More

    ಕಲ್ಕಿ 2898 ಎಡಿ ಸಿನಿಮಾ ಬಗ್ಗೆ ಟಾಲಿವುಡ್​ ಐಕಾನ್​ ಸ್ಟಾರ್​​ ಅಲ್ಲು ಅರ್ಜುನ್​ ಹೇಳಿದ್ದೇನು ಗೊತ್ತಾ?

    ಹೈದರಾಬಾದ್​​: ನಾಗ್​​​ ಅಶ್ವಿನ್ ನಿರ್ದೇಶಿಸಿರುವ ಪ್ಯಾನ್ ಇಂಡಿಯಾ ಸಿನಿಮಾ ಕಲ್ಕಿ 2898 ಎಡಿ ಜೂನ್ 27ರಂದು ಬಿಡುಗಡೆಗೊಂಡಿದೆ. ಬ್ಲಾಕ್‌ಬಸ್ಟರ್​ ಹಿಟ್​ನೊಂದಿಗೆ ಈ ಚಿತ್ರವು ಬಾಕ್ಸ್​​ ಆಫೀಸ್​ನಲ್ಲಿ ದೊಡ್ಡ ಕಲೆಕ್ಷನ್​ನೊಂದಿಗೆ ಮುನ್ನಡೆಯುತ್ತಿದೆ. ಅಲ್ಲದೆ ನಟರು ಮತ್ತು ನಿರ್ಮಾಕರಿಂದ ಈ ಸಿನಿಮಾ ಪ್ರಶಂಸೆ ಗಳಿಸುತ್ತಲೇ ಇದೆ. ಈಗ ಟಾಲಿವುಡ್​​ನ ಐಕಾನ್​ ಸ್ಟಾರ್​​ ಅಲ್ಲು ಅರ್ಜುನ್​ ಅವರು ಪ್ರತಿಕ್ರಿಯಿಸಿದ್ದಾರೆ.

    ಇದನ್ನು ಓದಿ: ನೂತನ ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ

    ಕಣ್ಣಿಗೆ ಕಟ್ಟುವ ದೃಶ್ಯಗಳೊಂದಿಗೆ ಈ ಸಿನಿಮಾ ದೊಡ್ಡ ಹಬ್ಬವಾಗಲಿದೆ ಎಂದು ಹೇಳಿದ ಅಲ್ಲು ಅರ್ಜುನ್​ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘವಾಗಿ ಬರೆಯುವ ಮೂಲಕ ಕಲ್ಕಿ 2898 ಎಡಿ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೂಪರ್ ಹೀರೋನಂತೆ ತಮ್ಮ ನಟನಾ ಪ್ರತಿಭೆಯಿಂದ ಈ ಬೃಹತ್ ಚಿತ್ರಕ್ಕೆ ಜೀವ ತುಂಬಿದ ಆತ್ಮೀಯ ಗೆಳೆಯ ಪ್ರಭಾಸ್ ಅವರಿಗೆ ಅಭಿನಂದನೆಗಳು ಎಂದು ಹೇಳಿದ್ದಾರೆ. ಅಲ್ಲದೆ ಅಮಿತಾಬ್​ ಬಚ್ಚನ್​ ಅವರ ನಟನೆಗೆ ಸರ್​​​.. ನೀವು ನಿಜವಾಗಿಗೂ ಸ್ಫೂರ್ತಿ, ನಿಮ್ಮ ನಟನೆಯ ಬಗ್ಗೆ ಮಾತನಾಡಲೂ ಸಾಧ್ಯವಿಲ್ಲ ಎಂದಿದ್ದಾರೆ. ಕಮಲ್ ಹಾಸನ್ ಸರ್​​ ನಿಮ್ಮ ಅಭಿನಯಕ್ಕೆ ವಂದನೆಗಳು, ನೀವು ಹೀಗೆಯೇ ಮುಂದೆಯೂ ಇರುತ್ತೀರಿ ಎಂದು ಭಾವಿಸುತ್ತೇನೆ ಎಂದಿದ್ದಾರೆ. ದೀಪಿಕಾ ನಿಮ್ಮ ನಟನೆಯೂ ಎಲ್ಲರನೂ ಬೆರಗುಗೊಳಿಸುತ್ತದೆ. ದಿಶಾ ಪಟಾನಿ ನೀವು ತೆರೆಯ ಮೇಲೆ ತುಂಬಾ ಆಕರ್ಷಕರಾಗಿ ಕಾಣುತ್ತೀರಿ ಎಂದಿದ್ದಾರೆ.

    ಅಲ್ಲದೆ, ವಿಶೇಷವಾಗಿ ಸಿನಿಮಾಟೋಗ್ರಫಿ, ಕಾಸ್ಟ್ಯೂಮ್ಸ್​​​, ಎಡಿಟಿಂಗ್ ಎಲ್ಲದರ ಶ್ರೇಯಸ್ಸು ವೈಜಯಂತಿ ಮೂವೀಸ್ ಅವರಿಗೇ ಸಲ್ಲುತ್ತದೆ. ಬಹುದೊಡ್ಡ ರಿಸ್ಕ್ ತೆಗೆದುಕೊಂಡು ಈ ಸಿನಿಮಾ ಮಾಡಿದ್ದಾರೆ ಎಂದಿದ್ದಾರೆ. ಅಲ್ಲದೆ, ಕಲ್ಕಿ 2898 ಎಡಿ ನಮ್ಮ ಸಾಂಸ್ಕೃತಿಕ ಸೂಕ್ಷ್ಮತೆಗಳೊಂದಿಗೆ ಬೆಳ್ಳಿತೆರೆಗೆ ಬಂದಿರುವ ಸಿನಿಮಾ. ಹೊಸ ನೆಲೆಯನ್ನು ಮೂಡಿಸಿದ ಸಿನಿಮಾದ ನಿರ್ದೇಶಕ ನಾಗ್ ಅಶ್ವಿನ್​ ಅವರಿಗೆ ನನ್ನ ಅಭಿನಂದನೆಗಳು. ಈ ಚಿತ್ರದ ಮೂಲಕ ಪ್ರತಿಯೊಬ್ಬ ಸಿನಿಪ್ರೇಮಿಗೂ ಅಚ್ಚರಿಯಾಗುವಂತೆ ಮಾಡಿದ್ದಾರೆ ಎಂದಿದ್ದಾರೆ.

    ಕಲ್ಕಿ 2898 ಎಡಿ ಸಿನಿಮಾ ಬಗ್ಗೆ ಟಾಲಿವುಡ್​ ಐಕಾನ್​ ಸ್ಟಾರ್​​ ಅಲ್ಲು ಅರ್ಜುನ್​ ಹೇಳಿದ್ದೇನು ಗೊತ್ತಾ?

    ಸದ್ಯ ಅಲ್ಲು ಅರ್ಜುನ್​​ ಅವರು ಪುಷ್ಪ 2 ಚಿತ್ರದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಈ ಸಿನಿಮಾ ಡಿಸೆಂಬರ್​​ 6 ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ. ಈಗಾಗಲೇ ಬಿಡುಗಡೆಯಾಗಿರುವ ಸಿನಿಮಾ ಪೋಸ್ಟರ್, ಹಾಡುಗಳು ಚಿತ್ರದ ಬಗ್ಗೆ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ.(ಏಜೆನ್ಸೀಸ್​​)

    ಮನ್​ ಕಿ ಬಾತ್​​​ನಲ್ಲಿ ದೇಶದ ಪ್ರಜೆಗಳಿಗೆ ಧನ್ಯವಾದ ತಿಳಿಸಿದ ಪ್ರಧಾನಿ ಮೋದಿ; 111ನೇ ಸಂಚಿಕೆಯಲ್ಲಿ ಮಾಡಿದ ಮನವಿ ಏನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts