More

    ಎರಡು ತಂಡಗಳ ಮಧ್ಯೆ ಹೊಡೆದಾಟ

    ಪಡುಬಿದ್ರಿ: ಸ್ವಸಹಾಯ ಸಂಘದ ಸಾಲ ಮರುಪಾವತಿಗೆ ಸಂಬಂಧಿಸಿ ಎಲ್ಲೂರಿನಲ್ಲಿ ಎರಡು ತಂಡಗಳ ನಡುವೆ ಪರಸ್ಪರ ಹೊಡೆದಾಟ ನಡೆದಿದೆ. ಎರಡೂ ತಂಡಗಳು ದೂರು-ಪ್ರತಿದೂರು ನೀಡಿದ್ದು, ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪತ್ರಕರ್ತ ಜಯಂತ್ ಟಿ. ಹಾಗೂ ಪರಿಚಯದವರಾದ ಮರ್ದಾಳ ಸಂತೋಷ್, ಮುಡಿಪು ರವಿ ಶೆಟ್ಟಿ ಹಾಗೂ ಜಯರಾಮ್ ಅವರು ಕಾರಿನಲ್ಲಿ ಎಲ್ಲೂರು ಗ್ರಾಮದ ಸಂತೋಷ್ ಆಚಾರ್ಯ ಎಂಬುವರ ಮನೆಗೆ ಬಂದು ವಾಪಸಾಗುತ್ತಿದ್ದ ಎಲ್ಲೂರು ದೇವಸ್ಥಾನದ ಎದುರಿನ ರಸ್ತೆಯಲ್ಲಿ ಬೈಕ್‌ನಲ್ಲಿ ಬಂದಿದ್ದ ಸುನೀಲ್ ಹಾಗೂ 11 ಮಂದಿ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ಸಂತೋಷ್ ಅವರ ಕ್ಯಾಮರಾವನ್ನು ಹಾನಿಗೈದು, ಜಯಂತ್ ಅವರ ಮೊಬೈಲ್ ಕಸಿದಿರುವ ಆರೋಪಿಗಳು ಸ್ಥಳಕ್ಕೆ ಬಂದ ಸಂತೋಷ್ ಆಚಾರ್ಯ ಮತ್ತು ಅವರ ಪತ್ನಿಯನ್ನು ದೂಡಿ ಹೊಡೆದಿದ್ದಾರೆ. ಬಳಿಕ ಕೊಲೆ ಬೆದರಿಕೆ ಒಡ್ಡಿರುವುದಾಗಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಕಡಬದ ರವೀಂದ್ರ ಶೆಟ್ಟಿ ಹಾಗೂ ಇತರ ಮೂವರ ವಿರುದ್ಧ ಸಾಣಿಂಜೆ ನಿವಾಸಿ ಸುಜಾತಾ ಎಂಬುವರು ಪ್ರತಿದೂರು ನೀಡಿದ್ದಾರೆ. ಮಂಗಳವಾರ ಸಂಜೆ ಸಂತೋಷ್ ಆಚಾರ್ಯ ಮನೆಗೆ ತೆರಳಿ ಆತ ಹಾಗೂ ಆತನ ಪತ್ನಿ ಆರತಿ ಎರಡು ಸ್ವ ಸಹಾಯ ಸಂಘಗಳಿಂದ ಪಡೆದುಕೊಂಡಿರುವ ಸುಮಾರು 4.5 ಲಕ್ಷ ರೂ. ಸಾಲವನ್ನು ಮರುಪಾವತಿ ಮಾಡಲು ಹೇಳುತ್ತಿರುವಾಗ ಕಾರಿನಲ್ಲಿ ಬಂದ ನಾಲ್ವರು ಸಾಲವನ್ನು ಹೇಗೆ ವಸೂಲಿ ಮಾಡಿಕೊಳ್ಳುತ್ತೀರಿ? ಎಂದು ಪ್ರಶ್ನಿಸಿದ್ದು, ಮಾತಿಗೆ ಮಾತು ಬೆಳೆದು ಆರೋಪಿ ರವೀಂದ್ರ ಶೆಟ್ಟಿ ಎಂಬಾತ ಸುಜಾತಾ ಅವರನ್ನು ದೂಡಿ ಬೀಳಿಸಿದ್ದಾನೆ. ತಡೆಯಲು ಬಂದ ಕವಿತಾ ಅವರನ್ನೂ ದೂಡಿ ಬೀಳಿಸಿದ್ದು, ಉಡುಪಿ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts