More

    ಆಸ್ತಿ ನೋಂದಣಿಗೆ ಆಧಾರ್ ದೃಢೀಕರಣ

    ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
    ರಾಜ್ಯದ ಸಬ್ ರಿಜಿಸ್ಟ್ರಾರ್ ಕಚೇರಿಗಳಲ್ಲಿ ನಕಲಿ ದಾಖಲೆ ಸಲ್ಲಿಸಿ ದಸ್ತಾವೇಜು ನೋಂದಣಿ ಮಾಡಿಸುತ್ತಿದ್ದ ಭೂಗಳ್ಳರಿಗೆ ಹೆಡೆಮುರಿ ಕಟ್ಟಲು ‘ಆಧಾರ್ ದೃಢೀಕರಣ’ ವ್ಯವಸ್ಥೆ ಶೀಘ್ರದಲ್ಲಿಯೇ ಜಾರಿಗೆ ಬರಲಿದೆ. ಹೀಗಾಗಿ ರಿಜಿಸ್ಟ್ರೇಷನ್‌ಗೆ ಹೋಗುವ ಮೊದಲು ನಿಮ್ಮ ಆಧಾರ್‌ಗೆ ನಿಮ್ಮ ಅಧಿಕೃತ ಮೊಬೈಲ್ ನಂಬರ್ ಜೋಡಣೆ ಮತ್ತು ಹೆಸರು ಸರಿಯಾಗಿ ಇದಿಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇಲ್ಲವಾದರೆ, ಕೂಡಲೇ ಅಪ್‌ಡೇಟ್ ಮಾಡಿಕೊಳ್ಳಬೇಕಾಗುತ್ತದೆ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಸಾರ್ವಜನಿಕರಿಗೆ ಸಲಹೆ ನೀಡಿದೆ.

    ರಾಜ್ಯದಲ್ಲಿ ಪ್ರಸ್ತುತ 256 ಸಬ್ ರಿಜಿಸ್ಟ್ರಾರ್ ಕಚೇರಿಗಳು ಸೇವೆ ಸಲ್ಲಿಸುತ್ತಿವೆ. ಪ್ರತಿ ಕಚೇರಿಯಲ್ಲಿ ವರ್ಷಕ್ಕೆ ಅಂದಾಜು 24 ಲಕ್ಷ ದಸ್ತಾವೇಜುಗಳು ನೋಂದಣಿ ಆಗಲಿದ್ದು, 19 ಸಾವಿರ ಕೋಟಿ ರೂ. ರಾಜಸ್ವ ಸಂಗ್ರಹವಾಗುತ್ತಿದೆ. ಆದ್ದರಿಂದ ಸಬ್ ರಿಜಿಸ್ಟ್ರಾರ್ ಕಚೇರಿಯ ಸ್‌ಟಾವೇರ್ ಅನ್ನು ಕಾವೇರಿ 2.0 ತಂತ್ರಾಂಶಕ್ಕೆ ಅಪ್‌ಗ್ರೇಡ್ ಮಾಡಿ ಅಕ್ರಮ ತಡೆಗೆ ಸುರಕ್ಷಿತ ಕ್ರಮಗಳು ಮತ್ತು ಆದಾಯ ಸೋರಿಕೆಗೆ ಸಾಕಷ್ಟು ಬದಲಾವಣೆ ತರಲಾಗಿದೆ.
    ಕೆಲ ಕಿಡಿಗೇಡಿಗಳು, ಖಾಲಿ ಇರುವ ಸೈಟ್, ಭೂಮಿಗೆ ಅಥವಾ ಸರ್ಕಾರಿ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿಸಿ ಬೇರೆಯವರಿಗೆ ಮಾರಾಟ ಮಾಡುವುದು ಅಥವಾ ಕಬ್ಜ ಮಾಡುತ್ತಿದ್ದಾರೆ. ಇದರಿಂದ ಜಮೀನು ಖರೀದಿಸಿದವರು ಮತ್ತು ಅಸಲಿ ಭೂಮಾಲೀಕರಿಗೆ ಅನ್ಯಾಯವಾಗುತ್ತಿದೆ. ಅದರಲ್ಲಿಯೂ ದಸ್ತಾವೇಜುಗಳಿಗೆ ಬರುವ ಪಕ್ಷಗಾರರ ಹಾಜರುಪಡಿಸುವ ಆಸ್ತಿಯ ದಾಖಲೆ ಪತ್ರಗಳ ಅಸಲಿತನ ಪರೀಕ್ಷೆ ಮಾಡುವ ಅಥವಾ ನೋಂದಣಿಗೆ ನಿರಾಕರಿಸುವ ಅಧಿಕಾರ ಸಬ್ ರಿಜಿಸ್ಟ್ರಾರ್‌ಗಳು ಹೊಂದಿಲ್ಲ. ಇದನ್ನೇ ದುರುಪಯೋಗಪಡಿಸಿಕೊಂಡು ನಕಲಿ ದಾಖಲೆ ಸಲ್ಲಿಸಿ ಅಕ್ರಮವಾಗಿ ಮಾರಾಟ ಮಾಡುವ ವಂಚಕರಿಗೆ ಬ್ರೇಕ್ ಬಿದ್ದಿಲ್ಲ. ಆದರಿಂದ ಭೂಗಳ್ಳರಿಗೆ ಕಡಿವಾಣ ಹಾಕುವ ಉದ್ದೇಶಕ್ಕೆ ದಸ್ತಾವೇಜುಗಳ ನೋಂದಣಿ ವೇಳೆ ಎರಡು ಪಕ್ಷಗಾರರ ಆಧಾರ್ ದೃಢೀಕರಣ ವ್ಯವಸ್ಥೆಯನ್ನು ಶೀಘ್ರದಲ್ಲಿಯೇ ಅಳವಡಿಸಲಾಗುತ್ತಿದೆ.

    ಕಾವೇರಿ 2.0 ವೆಬ್‌ಸೈಟ್‌ನಲ್ಲಿ ಲಾಗಿನ್ ಆಗಿ ದಾಖಲೆ ಅಪ್‌ಲೋಡ್ ಮಾಡುವಾಗ ಪಕ್ಷಗಾರರ ಆಧಾರ್ ನಂಬರ್ ನಮೂದು ಮಾಡಲಾಗುತ್ತಿತ್ತು. ಇದೀಗ ಮುಂದುವರಿದು ಎರಡು ಪಕ್ಷಗಾರರ ಆಧಾರ್ ನಂಬರ್ ನಮೂದು ಮಾಡಿದ ಕೂಡಲೇ ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್‌ಗೆ ಒಟಿಪಿ ಬರಲಿದ್ದು, ಅದನ್ನು ನಮೂದು ಮಾಡಿದ ಮೇಲೆ ಮಾತ್ರ ರಿಜಿಸ್ಟ್ರೇಷನ್ ಪ್ರಕ್ರಿಯೆ ಮುಂದುವರಿಯಲಿದೆ. ಒಬ್ಬರ ಒಟಿಪಿ ಅಪ್‌ಲೋಡ್ ಮಾಡದೆ ಇದ್ದರೂ ನೋಂದಣಿ ಆಗುವುದಿಲ್ಲ. ಜೊತೆಗೆ ಆಧಾರ್ ಕಾರ್ಡ್‌ನಲ್ಲಿ ಇರುವ ಹೆಸರು ಮತ್ತು ದಸ್ತಾವೇಜು, ಆಸ್ತಿ ದಾಖಲೆಗಳಲ್ಲಿ ಇರುವ ಹೆಸರು ಒಂದೇ ಆಗಿರಬೇಕು. ಹೋಲಿಕೆ ಆಗದಿದ್ದರೆ ಅಂತಹ ದಸ್ತಾವೇಜುಗಳನ್ನು ಮಾನ್ಯ ಮಾಡುವುದಿಲ್ಲ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

    ಆಸ್ತಿಗೂ ಲಿಂಕ್ ಆಗಿದ್ದರೆ ಉತ್ತಮ

    ರಾಜ್ಯದಲ್ಲಿ ಈಗಾಗಲೇ ಪಹಣಿಗೆ ವಾರಸುದಾರರ ಆಧಾರ್ ಲಿಂಕ್ ಮಾಡಲಾಗುತ್ತಿದೆ. ಅದೇ ರೀತಿ ಎಲ್ಲ ಆಸ್ತಿಗಳಿಗೆ ಆಧಾರ್ ಲಿಂಕ್ ಮಾಡಬೇಕು. ದಸ್ತಾವೇಜು ನೋಂದಣಿಗೆ ಸಬ್ ರಿಜಿಸ್ಟ್ರಾರ್ ಕಚೇರಿಗೆ ಬಂದಾಗ ಆಧಾರ್ ಅಥವಾ ಆಸ್ತಿ ವಿಶೇಷ ಸಂಖ್ಯೆಯನ್ನು ಕಾವೇರಿ 2.0ರಲ್ಲಿ ನಮೂದು ಮಾಡಿದ ಕೂಡಲೇ ವಾರಸುದಾರರ ಸ್ವವಿವರ ಓಪನ್ ಆಗಬೇಕು. ಬಳಿಕ ಆಧಾರ್ ಒಟಿಪಿ ಪಡೆದು ದೃಢೀಕರಿಸಿ ಆಸ್ತಿ ರಿಜಿಸ್ಟ್ರೇಷನ್ ಮಾಡಿದರೆ ಸಂಪೂರ್ಣ ಅಕ್ರಮ ತಡೆಗಟ್ಟಲು ಸಾಧ್ಯವಾಗುತ್ತದೆ ಎಂಬುದು ಹಿರಿಯ ಉಪ ನೋಂದಣಾಧಿಕಾರಿಗಳ ಅಭಿಪ್ರಾಯವಾಗಿದೆ.

    ಯಾರ ನಂಬರ್ ಕೊಡಬೇಕು?

    ಆಸ್ತಿ ನೋಂದಣಿಗೆ ಬಂದಾಗ ಪಕ್ಷಗಾರರ ಆಧಾರ್ ದೃಢೀಕರಿಸುವುದು ಸರಿಯಷ್ಟೇ. ಇದಲ್ಲದೆ, ಬ್ಯಾಂಕ್ ಸಾಲ ಪಡೆದಾಗ ಡಿಸ್ಚಾರ್ಜ್ ಡೀಡ್, ಪಾಲುದಾರಿಗೆ, ಕಂಪನಿ ನೋಂದಣಿಗೆ ಯಾರ ಆಧಾರ್ ನಂಬರ್ ಕೊಡಬೇಕೆಂಬ ಗೊಂದಲ ಉಂಟಾಗಿದೆ. ಈ ಬಗ್ಗೆ ನೋಂದಣಿ ಮತ್ತು ಮುದ್ರಾಂಕ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಬೇಕೆಂಬುದು ವಕೀಲರ ಒತ್ತಾಯವಾಗಿದೆ.

    ಸರ್ವರ್ ಸಜ್ಜುಗೊಳಿಸಿ

    ಈ ಮೊದಲು ಸಹ ಮೊಬೈಲ್ ಒಟಿಪಿ ಜಾರಿಗೆ ತರಲಾಗಿತ್ತು. ಒಬ್ಬ ವ್ಯಕ್ತಿ ಒಂದೇ ಮೊಬೈಲ್ ನಂಬರ್ ಕೊಟ್ಟು ಅದಕ್ಕೆ ಬರುವ ಒಂದೇ ಒಟಿಪಿಯನ್ನು ನೂರಾರು ಬಾರಿ ಕೊಟ್ಟು ದಸ್ತಾವೇಜು ನೋಂದಣಿ ಮಾಡಿಸಿದ್ದ ಪ್ರಸಂಗ ಬೆಳಕಿಗೆ ಬಂದಿತ್ತು. ಜೊತೆಗೆ ಸರ್ವರ್ ಸಮಸ್ಯೆಯಿಂದ ಒಟಿಪಿ ಬಾರದೆ ಇಡೀ ದಿನ ರಿಜಿಸ್ಟ್ರೇಷನ್ ಪೂರ್ಣವಾಗುತ್ತಿರಲಿಲ್ಲ. ಕೊನೆಗೆ ಜನರ ಆಕ್ರೋಶಕ್ಕೆ ಮಣಿದು ಒಟಿಪಿ ಪದ್ಧತಿ ಕೈಬಿಡಲಾಗಿತ್ತು. ಇದೀಗ ಆಧಾರ್ ದೃಢೀಕರಣ ಜಾರಿಗೆ ತಂದಿರುವುದು ಉತ್ತಮ ನಿರ್ಧಾರವಾಗಿದೆ. ಈ ಯೋಜನೆ ಯಶಸ್ವಿಯಾಗಲು ಕಾವೇರಿ 2.0 ತಂತ್ರಾಂಶದಲ್ಲಿ ಮತ್ತು ಸರ್ವರ್‌ನಲ್ಲಿ ಯಾವುದೇ ಸಮಸ್ಯೆ ಎದುರಾಗದಂತೆ ಸಜ್ಜುಗೊಳಿಸಬೇಕು. ಇಲ್ಲವಾದರೆ, ಮತ್ತೆ ವಿಲವಾಗಬೇಕಾಗುತ್ತದೆ.

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts