More

    ಮಿದುಳಿನ ರಕ್ತನಾಳ ಛಿದ್ರಛಿದ್ರ… ಜಿಮ್​ನಲ್ಲೇ ಮೃತಪಟ್ಟ ಮಹಿಳೆಯ ಮರಣೋತ್ತರ ವರದಿಯಲ್ಲಿದೆ ಸ್ಫೋಟಕ ಮಾಹಿತಿ

    ಬೆಂಗಳೂರು: ಜಿಮ್​ನಲ್ಲಿ ವರ್ಕೌಟ್​ ಮಾಡುವಾಗ ಎದೆನೋವು ಕಾಣಿಸಿಕೊಂಡು ನಟ ಪುನೀತ್​ ರಾಜ್​ಕುಮಾರ್​ ಹೃದಯಸ್ತಂಭನದಿಂದ ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಮಾ.26ರಂದು ಜಿಮ್​ನಲ್ಲಿ ವರ್ಕೌಟ್​ ಮಾಡುವಾಗಲೇ 35 ವರ್ಷದ ಮಹಿಳೆ ವಿನಯಾ ವಿಠಲ್​ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದರು. ಜಿಮ್​ನಲ್ಲಿ ವರ್ಕ್​ಔಟ್​ ಮಾಡುತ್ತಲೇ ಕುಸಿದು ಬೀಳುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಈ ಘಟನೆ ಜಿಮ್​ಗೆ ಹೋಗುವವರಲ್ಲಿ ಆತಂಕ ಹೆಚ್ಚಿಸಿದ್ದು ನಿಜ. ಇದೀಗ ವಿನಯಾರ ಮರಣೋತ್ತರ ವರದಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ.

    ಜಿಮ್​ನಲ್ಲಿ ಕಸರತ್ತು ಮಾಡುವಾಗ ಕೇವಲ ಹೃದಯಾಘಾತ ಮಾತ್ರ ಸಂಭವಿಸುವುದಿಲ್ಲ. ಜತೆಗೆ ಮಿದುಳಿನಲ್ಲಿ ರಕ್ತ ಸ್ರಾವ ಉಂಟಾಗಿ ಸಾವನ್ನಪ್ಪುವ ಸನ್ನಿವೇಶಗಳೂ ಇವೆ. ಅತೀ ಭಾರದ ಸಲಕರಣ ಎತ್ತುವಾಗ ರಕ್ತನಾಳಗಳು ಛಿದ್ರಗೊಂಡು ರಕ್ತ ಸ್ರಾವವಾಗಿ ಹೆಪ್ಪುಗಟ್ಟಿ ರಕ್ತ ಸಂಚಲನ ಸ್ಥಬ್ಧವಾಗಲಿದೆ ಎಂಬುದು ವಿನಯಾ ಪ್ರಕರಣದಿಂದ ಗೊತ್ತಾಗಿದೆ! ಮಂಗಳೂರು ಮೂಲದ ವಿನಯಾ ವಿಠಲ್​, ಮಲ್ಲೇಶಪಾಳ್ಯದ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ನೆಲೆಸಿದ್ದರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ವಿನಯಾ ವಿಠಲ್​, ಮನೆ ಸಮೀಪದ ಚಾಲೆಂಜ್​ ಹೆಲ್ತ್​ ಕ್ಲಬ್​ನಲ್ಲಿ ಹೋಗುತ್ತಿದ್ದರು. ಪ್ರತಿದಿನ ಬೆಳಗ್ಗೆ 6ಕ್ಕೆ ಹೋಗಿ 8 ಗಂಟೆವರೆಗೂ ವರ್ಕೌಟ್​ ಮಾಡುತ್ತಿದ್ದ ವಿನಯಾ ವಿಠಲ್​, ಮಾರ್ಚ್​ 26ರಂದು ಸಹ ಜಿಮ್​ಗೆ ಹೋಗಿದ್ದರು.

    ಅಂದು ಜಿಮ್​ನಲ್ಲಿ ಭಾರ ಎತ್ತುವಾಗ ಸುಸ್ತಾಗಿ ಕೂರಲು ಪ್ರಯತ್ನಿಸಿದ್ದು, ಸಾಧ್ಯವಾಗದೆ ಹಿಂದಕ್ಕೆ ಕುಸಿದು ಬಿದ್ದು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದರು. ಬೈಯಪ್ಪನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದರು. ಸಿ.ವಿ. ರಾಮನ್​ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ವರದಿ ಕೈ ಸೇರಿದೆ. ವಿನಯಾ ವಿಠಲ್​, ಅತೀ ಭಾರ ಎತ್ತುವಾಗ ಅವರ ಮಿದುಳಿನ ರಕ್ತನಾಳಗಳು ಛಿದ್ರವಾಗಿ ರಕ್ತಸ್ರಾವ ಉಂಟಾಗಿ ಹಠತ್​ ಅಸುನೀಗಿದ್ದಾರೆ. ಇದನ್ನು ವೈದ್ಯಕೀಯವಾಗಿ ಸೆರೆಬ್ರಲ್​ ಹೆಮರೋಜ್​ ಎನ್ನಲಾಗುತ್ತೆ.

    ವರ್ಕೌಟ್​ ಮಾಡುವಾಗ ಅತೀ ಭಾರದ ಸಲಕರಣ ಎತ್ತುವಾಗ ರಕ್ತದೊತ್ತಡ ಹೆಚ್ಚಾಗಿ ಮೆದುಳಿನ ಮೇಲೂ ಒತ್ತಡ ಏರಿಕೆಯಾಗಲಿದೆ. ಪರಿಣಾಮ ರಕ್ತನಾಳಗಳು ಛಿದ್ರಗೊಂಡು ರಕ್ತ ಸ್ರಾವವಾಗಿ ಹೆಪ್ಪುಗಟ್ಟಿ ರಕ್ತ ಸಂಚಲನ ಸ್ಥಬ್ಧವಾಗಲಿದೆ ಎಂದು ವೈದ್ಯಕೀಯ ವರದಿಯಲ್ಲಿ ಉಲ್ಲೇಖವಾಗಿದೆ ಎಂದು ಈಶಾನ್ಯ ವಿಭಾಗ ಡಿಸಿಪಿ ಡಾ.ಭೀಮಾಶಂಕರ್​ ಗುಳೇದ್​ ತಿಳಿಸಿದ್ದಾರೆ.

    ಪ್ರೀತಿಸಿ ಮದ್ವೆಯಾದ 7 ದಿನಕ್ಕೇ ಯುವತಿ ಬೀದಿಪಾಲು! 3 ದಿನದಲ್ಲಿ 2 ಬಾರಿ ಮದ್ವೆ ಆಗಿದ್ದವ ಇದ್ದಕ್ಕಿದ್ದಂತೆ ಏನಾದ?

    ಜಿಮ್​ನಲ್ಲೇ ಮಹಿಳೆ ಸಾವು: ವರ್ಕೌಟ್​ನಿಂದ ಹೃದಯಾಘಾತ? ವೈದ್ಯರು ಕೊಟ್ಟ ಮಹತ್ವದ ಮಾಹಿತಿ ಇಲ್ಲಿದೆ

    ಮೇಕೆ ಜೊತೆ ಯುವಕನ ಮದ್ವೆ! ಕುಟುಂಬಸ್ಥರ ಸಮ್ಮುಖದಲ್ಲೇ ತಾಳಿ ಕಟ್ಟಿದ… ಕಾರಣ ಕೇಳಿದ್ರೆ ಹುಬ್ಬೇರಿಸ್ತೀರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts