More

    ಕರ್ನಾಟಕ ಸಂಭ್ರಮ ಜ್ಯೋತಿ ರಥಯಾತ್ರೆಗೆ ಅದ್ದೂರಿ ಸ್ವಾಗತ

    ಕಲಘಟಗಿ: ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷ ತುಂಬಿದ ನಿಮಿತ್ತ ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಹೊರಡಿಸಿರುವ ಕರ್ನಾಟಕ ಸಂಭ್ರಮ-50ರ ಜ್ಯೋತಿ ರಥ ಯಾತ್ರೆಯನ್ನು ಸೋಮವಾರ ತಾಲೂಕಿನ ಕೂಡಲಗಿ ಗ್ರಾಮದಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.

    ಅಳ್ನಾವರ ಪಟ್ಟಣದಿಂದ ಆಗಮಿಸಿದ ರಥಯಾತ್ರೆಗೆ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷ, ಸರ್ವಸದಸ್ಯರು ಹಾಗೂ ಗ್ರಾಮದ ಗುರು ಹಿರಿಯರು ಪೂಜೆ ಸಲ್ಲಿಸಿದರು. ತಾಪಂ ಇಒ ಪರಶುರಾಮ ಸಾವಂತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಪಿಡಿಒ ಎ.ಎಚ್. ಮನಿಯಾರ, ಕಂದಾಯ ನಿರೀಕ್ಷಕ ಉಮೇಶ ಬಮ್ಮಿಗಟ್ಟಿ, ಗ್ರಾಪಂ ಅಧ್ಯಕ್ಷ ಸುರೇಶ ನೇಸ್ರೇಕರ, ಮಲ್ಲಯ್ಯ ಗೋಡಿಮನಿ, ಮಹ್ಮದ್ ಅಲಿ ಯಲ್ಲಾಪುರ, ಜಯರಾಬಿ ಬುಕಿಟಗಾರ, ಮಲ್ಲಿಕಾರ್ಜುನ ಗಾರ್ಗಿ, ಪಾರ್ವತಿ ಒಡ್ಡರ, ರಾಚಯ್ಯ ಚಿಕ್ಕಮಠ, ವಿಜಯ ದಳವಿ, ಗಜಾನನ ಜಂಬೂಟಕರ, ಮಾರತಿ ಕಲಘಟಕರ, ಲೋಕೇಶ ಗೋದ್ರಿ, ಇತರರಿದ್ದರು.

    ಗಮನ ಸೆಳೆದ ಮೆರವಣಿಗೆ: ಕೂಡಲಗಿ ಗ್ರಾಮದಿಂದ ಕಲಘಟಗಿ ಪಟ್ಟಣಕ್ಕೆ ಆಗಮಿಸಿದ ರಥಯಾತ್ರೆಗೆ ಅದ್ದೂರಿಯಾಗಿ ಸ್ವಾಗತ ಕೋರಲಾಯಿತು. ಪಟ್ಟಣದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಕನ್ನಡ ಪರ ಜಾಗೃತಿ ಮೂಡಿಸಲಾಯಿತು. ಜ್ಯೋತಿ ರಥ ಯಾತ್ರೆಯಲ್ಲಿ ಡೊಳ್ಳು ಕುಣಿತ, ಕರಡಿ ಮಜಲು, ಕನ್ನಡ ಹಾಡುಗಳಿಗೆ ನೃತ್ಯ, ಕುಣಿತಗಳು ಸಾಂಸ್ಕೃತಿಕ ಮೆರುಗು ತಂದವು. ನೃತ್ಯ ಕಲಾವಿದರ ಒಕ್ಕೂಟದಿಂದ ಕನ್ನಡದ ಪ್ರಸಿದ್ಧ ಹಾಡುಗಳಿಗೆ ಕಲಾವಿದರು ಹೆಜ್ಜೆ ಹಾಕಿದರು. ತಹಸೀಲ್ದಾರ್ ಯಲ್ಲಪ್ಪ ಗೋಣೆಣ್ಣವರ, ಪಪಂ ಮುಖ್ಯಾಧಿಕಾರಿ ವಿ.ಜಿ. ಅಂಗಡಿ, ಕಸಾಪ ತಾಲೂಕಾಧ್ಯಕ್ಷ ಈಶ್ವರ ಜವಳಿ, ವಕೀಲರ ಸಂಘದ ಅಧ್ಯಕ್ಷ ಅಣ್ಣಪ್ಪ ಓಲೇಕಾರ, ಬಸವರಾಜ ಹೊಂಕಣ್ಣವರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts