More

    ಗುಯ್ಯ ಗ್ರಾಮಸ್ಥರ ಆತಂಕ ಹೆಚ್ಚಿಸಿದ ಕಾಡಾನೆ ಹಿಂಡು

    ಸಿದ್ದಾಪುರ: ಕೆಲ ದಿನಗಳಿಂದ ಕಾಡಾನೆಗಳು ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ಕೃಷಿ ಫಸಲು ನಾಶ ಮಾಡುತ್ತಿದ್ದು, ಗುಯ್ಯ ಗ್ರಾಮಸ್ಥರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ.

    ಗ್ರಾಮದ ಮೂಕೊಂಡ ಸುಬ್ರಮಣ್ಯ ಅವರ ಕಾಫಿ ತೋಟದಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳು, ಸೋಮವಾರ ರಾತ್ರಿ ಮನೆ ಅಂಗಳ ಪ್ರವೇಶಿಸಿ ಹೂಕುಂಡಗಳನ್ನು ನಾಶಪಡಿಸಿವೆ. ಇದರಿಂದ ಮನೆಯಲ್ಲಿದ್ದವರು ಭಯಭೀತರಾಗಿದ್ದಾರೆ.

    ಹತ್ತಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಬೆಳಗಿನ ಜಾವದವರೆಗೂ ಮನೆಯ ಅಂಗಳದಲ್ಲಿ ಬೀಡು ಬಿಟ್ಟು ಕೃಷಿ ಫಸಲು ಸೇರಿದಂತೆ ಮನೆಯ ಅಂಗಳದಲ್ಲಿದ್ದ ಹೂ ಗಿಡಗಳನ್ನು ನಾಶಪಡಿಸಿವೆ. ಮಂಗಳವಾರ ಬೆಳಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆಗಳನ್ನು ಸ್ಥಳದಿಂದ ಹೊರಕ್ಕೆ ಅಟ್ಟುವ ಪ್ರಯತ್ನ ನಡೆಸಿದರಾದರೂ ಆನೆಗಳು ಮಾತ್ರ ತೋಟ ಬಿಟ್ಟು ತೆರಳಿಲ್ಲ.

    ಕಾಡಾನೆಗಳ ನಿರಂತರ ಹಾವಳಿಯಿಂದ ಗುಹ್ಯ ಗ್ರಾಮದ ನಿವಾಸಿಗಳು ಆತಂಕದಿಂದ ಜೀವನ ನಡೆಸುವಂತಾಗಿದ್ದು, ಕಾಡಾನೆ ಹಾವಳಿ ತಡೆಗಟ್ಟಬೇಕೆಂದು ಸ್ಥಳೀಯರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts