More

    ತೆರಿಗೆ ಸುಧಾರಣೆಯಲ್ಲಿ ಪ್ರಮುಖ ಮೈಲಿಗಲ್ಲು

    ಭಾರತದ ಅತಿದೊಡ್ಡ ತೆರಿಗೆ ಸುಧಾರಣೆಯಾದ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್​ಟಿ) ಹಲವು ವರ್ಷಗಳ ಪ್ರಯತ್ನ, ಚರ್ಚೆಯ ಬಳಿಕ 2017ರ ಜುಲೈ 1ರ ಮಧ್ಯರಾತ್ರಿಯಂದು ದೇಶಾದ್ಯಂತ ಜಾರಿಗೆ ತರಲಾಯಿತು. ತೆರಿಗೆ ಸಂಗ್ರಹಣೆಯಲ್ಲಿ ತಂತ್ರಜ್ಞಾನ ಬಳಸಿಕೊಳ್ಳುವುದರೊಂದಿಗೆ ಹಾಗೂ ಪ್ರತಿ ತಿಂಗಳು ಸರಾಸರಿ 1.70 ಲಕ್ಷ ಕೋಟಿ ರೂಪಾಯಿಗೂ ಅಧಿಕ ಆದಾಯ ಸಂಗ್ರಹಿಸುವ ಮೂಲಕ ಒಂದು ಮಾದರಿ ಬದಲಾವಣೆಯನ್ನೇ ಜಿಎಸ್​ಟಿ ಮಾಡಿದೆ ಎಂಬುದು ಗಮನಾರ್ಹ.

    ಅಬಕಾರಿ ಸುಂಕ, ಸೇವಾ ತೆರಿಗೆ, ವ್ಯಾಟ್ ಮತ್ತು ಸ್ಥಳೀಯ ತೆರಿಗೆಗಳನ್ನು ಒಟ್ಟುಗೂಡಿಸಿ ಜಿಎಸ್​ಟಿಯನ್ನು ರೂಪಿಸಲಾಗಿದೆ. ಜಿಎಸ್​ಟಿಯು ಹಣಕಾಸಿನ ಒಕ್ಕೂಟದ ಅಭೂತಪೂರ್ವ ನಿರ್ವಹಣೆಯ ಪ್ರತೀಕವಾಗಿದೆ. ಕೇಂದ್ರ ಸರ್ಕಾರ ಮತ್ತು ಎಲ್ಲ ರಾಜ್ಯಗಳು ಸೇರಿ ಜಿಎಸ್​ಟಿ ಮಂಡಳಿ ರಚಿಸಿಕೊಂಡಿದ್ದು, ಸುದೀರ್ಘ ಸಮಾಲೋಚನೆಗಳ ಮೂಲಕ ಈ ಹೊಸ ತೆರಿಗೆ ಪದ್ಧತಿಯ ಸುಗಮ ಕಾರ್ಯನಿರ್ವಹಣೆಗೆ ಅನುವು ಮಾಡಿಕೊಡುತ್ತಿವೆ. ಬಹು ತೆರಿಗೆ ಮತ್ತು ಕರಗಳನ್ನು ಜಿಎಸ್​ಟಿ ಒಳಗೊಳ್ಳುವ ಮೂಲಕ ಹೊರೆ ಕಡಿಮೆ ಮಾಡಿದೆ. ಪ್ರಾದೇಶಿಕ ಅಸಮತೋಲನ ಮತ್ತು ಅಂತಾರಾಜ್ಯ ಅಡೆತಡೆಗಳನ್ನು ತೆಗೆದುಹಾಕಿದೆ. ಇದೇ ರೀತಿ ಪೆಟ್ರೋಲ್, ಡೀಸೆಲ್, ವಿದ್ಯುತ್ ಮುಂತಾದ ಇಂಧನಗಳನ್ನು ಜಿಎಸ್​ಟಿ ವ್ಯಾಪ್ತಿಗೆ ತಂದು ದೇಶಾದ್ಯಂತ ಏಕರೂಪ ತೆರಿಗೆಯನ್ನು ವಿಸ್ತರಿಸಬೇಕು ಎಂದು ಪರಿಣತರು ಹೇಳುತ್ತಾರೆ. ಇತ್ತೀಚೆಗೆ ನಡೆದ ಜಿಎಸ್​ಟಿ ಮಂಡಳಿಯ 53ನೇ ಸಭೆಯಲ್ಲಿ ಈ ಬಗ್ಗೆ ರ್ಚಚಿಸಲಾಗಿದ್ದು, ‘ರಾಜ್ಯಗಳು ಸಹಮತಕ್ಕೆ ಬಂದರೆ ಪೆಟ್ರೋಲ್ ಮತ್ತು ಡೀಸೆಲ್​ನ್ನು ಜಿಎಸ್​ಟಿ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ಸಿದ್ಧವಿದೆ’ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಇಂಧನವು ಜಿಎಸ್​ಟಿ ವ್ಯಾಪ್ತಿಗೆ ಬಂದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ತಗ್ಗಲಿವೆ.

    ಕಟ್ಟುನಿಟ್ಟಿನ ಕ್ರಮ

    ಸುಧಾರಿತ ಅನುಸರಣೆ ಮತ್ತು ವ್ಯಾಪಾರ ಚಟುವಟಿಕೆಯಲ್ಲಿ ಚೇತರಿಕೆಯಿಂದಾಗಿ ಜಿಎಸ್​ಟಿ ಆದಾಯ ಸಂಗ್ರಹದಲ್ಲಿ ಬೆಳವಣಿಗೆಯಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ. ತೆರಿಗೆ ಸಂಗ್ರಹ ಕ್ರಮಗಳಲ್ಲಿ ಸಾಕಷ್ಟು ಸುಧಾರಣೆ ಮಾಡಲಾಗಿದೆ. ಆರಂಭದಲ್ಲಿದ್ದ ಗೊಂದಲಗಳನ್ನು ನಿವಾರಿಸಲಾಗಿದೆ. ಪ್ರಕ್ರಿಯೆಯನ್ನು ಸರಳಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ತೆರಿಗೆ ಆಡಳಿತವು ತೆರಿಗೆದಾರರು ಸಕಾಲಿಕವಾಗಿ ರಿಟರ್ನ್ಸ್ ಸಲ್ಲಿಸುವಂತೆ ತೆಗೆದುಕೊಂಡ ಹಲವಾರು ಕ್ರಮಗಳು ಸಾಕಷ್ಟು ಫಲ ನೀಡಿವೆ. ತಪು್ಪ ಮಾಡುವ ತೆರಿಗೆದಾರರ ವಿರುದ್ಧ ಕಟ್ಟುನಿಟ್ಟಾದ ಜಾರಿ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಇದಕ್ಕಾಗಿ ದತ್ತಾಂಶ ವಿಶ್ಲೇಷಣೆ ಮತ್ತು ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನ ಬಳಸಿಕೊಳ್ಳಲಾಗಿದೆ.

    ಸಾಗಿಬಂದ ಹಾದಿ

    • ಕೇಂದ್ರ ಜಿಎಸ್​ಟಿ, ಸಂಯೋಜಿತ ಜಿಎಸ್​ಟಿ ಎಂಬೆರಡು ಮುಖ್ಯ ವಿಷಯಗಳ ಕುರಿತಾದ ಕರಡು ಮಸೂದೆಗೆ 2016ರಲ್ಲಿ ಜಿಎಸ್​ಟಿ ಪರಿಷತ್ತಿನಿಂದ ಹಸಿರು ನಿಶಾನೆ.
    • ಇದಕ್ಕೆ ಸಂಬಂಧಿಸಿದ ಸಂವಿಧಾನ ತಿದ್ದುಪಡಿ ಕಾಯ್ದೆ (101ನೇ ಸಂವಿಧಾನ ತಿದ್ದುಪಡಿ ಅಧಿನಿಯಮ) 2016ರ ಅಕ್ಟೋಬರ್​ನಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕೃತವಾಯಿತು.
    • ಉದ್ಯಮಿಗಳು, ವ್ಯಾಪಾರಿಗಳು ಮತ್ತು ಜನರಿಂದ ಬಂದ ಸಾವಿರಾರು ಸಲಹೆಗಳನ್ನು ಗಮನದಲ್ಲಿರಿಸಿಕೊಂಡು ಪರಿಷ್ಕೃತ ಕರಡು ಜಿಎಸ್​ಟಿ ಕಾಯ್ದೆಯನ್ನು 2016ರ ನವೆಂಬರ್​ನಲ್ಲಿ ಪ್ರಕಟಿಸಲಾಯಿತು.
    • ಪರಿಷ್ಕೃತ ಕರಡು ಜಿಎಸ್​ಟಿ ಕಾಯ್ದೆ ರೂಪಿಸಿದ ಬಳಿಕ ನೋಂದಣಿ, ರಿಟರ್ನ್ಸ್,
    • ತೆರಿಗೆ ಪಾವತಿಯಂಥ ವಿಧಿವಿಧಾನ ಸಂಬಂಧಿತ ಕರಡು ನಿಯಮಾವಳಿಗಳನ್ನು ಮಾಡಿ, ಭಾಗೀದಾರರ ಸಲಹೆ ಪಡೆಯಲೆಂದು ಕೇಂದ್ರ/ರಾಜ್ಯ ಸರ್ಕಾರಗಳ ವೆಬ್​ಸೈಟ್​ಗಳಲ್ಲಿ ಪ್ರಕಟಿಸಲಾಯಿತು.
    • 2016ರ ಅಂತ್ಯದಲ್ಲಿ ಜಿಎಸ್​ಟಿ ಸಂಬಂಧಿತ ನಿಯಮ ಗಳಿಗೆ ಅಂತಿಮ ರೂಪ, ವಿಧಿವಿಧಾನಗಳ ರಚನೆ.
    • ಜಿಎಸ್​ಟಿ ಸಂಬಂಧಿತ ಎಲ್ಲ ವಿಷಯಗಳ ಬಗ್ಗೆ ಸಂಸತ್ತಿಗೆ ಹಾಗೂ ರಾಜ್ಯ ಶಾಸನಸಭೆಗಳಿಗೆ ಶಿಫಾರಸು ನೀಡುವ ಅಧಿಕಾರ ಜಿಎಸ್​ಟಿ ಪರಿಷತ್ತಿಗೆ.
    • ಸರಕು ಹಾಗೂ ಸೇವಾ ತೆರಿಗೆ (ಜಿಎಸ್​ಟಿ) 2017ರ ಜುಲೈ 1ರಂದು ಜಾರಿಗೆ ಬಂತು. ಮತ್ತು ಈ ದಿನವನ್ನು 2018ರ ಜುಲೈ 1ರಿಂದ ಜಿಎಸ್​ಟಿ ದಿನವಾಗಿ ಆಚರಿಸಲಾಗುತ್ತಿದೆ.

    ನೆಲದ ಮೇಲೆ ನೀವು ಕಣ್ಣೀರಿಟ್ಟಾಗ… ಟೀಮ್ ಇಂಡಿಯಾ ಕ್ಯಾಪ್ಟನ್​ಗೆ ಸಲಾಂ ಎಂದ ಪಾಕ್ ಮಾಜಿ ಕ್ರಿಕೆಟಿಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts