More

    ಹೃದಯ ಬಯಸಿದೆ ಸೌತ್ ಆಫ್ರಿಕಾ ಗೆಲುವು… ಎಬಿ ಡಿವಿಲಿಯರ್ಸ್​ ಮಾತಿನ ಹಿಂದಿದೆ ಈ ಅರ್ಥ! ಫ್ಯಾನ್ಸ್ ಶಾಕ್

    ನವದೆಹಲಿ: ಸತತ ಗೆಲುವಿನ ಮೂಲಕ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಮಿಂಚುತ್ತಿರುವ ರೋಹಿತ್ ಪಡೆ, ಇನ್ನೇನು ಕೆಲವೇ ಕ್ಷಣಗಳಲ್ಲಿ ಬಾರ್ಬಡೋಸ್​ನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ವಿಶ್ವಕಪ್ ಟ್ರೋಫಿಗಾಗಿ ಸೆಣಸಾಡಲಿದೆ. ಭಾರೀ ಪೈಪೋಟಿಗೆ ಭರ್ಜರಿ ತಯಾರಿ ನಡೆಸಿರುವ ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಬೆಂಬಲ ವ್ಯಕ್ತವಾಗುತ್ತಿದ್ದು, ವಿಶ್ವಕಪ್ ಕಿರೀಟಕ್ಕೆ ಮುತ್ತಿಡುವ ಅವಕಾಶ ನಿಮ್ಮದಾಗಲಿ ಎಂಬ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿವೆ. ಇದೇ ರೀತಿ ಸೌತ್ ಆಫ್ರಿಕಾ ತಂಡಕ್ಕೂ ಶುಭಾಶಯಗಳ ಸಂದೇಶಗಳು ವ್ಯಾಪಕವಾಗಿ ಕೇಳಿಬರುತ್ತಿವೆ.

    ಇದನ್ನೂ ಓದಿ: ಭಾರತ – ದಕ್ಷಿಣ ಆಫ್ರಿಕಾ ಫೈನಲ್​ಗೆ ಮಳೆ ಅಡ್ಡಿಯಾದರೆ ಚಾಂಪಿಯನ್ ಆಗುವವರು ಯಾರು? ಡಕ್‌ವರ್ತ್ ಲೂಯಿಸ್ ನಿಯಮ ಏನು?

    ರೋಚಕವಾಗಿ ಮೂಡಿಬರಲಿರುವ ಫೈನಲ್ ಹಣಾಹಣಿಗೆ ಸದ್ಯ ಕ್ರಿಕೆಟ್ ಅಭಿಮಾನಿಗಳಲ್ಲಿ ಕೌತುಕ ಹೆಚ್ಚಿದ್ದು, ರೋಹಿತ್ ಶರ್ಮ ನಾಯಕತ್ವದಲ್ಲಿ ಟೀಮ್ ಇಂಡಿಯಾ ವಿಶ್ವಕಪ್ ಟ್ರೋಫಿ ಎತ್ತಿಹಿಡಿಯಲಿ ಎಂದು ಬಯಸಿದ್ದಾರೆ. ಒಂದೆಡೆ ಇತರೆ ದೇಶದ ಮಾಜಿ ಕ್ರಿಕೆಟಿಗರು ಫೈನಲ್ ತಲುಪಿರುವ ಎರಡು ತಂಡಗಳಿಗೂ ಬೆಂಬಲ ಸೂಚಿಸಿದರೆ, ಮತ್ತೊಂದೆಡೆ ದಕ್ಷಿಣ ಆಫ್ರಿಕಾದ 360 ಡಿಗ್ರಿ ಆಟಗಾರ ಎಂದೇ ಗುರುತಿಸಿಕೊಂಡಿರುವ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್, ಇಬ್ಬರು ನಾಯಕರಿಗೂ ಶುಭಾಶಯ ತಿಳಿಸಿ, ಕಡೆಯಲ್ಲಿ ಹೃದಯ ಸೌತ್ ಆಫ್ರಿಕಾ ಗೆದ್ದು ಬರಲಿ ಎಂದು ಆಶಿಸಿದೆ ಎಂದು ಹೇಳಿಕೊಂಡಿದ್ದಾರೆ. ಆದ್ರೆ, ಇದು ಕ್ರಿಕೆಟ್ ಅಭಿಮಾನಿಗಳಿಗೆ ಬೇರೇನೆ ಅರ್ಥ ಕೊಟ್ಟಿದೆ. ​

    ಕ್ರಿಕೆಟ್ ಪ್ರಿಯರಿಗೆ ಗೊತ್ತಿರುವಂತೆ ಮೊದಲಿನಿಂದಲೂ ಟೀಮ್ ಇಂಡಿಯಾದ ‘ರನ್ ಮಷಿನ್’ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಆತ್ಮೀಯ ಗೆಳೆಯರು. ಎಬಿಡಿ ಆರ್​ಸಿಬಿ ತಂಡಕ್ಕೆ ಸೇರಿಕೊಂಡಾಗಿನಿಂದಲೂ ಈ ಸ್ನೇಹ ಇಬ್ಬರ ನಡುವೆ ಉತ್ತಮವಾಗಿದೆ. ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರವಾಗಿ ಇಬ್ಬರೂ ಕ್ರೀಸ್​ನಲ್ಲಿ ಆಕರ್ಷಕ ಇನ್ನಿಂಗ್ಸ್​ ನೀಡುವ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ರಂಜಿಸಿದ್ದಾರೆ. ಇವರಿಬ್ಬರ ಫ್ರೆಂಡ್​ಶ್ನಿಪ್ ಈಗಲೂ ಸಹ ಅದೇ ರೀತಿ ಗಟ್ಟಿಯಾಗಿದ್ದು, ಆಗಾಗ್ಗೆ ಪರಸ್ಪರ ಭೇಟಿಯಾಗಿ, ಒಬ್ಬರ ಬಗ್ಗೆ ಮತ್ತೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೆ ಕೊಡುತ್ತಿರುತ್ತಾರೆ.

    ಇದನ್ನೂ ಓದಿ: ದೇವರಿಗೆ ನೀಡುವಂಥ ಸಂಪತ್ತು ಭಜನೆ : ಬೈಂದೂರು ಕೃಷ್ಣಮೂರ್ತಿ ನಾವಡ ಅಭಿಮತ

    ಪ್ರಸ್ತುತ ಟಿ20 ವಿಶ್ವಕಪ್​ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿರುವ ವಿರಾಟ್​, ಫೈನಲ್​​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧವಾದರೂ ಅಬ್ಬರದ ಬ್ಯಾಟಿಂಗ್ ಮಾಡಲಿದ್ದಾರಾ? ಎಂದು ಅಭಿಮಾನಿಗಳು ಭಾರೀ ಚಿಂತೆಗೀಡಾಗಿದ್ದಾರೆ. ಇದರ ಮಧ್ಯೆ ಎಬಿಡಿ ಶುಭಾಶಯ ಸಂದೇಶದಲ್ಲಿ ವಿರಾಟ್​ರನ್ನು ಹುಡುಕಿದ ಕ್ರಿಕೆಟ್ ಫ್ಯಾನ್ಸ್​, ನೀವು ಹೇಳಿದಂತೆ ಸೌತ್ ಆಫ್ರಿಕಾ ಗೆಲ್ಲಬೇಕೆಂಬುದು ನಿಮ್ಮ ಮನಸ್ಸು ನುಡಿದಿದೆ. ಆದರೆ, ಟೀಮ್ ಇಂಡಿಯಾ ಗೆದ್ದರೆ ಖಂಡಿತ ನೀವು ಖುಷಿಪಡುತ್ತೀರಾ ಎಂಬುದರಲ್ಲಿ ಅನುಮಾನವಿಲ್ಲ. ಯಾಕಂದ್ರೆ, ಅಲ್ಲಿ ಕೊಹ್ಲಿ ಇದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಕಮೆಂಟ್ ಮಾಡಿ, ತಿಳಿಸಿದ್ದಾರೆ. ಅಂತಿಮವಾಗಿ ಯಾರ ಮುಡಿಗೆ ವಿಶ್ವಕಪ್ ಕಿರೀಟ ಹೋಗಲಿದೆ ಎಂಬುದನ್ನು ಸದ್ಯ ಕಾದು ನೋಡಬೇಕಿದೆ,(ಏಜೆನ್ಸೀಸ್).

    ಈ ವಿಷಯದ ಬಗ್ಗೆ ಅನುಮಾನವೇ ಬೇಡ… ರೋಹಿತ್​ರನ್ನು ಕಪಿಲ್ ದೇವ್​​ಗೆ ಹೋಲಿಸಿದ ಮಾಜಿ ಕ್ರಿಕೆಟಿಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts