More

    ‘ನನ್ನಮ್ಮ ಸೂಪರ್​ ಸ್ಟಾರ್​’ ಟ್ರೋಫಿಗೆ ಮುತ್ತಿಟ್ಟ ಮಾಸ್ಟರ್ ಆನಂದ್​ ಪುತ್ರಿ ವಂಶಿಕಾ! ಅಮ್ಮ-ಮಗಳಿಗೆ ಸಿಕ್ಕ ಬಹುಮಾನ ಎಷ್ಟು?

    ಬೆಂಗಳೂರು: ರಾಜ್ಯದಲ್ಲಿ ಭಾರೀ ಜನಪ್ರಿಯತೆ ಗಳಿಸಿದ್ದ ‘ನನ್ನಮ್ಮ ಸೂಪರ್​ ಸ್ಟಾರ್​’ ರಿಯಾಲಿಟಿ ಶೋ ಸೀಸಸ್​-1ಕ್ಕೆ ಭಾನುವಾರ ತೆರೆಬಿದ್ದಿದ್ದು, ಗ್ರ್ಯಾಂಡ್​ ಫಿನಾಲೆ ಪ್ರವೇಶಿಸಿದ್ದ ಮಕ್ಕಳು ಮತ್ತು ತಾಯಂದಿರ 6 ಜೋಡಿ ಪೈಕಿ ಮಾಸ್ಟರ್​ ಆನಂದ್​ ಪುತ್ರಿ ವಂಶಿಕಾ ಮತ್ತು ಅವರ ಪತ್ನಿ ಯಶಸ್ವಿನಿ ಜೋಡಿ ವಿನ್ನರ್​ ಆಗಿ ಹೊರ ಹೊಮ್ಮಿದೆ.

    ತಾಯಿ-ಮಗಳಾದ ಯಶಸ್ವಿಸಿ ಮತ್ತು ವಂಶಿಕಾ ಜೋಡಿ ‘ನನ್ನಮ್ಮ ಸೂಪರ್​ ಸ್ಟಾರ್​’ ಟ್ರೋಫಿಗೆ ಮುತ್ತಿಟ್ಟಿದ್ದು, 5 ಲಕ್ಷ ರೂಪಾಯಿ ಬಹುಮಾನವೂ ಸಿಕ್ಕಿದೆ. ಮಗುವನ್ನು ತಾಯಿ ಎತ್ತಿಕೊಂಡಿರುವ ವಿನ್ಯಾಸದಲ್ಲಿ ಟ್ರೋಫಿ ಇದೆ. ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ನನ್ನಮ್ಮ ಸೂಪರ್​ ಸ್ಟಾರ್​’ ರಿಯಾಲಿಟಿ ಶೋನ ಮೊದಲ ಸಂಚಿಕೆಯೇ ಜನಮನ್ನಣೆ ಗಳಿಸಿತ್ತು. ಮಕ್ಕಳ ಫಟಾಫಟ್​ ಮಾತು, ತಂಟತನ, ಮುಗ್ಧತೆ ಕಣ್ತುಂಬಿಕೊಂಡ ಪ್ರೇಕ್ಷಕರು, ಮಕ್ಕಳಿಗೆ ಮನತುಂಬಾ ಹಾರೈಸಿದ್ದಾರೆ. ಶೋ ಆರಂಭವಾದಗಿಂದಲೂ ಪ್ರತಿ ಅಮ್ಮ-ಮಗಳ ಜೋಡಿಯೂ ಪ್ರತಿ ಎಫಿಸೋಡ್​ನಲ್ಲೂ ಮಾಡುತ್ತಿದ್ದ ಮೋಡಿಗೆ ಪ್ರೇಕ್ಷಕರು ಮಾರುಹೋಗುತ್ತಲೇ ಇದ್ದರು. ‘ನನ್ನಮ್ಮ ಸೂಪರ್​ ಸ್ಟಾರ್​’ ಶೋ ವಿನ್ನರ್​ ಯಾರೆಂಬ ಕುತೂಹಲಕ್ಕೆ ಅದ್ದೂರಿ ವೇದಿಕೆಯಲ್ಲಿ ತೆರೆಬಿದ್ದಿದೆ.

    'ನನ್ನಮ್ಮ ಸೂಪರ್​ ಸ್ಟಾರ್​' ಟ್ರೋಫಿಗೆ ಮುತ್ತಿಟ್ಟ ಮಾಸ್ಟರ್ ಆನಂದ್​ ಪುತ್ರಿ ವಂಶಿಕಾ! ಅಮ್ಮ-ಮಗಳಿಗೆ ಸಿಕ್ಕ ಬಹುಮಾನ ಎಷ್ಟು?

    ಅಮ್ಮ-ಮಗಳ ಜೋಡಿಯಾದ ಪುನೀತಾ ಮತ್ತು ಆರ್ಯಗೆ ರನ್ನರ್​ ಅಪ್​ ಆಗಿ ಹೊರ ಹೊಮ್ಮಿತು. ವಿಂದ್ಯಾ-ರೋಹಿತ್​ 3ನೇ ಸ್ಥಾನ, ಸುಪ್ರೀತಾ-ಇಬ್ಬನಿಗೆ 4ನೇ ಸ್ಥಾನ, ಜಾಹ್ನವಿ-ಗ್ರಂಥ್​ 5ನೇ ಸ್ಥಾನ, ಅದ್ವಿಕ್​-ನಂದಿನಿ 6ನೇ ಸ್ಥಾನ ಪಡೆದರು.

    'ನನ್ನಮ್ಮ ಸೂಪರ್​ ಸ್ಟಾರ್​' ಟ್ರೋಫಿಗೆ ಮುತ್ತಿಟ್ಟ ಮಾಸ್ಟರ್ ಆನಂದ್​ ಪುತ್ರಿ ವಂಶಿಕಾ! ಅಮ್ಮ-ಮಗಳಿಗೆ ಸಿಕ್ಕ ಬಹುಮಾನ ಎಷ್ಟು?

    ಈ ರಿಯಾಲಿಟಿ ಶೋಗೆ ಹಿರಿಯನಟಿ ತಾರಾ ಅನುರಾಧ, ಅನುಪ್ರಭಾಕರ್​, ಸೃಜನ್​ ಲೋಕೇಶ್​ ಅವರು ಜಡ್ಜಸ್​ ಆಗಿದ್ದರು. ನಟಿ ಅನುಮಪ ಗೌಡ ಅವರ ನಿರೂಪಣೆಯಲ್ಲಿ ಕಾರ್ಯಕ್ರಮ ಮೂಡಿಬಂತು. ಗ್ರ್ಯಾಂಡ್​ ಫಿನಾಲೆಗೆ ರಿಯಲ್​ ಸ್ಟಾರ್​ ಉಪೇಂದ್ರ ಅತಿಥಿಯಾಗಿ ಆಗಮಿಸಿದ್ದರು.

    ಜಿಮ್​ನಲ್ಲೇ ಮಹಿಳೆ ಸಾವು: ವರ್ಕೌಟ್​ನಿಂದ ಹೃದಯಾಘಾತ? ವೈದ್ಯರು ಕೊಟ್ಟ ಮಹತ್ವದ ಮಾಹಿತಿ ಇಲ್ಲಿದೆ

    ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ: ತಡರಾತ್ರಿ 26 ಸಚಿವರು ಸಾಮೂಹಿಕ ರಾಜೀನಾಮೆ

    ಐಎಂಎ ವಂಚನೆ ಪ್ರಕರಣ: ರೋಷನ್​ ಬೇಗ್​ಗೆ ಸೇರಿದ 4 ಕಾರು ಜಪ್ತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts