More

    ಮುಡಾದಲ್ಲಿ ಬ್ರಹ್ಮಾಂಡ ಗೋಲ್ಮಾಲ್! ಸಿಎಂ ತವರಿನಲ್ಲೇ 4 ಸಾವಿರ ಕೋಟಿ ರೂ. ಭ್ರಷ್ಟಾಚಾರ

    | ಆರ್.ಕೃಷ್ಣ, ಮೈಸೂರು

    ಮುಖ್ಯಮಂತ್ರಿ ತವರು ಜಿಲ್ಲೆಯಲ್ಲೇ ಬ್ರಹ್ಮಾಂಡ ಭ್ರಷ್ಟಾಚಾರದ ಜ್ವಾಲಾಮುಖಿ ಸ್ಪೋಟಿಸಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮá-ಡಾ) ಕೋಟ್ಯಂತರ ರೂ. ಹಗರಣ ನಡೆದಿರá-ವುದು ತಡವಾಗಿ ಬೆಳಕಿಗೆ ಬಂದಿದೆ. 50:50ರ ಅನá-ಪಾತ, ಪ್ರೋತ್ಸಾಹದಾಯಕ ನಿವೇಶನ (ಇನ್​ಸೆಂಟಿವ್​) ಬದಲಿ ನಿವೇಶನ ಹಂಚಿಕೆಯಲ್ಲಿ ಭಾರಿ ಗೋಲ್​ಮಾಲ್ ನಡೆದಿದ್ದು, ಒಟ್ಟಾರೆ 4,500 ರಿಂದ 5000 ಸಾವಿರ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಇದರಿಂದ ಮುಡಾಕ್ಕೆ ಅಂದಾಜು 4000 ಕೋಟಿ ರೂ. ನಷ್ಟ ಉಂಟಾಗಿದ್ದು, ಹಗರಣದಲ್ಲಿ ಸರ್ಕಾರದ ಮಟ್ಟದ ದೊಡ್ಡ ದೊಡ್ಡ ವ್ಯಕ್ತಿಗಳ ಕೈ’ವಾಡ ಇರುವ ಆರೋಪ ಕೇಳಿ ಬಂದಿದೆ.

    ಎಲ್ಲೆಲ್ಲಿ ಹಂಚಿಕೆ?: ಸರ್ಕಾರದ ನಿವೇಶನ ಹಂಚಿಕೆ ನಿಯಮಗಳನ್ನು ಗಾಳಿಗೆ ತೂರಿ ಮೈಸೂರಿನ ವಿಜಯನಗರ, ದಟ್ಟಗಳ್ಳಿ, ಜೆ.ಪಿ.ನಗರ, ಆರ್.ಟಿ.ನಗರ, ಹಂಚ್ಯಾ-ಸಾತಗಳ್ಳಿ ಸೇರಿದಂತೆ ಪ್ರತಿಷ್ಠಿತ ಬಡಾವಣೆಗಳಲ್ಲಿ ನಿಯಮಬಾಹಿರವಾಗಿ ನಿವೇಶನ ಹಂಚಿಕೆ ನಡೆದಿದೆ. ಇದೀಗ ಪ್ರಕರಣ ಸರ್ಕಾರದ ಅಂಗಳ ತಲá-ಪಿದೆ. ಕೃಷ್ಣರಾಜ (ಕೆ.ಆರ್.) ಕ್ಷೇತ್ರದ ಬಿಜೆಪಿ ಶಾಸಕ ಟಿ.ಎಸ್.ಶ್ರೀವತ್ಸ ಈ ಹಗರಣ ಕá-ರಿತು ಸರ್ಕಾರದ ಮುಖ್ಯ ಕಾರ್ಯರ್ದಗೆ ದೂರು ನೀಡಿದ್ದಾರೆ.

    ಸಭೆಗೆ ಮುನ್ನವೇ ಹಂಚಿಕೆ: ಮೈಸೂರು ತಾಲೂಕು ಕಸಬಾ ಹೋಬಳಿ ಸರ್ವೆ ಸಂ.86ರಲ್ಲಿ 7.03 ಎಕರೆ ಜಮೀನಿಗೆ ಪರಿಹಾರವಾಗಿ 81670 ಚದರ ಅಡಿಯ ನಿವೇಶನಗಳನ್ನು ಹಂಚಿಕೆ ಮಾಡುವಲ್ಲಿ ಗೋಲ್​ಮಾಲ್ ನಡೆದಿರುವ ಶಂಕೆ ಇದೆ. ಅರ್ಜಿದಾರೆ ಎಂ.ಶಾಂತಮ್ಮ 2023ರ ಅ.20ರಂದು ಬದಲಿ ನಿವೇಶನ ಕೋರಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ (ಮá-ಡಾ) ಅರ್ಜಿ ಸಲ್ಲಿಸಿದ್ದರು. ಆದರೆ ಮುಡಾದ ಉಲ್ಲೇಖ 1) ಅನ್ವಯ 2023ರ ಅಕ್ಟೋಬರ್ 7ರಂದೇ ಅರ್ಜಿದಾರರ ಹೆಸರಿನಲ್ಲಿ ನಿವೇಶನ ಹಂಚಿಕೆ ಆಗಿರುವುದು ದಾಖಲೆಯಿಂದ ಬಹಿರಂಗವಾಗಿದೆ.

    ಅಂದರೆ ಮೊದಲು ನಿವೇಶನ ಮಂಜೂರು ಮಾಡಿ ಬಳಿಕ ಅರ್ಜಿದಾರರಿಂದ ಅರ್ಜಿ ಪಡೆದಿರá-ವುದು ಬೆಳಕಿಗೆ ಬಂದಿದೆ. ಬದಲಿ ನಿವೇಶನ ಕೋರಿ ಹಲವಾರು ಜನರು ಅರ್ಜಿ ಸಲ್ಲಿಸಿ ವರ್ಷಾನá-ಗಟ್ಟಲೇ ಕಾಯುತ್ತಿದ್ದರೂ ಅವರತ್ತ ಗಮನ ನೀಡದ ಅಧಿಕಾರಿಗಳು, ಈ ಪ್ರಕರಣದಲ್ಲಿ ಅರ್ಜಿ ಸಲ್ಲಿಸá-ವ ಮುನ್ನವೇ ಅಂದಾಜು 3040 ಅಳತೆಯ 69 ನಿವೇಶನಗಳನ್ನು ಮಂಜೂರು ಮಾಡಿರá-ವುದು ಹಗರಣಕ್ಕೆ ಸಾಕ್ಷಿಯಾಗಿದೆ. ಈ ವಿಷಯ ಸರ್ಕಾರದ ಗಮನಕ್ಕೆ ಬಂದು ಉಲ್ಲೇಖ (2)ರ ಅನ್ವಯ ಶೇ.50:50ರ ಅನುಪಾತದಲ್ಲಿ ನಿವೇಶನ ನೀಡá-ವ ನಿಯಮಬಾಹಿರ ನಿರ್ಣಯ ಎಂದು ಸರ್ಕಾರ ಮಂಜೂರು ಆದೇಶವನ್ನು ರದ್ದುಗೊಳಿಸಿದೆ. ಆದರೆ ಈ ಪ್ರಕರಣದಲ್ಲಿ ಸಕರ್ಾರದ ಆದೇಶವನ್ನು ಮುಡಾ ಪಾಲಿಸದೆ ಮಂಜೂರು ಆದೇಶವನ್ನು ಹಾಗೆಯೇ ಉಳಿಸಿಕೊಂಡಿದೆ. ಇದಲ್ಲದೆ ಮತ್ತೊಂದು ಪ್ರಕರಣದಲ್ಲಿ 98,206 ಚದರ ಅಡಿ ಅಂದರೆ 3040 ಅಳತೆಯ 82 ನಿವೇಶನಗಳನ್ನು ಮಂಜೂರು ಮಾಡಿರá-ವುದು ಬಯಲಾಗಿದೆ. ಜತೆಗೆ 2023ರ ಫೆ.28ರಂದು 55 ಸಾವಿರ ಚದರಡಿ, 2023ರ ಮಾ.10 ರಂದು 16,335 ಚದರ ಅಡಿಯಷ್ಟು ಪರ್ಯಾಯ ನಿವೇಶನ ಮಂಜೂರು ಮಾಡಲಾಗಿದೆ.

    ಅನುಮತಿಯೇ ಇಲ್ಲ: ಮುಡಾ ಆಡಳಿತ ಮಂಡಳಿ ಮತ್ತು ಸರ್ಕಾರದ ಅನುಮತಿ ಇಲ್ಲದೆ ಒಂದೇ ಒಂದು ನಿವೇಶನವನ್ನೂ ಆಯುಕ್ತರು ನೀಡುವಂತಿಲ್ಲ. ಆದರೆ ಆಯುಕ್ತರು ಯಾವುದೇ ಅನುಮತಿ ಪಡೆಯದೆ ಅಕ್ರಮವಾಗಿ ನಿವೇಶನಗಳನ್ನು ಹಂಚಿಕೆ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.

    ಹೇಗೆಲ್ಲ ನಡೆದಿದೆ ಅಕ್ರಮ?

    • ಪ್ರಾಧಿಕಾರಕ್ಕೆ ಭೂಮಿ ಕೊಟ್ಟವರ ಶೋಧ
    • ಪರಿಹಾರದ ನಿವೇಶನದ ಹೆಸರಿನಲ್ಲಿ ಆಮಿಷ
    • ಕುಟುಂಬ ಸದಸ್ಯರಿಂದ ಹೊಸ ಅರ್ಜಿ ಸ್ವೀಕಾರ
    • ಅರ್ಜಿ ಹಾಕುವ ಮೊದಲೇ ನಿವೇಶನ ಹಂಚಿಕೆ
    • ನಿವೇಶನ ನೀಡಿದ ಬಳಿಕ ಅರ್ಜಿಗಳ ಸ್ವೀಕಾರ
    • ಅರ್ಜಿದಾರರಿಗೆ ಎಲ್ಲ ದಾಖಲೆಗಳ ಶೀಘ್ರ ವ್ಯವಸ್ಥೆ
    • ಕಡಿಮೆ ಅವಧಿಯಲ್ಲಿ ವಂಶವೃಕ್ಷ, ದಾಖಲೆ ನೀಡಿಕೆ
    • ಅಧಿಕಾರಿಗಳಿಂದಲೇ ತ್ವರಿತವಾಗಿ ಸೈಟ್ ಹಂಚಿಕೆ
    • ಸಾವಿರಾರು ನಿವೇಶನಗಳ ಅಕ್ರಮ ಮಂಜೂರು

    ಸಿಎಂ ಆಪ್ತರಿಗೂ ನಿವೇಶನ

    ಪರಿಹಾರ ನಿವೇಶನ ಹಂಚಿಕೆಯಲ್ಲಿ ಸಿಎಂ ಸಿದ್ದರಾಮಯ್ಯ ಆಪ್ತರಿಗೂ ಅಗತ್ಯ್ಕತ ಹೆಚ್ಚಿನ ನಿವೇಶನ ಹಂಚಿಕೆಯಾಗಿದೆ ಎನ್ನುವ ಮಾತು ಕೇಳಿಬರುತ್ತಿದೆ. ಹಿನಕಲ್ ಸರ್ವೆ ನಂ.211ರಲ್ಲಿ ಪಾಪಣ್ಣ ಅವರಿಗೆ 3040 ಅಳತೆಯ 36 ನಿವೇಶನ ಗಳನ್ನು ನೀಡುವ ಬದಲು 60 ನಿವೇಶನ ನೀಡಲಾಗಿದೆ. ಮೈಸೂರು ತಾಲೂಕಿನ ಮಾರಗೌಡನಹಳ್ಳಿಯ ವಿವಿಧ ಸರ್ವೆ ನಂಬರ್​ಗಳಲ್ಲಿ ನಾಗರಾಜá-ಗೆ 3040 ಅಳತೆಯ 90 ನಿವೇಶನ ನೀಡಬೇಕಾಗಿದ್ದರೂ 120 ನಿವೇಶನ ಕೊಡಲಾಗಿದೆ.

    ಸಾಮಾನ್ಯರಿಗಿಲ್ಲ ಸೈಟ್

    ನಿವೇಶನ ಕೋರಿ 85 ಸಾವಿರಕ್ಕೂ ಹೆಚ್ಚು ಅರ್ಜಿಗಳು ಮುಡಾದಲ್ಲಿ ಹಲವು ವರ್ಷಗಳಿಂದ ಬಾಕಿ ಉಳಿದಿವೆ. ಆದರೆ ಅರ್ಹರಿಗೆ ನಿವೇಶನ ನೀಡá-ವ ಬದಲು ಮುಡಾ ಅಧಿಕಾರಿಗಳು, ಮುಡಾದ ಆಡಳಿತ ನಡೆಸುವ ಜನಪ್ರತಿನಿಧಿಗಳು ಜನಹಿತಾಸಕ್ತಿ ಕಾಪಾಡá-ವಲ್ಲಿ ವಿಫಲವಾಗಿದ್ದಾರೆ. ರಿಯಲ್ ಎಸ್ಟೇಟ್ ವ್ಯವಹಾರದಿಂದ ಒಂದು ನಿವೇಶನ ಪಡೆಯಲು ಸಾಧ್ಯವಿಲ್ಲದಂತಹ ಪರಿಸ್ಥಿತಿಯಲ್ಲಿ ಜನರಿದ್ದಾರೆ. ನಿವೇಶನ ದೊರಕಿಸಿಕೊಡುವುದನ್ನು ಮರೆತಿರá-ವ ಮುಡಾ ಸಿಎ ನಿವೇಶನ ಹಂಚಿಕೆ, ಬದಲಿ ನಿವೇಶನ ಮಂಜೂರು, ಖಾಸಗಿ ಬಡಾವಣೆಗಳಿಗೆ ಅನá-ಮತಿ ನೀಡá-ವಲ್ಲೇ ಕಾಲ ಕಳೆಯá-ತ್ತಿದೆ.

    ಮುಡಾದಲ್ಲಿ 5,000 ಕೋಟಿ ರೂ. ಅವ್ಯವಹಾರ ನಡೆದಿದ್ದು, ಇದಕ್ಕೆ ಡಾ.ಯತೀಂದ್ರ ಸಿದ್ದರಾಮಯ್ಯ ಸಹಕಾರ ನೀಡಿದ್ದಾರೆ. ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಎಸ್​ಐಟಿಯಿಂದ ಪಾರದರ್ಶಕವಾಗಿ ತನಿಖೆ ನಡೆಸಲು ಆಗುವುದಿಲ್ಲ.

    | ಎಚ್.ವಿಶ್ವನಾಥ್ ವಿಧಾನ ಪರಿಷತ್ ಸದಸ್ಯ

    ಗೊತ್ತು ಗುರಿ ಇಲ್ಲದೇ ಕಾನೂನುಬಾಹಿರವಾಗಿ ನಿವೇಶನ ಮಂಜೂರು ಮಾಡಿ ಅಕ್ರಮ ಎಸಗಿರುವ ಮುಡಾ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಮುಖ್ಯ ಕಾರ್ಯರ್ದಗೆ ದೂರು ನೀಡಲಾಗಿದೆ. ಹಗರಣದ ಹಿಂದೆ ಯಾರ ಕೈವಾಡ ಇದೆ ಎನ್ನುವ ಕುರಿತು ತನಿಖೆ ನಡೆಸá-ವಂತೆ ಒತ್ತಾಯಿಸಲಾಗಿದ್ದು, ಹೋರಾಟ ಮುಂದá-ವರಿಯಲಿದೆ.

    | ಟಿ.ಎಸ್.ಶ್ರೀವತ್ಸ ಬಿಜೆಪಿ ಶಾಸಕ, ಕೃಷ್ಣರಾಜ ಕ್ಷೇತ್ರ

    7 ಗಂಟೆ ವಿಚಾರಣೆ

    ಮುಡಾ ಹಗರಣದ ಮಾಹಿತಿ ಬಹಿರಂಗಗೊಳ್ಳುತ್ತಿದ್ದಂತೆಯೇ ಹಿರಿಯ ಐಎಎಸ್ ಅಧಿಕಾರಿಗಳ ನೇತೃತ್ವದ ಮೂವರ ತಂಡ ಗುರá-ವಾರ (ಜೂ.27) ದಿಢೀರ್ ಮುಡಾಕ್ಕೆ ಭೇಟಿ ನೀಡಿ ಪರಿಶೀಲಿಸಿದೆ. ಬೆಂಗಳೂರು ಹಾಗೂ ಗ್ರಾಮಾಂತರ ಯೋಜನಾ, ನಗರಾಭಿವೃದ್ಧಿ ಪ್ರಾಧಿಕಾರಗಳ ಆಯá-ಕ್ತ ವೆಂಕಟಾಚಲಪತಿ, ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ನಿರ್ದೇಶಕ ಎನ್.ಕೆ. ತಿಪ್ಪೇಸ್ವಾಮಿ ಹಾಗೂ ಜಂಟಿ ನಿರ್ದೇಶಕ ಎಸ್. ಗೋಪಾಲಕೃಷ್ಣ 7 ಗಂಟೆ ಮುಡಾ ಆಯá-ಕ್ತ ಜಿಟಿ.ದಿನೇಶ್​ಕá-ಮಾರ್ ಸೇರಿದಂತೆ ಇತರ ಅಧಿಕಾರಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಲ್ಲದೆ ಪ್ರಕರಣಕ್ಕೆ ಸಂಬಂಧಿಸಿದಂತೆ 140 ಕಡತಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮುಡಾ ಕಾರ್ಯದರ್ಶಿ, ನಗರ ಯೋಜನಾ ಸದಸ್ಯ (ಟಿಪಿಎಂ), ನಿವೇಶನ ವಿಭಾಗದ ಇಂಜಿನಿಯರ್​ಗಳು, ಸೂಪರಿಂಟೆಂಡಿಂಗ್ ಇಂಜಿನಿಯರ್ ಕಚೇರಿ ಸಿಬ್ಬಂದಿ, ವಿಶೇಷ ಭೂ ಸ್ವಾಧೀನಾಧಿಕಾರಿ, ಲೆಕ್ಕ ಶಾಖೆ ಅಧಿಕಾರಿಗಳನ್ನು ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts