಿದ್ದ ಬಟ್ಟೆಗಳನ್ನು ಕಳಚಿ ಮಾವಿನ ತೋಪಿನಲ್ಲಿ ಸುಟ್ಟು ಹಾಕಿದ ನಂತರ ಆರೋಪಿಗಳು ಘಟನಾ ಸ್ಥಳದಿಂದ ತಪ್ಪಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ತಿಳಿಸಿದರು.
    ಅದೇ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಸೀನಪ್ಪ ಮತ್ತು ಅವರ ಮಗ ಸ್ಥಳೀಯರಿಗೆ ಮತ್ತು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಕುಟೀರದಲ್ಲಿ ರಕ್ತದ ಮಡುವಿನಲ್ಲಿದ್ದ ಚಿನ್ಮಯಾನಂದ ಅವರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸುವಾಗ ಘಟನೆಯ ಬಗ್ಗೆ ಹೇಳಿಕೆ ನೀಡಿದ್ದು, ಆಚಾರ್ಯ ಧರ್ಮಪ್ರಾಣಾನಂದ, ಆಚಾರ್ಯ ಪ್ರಾಣೇಶ್, ಅರುಣ್‌ಕುಮಾರ್ ಹಲ್ಲೆ ಮಾಡಿರುವ ಬಗ್ಗೆ ವಿವರಿಸಿದ್ದಾರೆ. ಇದು ಪ್ರಕರಣ ಸಂಬಂಧ ಡಿಜಿಟಲ್ ಐ ವಿಟ್ನೆಸ್ ಆಗಿದೆ ಎಂದರು.
    ಘಟನೆಯ ನಂತರ ತಪ್ಪಿಸಿಕೊಂಡು ಧರ್ಮಪ್ರಾಣಾನಂದ ತಮಿಳುನಾಡಿಗೆ ಹಾಗೂ ಪ್ರಾಣೇಶ್ ಕೊಲ್ಕತ್ತಕ್ಕೆ ಹೋಗುತ್ತಿದ್ದರು. ಕೂಡಲೇ ಎಚ್ಚೆತ್ತುಕೊಂಡು ಇಬ್ಬರನ್ನು ಬಂಂಸಿದ್ದಾರೆ. ಚಿನ್ಮಯಾನಂದ ಅವರೇ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಎಂದು ಸುಳ್ಳು ಹೇಳಿ ಎದೆ ನೋಯುತ್ತಿದೆ ಎಂದು ಆಸ್ಪತ್ರೆಗೆ ದಾಖಲಾಗಿದ್ದ. ವಿಡಿಯೋ ನೋಡಿದ ಕೂಡಲೇ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು ತೆರಳಿ ಸ್ಥಳ ಮಹಜರು ನಡೆಸಿ, ಪೊಲೀಸರು ದೊಣ್ಣೆ ಸೇರಿ ವಿವಿಧ ಸಲಕರಣೆಗಳನ್ನು ವಶಪಡಿಸಿಕೊಂಡಿದ್ದಾರೆ. ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts