More

    ಮೇಕೆ ಜೊತೆ ಯುವಕನ ಮದ್ವೆ! ಕುಟುಂಬಸ್ಥರ ಸಮ್ಮುಖದಲ್ಲೇ ತಾಳಿ ಕಟ್ಟಿದ… ಕಾರಣ ಕೇಳಿದ್ರೆ ಹುಬ್ಬೇರಿಸ್ತೀರಿ

    ಕೃಷ್ಣಾ(ಆಂಧ್ರಪ್ರದೇಶ): ಇಲ್ಲೊಬ್ಬ ಯುವಕ ಮೇಕೆ ಜೊತೆ ಮದ್ವೆಯಾಗಿದ್ದಾನೆ! ಇದು ಯಾವ ಸಿನಿಮಾ ಕಥೆಯಲ್ಲ. ನಿಜ ಜೀವನದಲ್ಲೇ ಯುವಕನೊಬ್ಬ ಮೇಕೆಯನ್ನು ಶಾಸ್ತ್ರೋಕ್ತವಾಗಿ ಮದುವೆಯಾದ ಸ್ಟೋರಿ. ಈ ಸುದ್ದಿ ನೋಡಿ ಅರೇ, ಇದ್ಹೇನಿದು? ಅಂತ ಹುಬ್ಬೇರಿಸೋದು ಸಹಜ. ಅಂದಹಾಗೆ ಮೇಕೆ ಜತೆ ಆತ ಮದ್ವೆ ಆಗಿದ್ದಕ್ಕೆ ಕಾರಣ ಜ್ಯೋತಿಷಿ!

    ಆಂಧ್ರದ ಕೃಷ್ಣಾ ಜಿಲ್ಲೆಯ ನೂಜಿವೀಡು ಮೂಲದ ಯುವಕನೊಬ್ಬ ಮದುವೆಯಾಗಲು ಕನ್ಯೆ ಹುಡುಕುತ್ತಿದ್ದ. ಇದೇ ವೇಳೆ ಮನೆಯ ಹಿರಿಯರು ಯುವಕನ ಮದುವೆ ಬಗ್ಗೆ ಜ್ಯೋತಿಷಿ ಬಳಿ ಪ್ರಸ್ತಾಪಿಸಿದ್ದರು. ಯುವಕನ ಜಾತಕದಲ್ಲಿ ಎರಡು ಮದುವೆ ಯೋಗ ಇದೆ. ಮೊದಲ ಮದುವೆ ಸಂಬಂಧ ಯಾವುದಾದರೂ ಕಾರಣದಿಂದ ಮುರಿದುಬೀಳುವ ಸಾಧ್ಯತೆ ಇದೆ. ಅನಿವಾರ್ಯವಾಗಿ 2ನೇ ಮದುವೆ ಆಗಬೇಕಾದ ಪರಿಸ್ಥಿತಿ ಬರಬಹುದು ಎಂದು ಜ್ಯೋತಿಷಿ ಹೇಳಿದ್ದಾರೆ.

    ಇದರಿಂದ ಆತಂಕಗೊಂಡ ಯುವಕನ ಕುಟುಂಬಸ್ಥರು ಈ ಸಮಸ್ಯೆಗೆ ಪರಿಹಾರವೇನು ಸ್ವಾಮಿ? ನಮ್ಮ ಮಗನ ದಾಂಪತ್ಯ ಜೀವನದಲ್ಲಿ ಯಾವುದೇ ಅಲ್ಲೋಲ ಕಲ್ಲೋಲ ಸೃಷ್ಟಿಯಾಗೋದು ಬೇಡ. ಅವನು ಚೆನ್ನಾಗಿರಬೇಕು. 2 ಮದುವೆ ಆಗುವ ಸಂದರ್ಭ ಬರಬಾರದು. ಇದಕ್ಕೆ ನೀವೆ ಪರಿಹಾರ ಸೂಚಿಸಿ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಜ್ಯೋತಿಷಿ, ಯುವಕನಿಗೆ ಮೇಕೆ ಜೊತೆ ಮೊದಲು ವಿವಾಹ ಮಾಡಿಸಿಬಿಡಿ. ಅಲ್ಲಿಗೆ ದೋಷ ಪರಿಹಾರವಾಗುತ್ತದೆ. ನಂತರ ಯುವಕನಿಗೆ ಕನ್ಯೆ ಹುಡುಕಿ ಮದುವೆ ಮಾಡಿ ಎಂದು ಸಲಹೆ ನೀಡಿದ್ದರಂತೆ.

    ಜ್ಯೋತಿಷಿ ಮಾತಿನಂತೆ ಯುಗಾದಿ ಹಬ್ಬದ ದಿನ ನೂಜಿವೀಡು ನವಗ್ರಹ ದೇವಸ್ಥಾನದಲ್ಲಿ ಪುರೋಹಿತರ ಸಮ್ಮುಖದಲ್ಲಿ ಸಂಪ್ರದಾಯಬದ್ಧವಾಗಿ ಯುವಕ ಮೇಕೆ ಜೊತೆ ಮದುವೆಯಾಗಿದ್ದಾನೆ. ಅಲ್ಲಿದ್ದವರಿಗೆ ಸಿಹಿಯನ್ನೂ ಹಂಚಲಾಗಿದೆ. ಅಲ್ಲಿಗೆ ಮೊದಲ ಮದುವೆಯ ಗಂಡಾಂತರ ತಪ್ಪಿದ್ದು, ಮುಂದೆ ಹುಡುಗಿ ಜೊತೆ ಮದುವೆಯಾಗಲು ಯಾವುದೇ ತೊಂದರೆ ಆಗಲ್ಲ ಎಂದು ಯುವಕನ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಮೇಕೆ ಜೊತೆ ಮದ್ವೆಯಾದ ಯುವಕ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಕೆಲವರು ಇದಲ್ಲ ಸಹಜ ಎಂದರೆ, ಇನ್ನೂ ಕೆಲವರು ಮೂಢನಂಬಿಕೆ ಎಂದೂ ಅಭಿಪ್ರಾಯಪಟ್ಟಿದೆ.

    ನಾನೀಗ ಗರ್ಭಿಣಿ, ನನ್ನನ್ನು ತಬ್ಬಲಿ ಮಾಡಿಬಿಟ್ರು… ಮನದ ನೋವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಮೇಘನಾ

    ‘ನನ್ನಮ್ಮ ಸೂಪರ್​ ಸ್ಟಾರ್​’ ಟ್ರೋಫಿಗೆ ಮುತ್ತಿಟ್ಟ ಮಾಸ್ಟರ್ ಆನಂದ್​ ಪುತ್ರಿ ವಂಶಿಕಾ! ಅಮ್ಮ-ಮಗಳಿಗೆ ಸಿಕ್ಕ ಬಹುಮಾನ ಎಷ್ಟು?

    ಐಎಂಎ ವಂಚನೆ ಪ್ರಕರಣ: ರೋಷನ್​ ಬೇಗ್​ಗೆ ಸೇರಿದ 4 ಕಾರು ಜಪ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts