4ನೇ ಕ್ಲಾಸ್​​ನಲ್ಲಿ ಆಡಿದ್ದ ಜಗಳಕ್ಕೆ 50 ವರ್ಷಗಳ ಬಳಿಕ ಸೇಡು ತೀರಿಸಿಕೊಂಡ ಗೆಳೆಯ!: ನಡೆದಿದ್ದೇನು..? | Revenge

dk - 2025-06-10T174205.585
Published on: 

Revenge: ತನ್ನ ಬಾಲ್ಯದ ಘಟನೆಗೆ 50 ವರ್ಷಗಳ ಬಳಿಕ ಗೆಳೆಯನ ಮೇಲೆ ಹಲ್ಲೆ ನಡೆಸಿ ಸೇಡು ತಿರಿಸಿಕೊಂಡ ಅಪರೂಪದ ಘಟನೆ ಇದೀಗ ಕೇರಳದಲ್ಲಿ ಬೆಳಕಿಗೆ ಬಂದಿದೆ.

ಹೌದು, ಕೇರಳದ ಕಾಸರಗೋಡು ಜಿಲ್ಲೆಯಲ್ಲಿ 62 ವರ್ಷದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಪೊಲೀಸರು ಇದು 50 ವರ್ಷದ ವ್ಯಕ್ತಿಯ ಬಾಲ್ಯದ ದ್ವೇಷದ ಪ್ರಕರಣ ಎಂದು ಹೇಳಿದ್ದಾರೆ.

ಜೂ.2ರಂದು ಹಲ್ಲೆ ನಡೆದ ಬಳಿಕ ಬಾಲಕೃಷ್ಣನ್ ಅವರ ಮಾಜಿ ಸಹಪಾಠಿ ವಿಜೆ ಬಾಬು ಅವರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬಾಲಕೃಷ್ಣನ್ ಮತ್ತು ಮ್ಯಾಥ್ಯೂ ವಲಿಯಪ್ಲಕ್ಕಲ್ ಎಂದು ಗುರುತಿಸಲಾದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಎಫ್‌ಐಆರ್ ಪ್ರಕಾರ, ಬಾಲಕೃಷ್ಣನ್ 4 ನೇ ತರಗತಿಯಲ್ಲಿದ್ದಾಗ ನಡೆದ ದಾಳಿಗೆ ಪ್ರತೀಕಾರವಾಗಿ ಬಾಬು ಮೇಲೆ ಹಲ್ಲೆ ನಡೆಸಿದ್ದಾರೆ. ಕೆಲವು ದಿನಗಳ ಹಿಂದೆ ನಾಲ್ಕನೇ ತರಗತಿಯ ಘಟನೆಯ ಬಗ್ಗೆ ಬಾಬು ಮತ್ತು ಬಾಲಕೃಷ್ಣನ್ ನಡುವೆ ಮಾತಿನ ಚಕಮಕಿ ನಡೆದಿತ್ತು ಮತ್ತು ವಿಷಯ ಬಗೆಹರಿದಿದ್ದರೂ, ಜೂ. 2 ರಂದು ಬಾಲಕೃಷ್ಣನ್ ಮತ್ತು ಮ್ಯಾಥ್ಯೂ ಬಾಬು ಅವರು ಮತ್ತೆ ಜಗಳವಾಡಿ ಹಲ್ಲೆ ನಡೆಸಿದ್ದಾರೆ.

ಬಾಲಕೃಷ್ಣನ್​​ ಬಾಬು ಅವರ ಕಾಲರ್​​ ಹಿಡಿದುಕೊಂಡಿದ್ದಾಗ, ಮಾಥ್ಯೂ ಎಂಬಾತ ಬಾಬು ಮುಖಕ್ಕೆ ಹಾಗೂ ದೇಹದ ವಿವಿಧ ಭಾಗಗಳಿಗೆ ಕಲ್ಲಿನಿಂದ ಜಜ್ಜಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಬಾಬು ಪ್ರಸ್ತುತ ಪರಿಯಾರಂನ ಕಣ್ಣೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಯುತ್ತಿದೆ ಎಂದು ಠಾಣಾಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್​​)