More

    ಕಲ್ಕಿ 2898 AD ಸೀಕ್ವೆಲ್ ಬಿಡುಗಡೆ ಯಾವಾಗ; ನಿರ್ದೇಶಕ ನಾಗ್​ ಅಶ್ವಿನ್​​ ಹೇಳಿದ್ದೇನು? ಇಲ್ಲಿದೆ ಡೀಟೇಲ್ಸ್​​

    ಹೈದರಾಬಾದ್​​​: ಪ್ರಭಾಸ್, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್ ಮತ್ತು ಕಮಲ್ ಹಾಸನ್ ಸೇರಿದಂತೆ ಬಹು ತಾರಾಗಣವನ್ನು ಒಳಗೊಂಡಿರುವ ಕಲ್ಕಿ 2898 AD ಜೂನ್​​ 27ರಂದು ಬಿಡುಗಡೆಯಾಗಿದೆ. ನಾಗ್​ ಅಶ್ವಿನ್​​ ಆ್ಯಕ್ಷನ್-ಕಟ್​​ ಹೇಳಿರುವ ಈ ಸಿನಿಮಾ ಬ್ಲಾಕ್‌ಬಸ್ಟರ್​ ಹಿಟ್​ನೊಂದಿಗೆ ಬಾಕ್ಸ್​​ ಆಫೀಸ್​ನಲ್ಲಿ ದೊಡ್ಡ ಕಲೆಕ್ಷನ್​ನೊಂದಿಗೆ ಮುನ್ನಡೆಯುತ್ತಿದೆ. ನಟರು ಮತ್ತು ನಿರ್ದೇಶಕರಿಂದ ಪ್ರಶಂಸೆಯನ್ನು ಪಡೆದುಕೊಂಡಿದೆ.

    ಇದನ್ನು ಓದಿ: ಕಲ್ಕಿ 2898 ಎಡಿ ಸಿನಿಮಾ ಬಗ್ಗೆ ಟಾಲಿವುಡ್​ ಐಕಾನ್​ ಸ್ಟಾರ್​​ ಅಲ್ಲು ಅರ್ಜುನ್​ ಹೇಳಿದ್ದೇನು ಗೊತ್ತಾ?

    ಚಿತ್ರವು ಮುಂದುವರಿಯುವುದು ಎಂಬ ಪದಗಳೊಂದಿಗೆ ಮುಕ್ತಾಯಗೊಳ್ಳುತ್ತದೆ. ಇದು ಅಭಿಮಾನಿಗಳಿಗೆ ಮುಂದಿನ ಭಾಗಕ್ಕಾಗಿ ನಿರೀಕ್ಷೆಯನ್ನು ಹೆಚ್ಚಿಸಿದೆ. ಅದರ ಜತೆಗೆ ಕೆಲವರಿಗೆ ಕಲ್ಕಿ ಸಿನಿಮಾದ ಸೀಕ್ವೆಲ್ ಇದೆಯೋ.. ಇಲ್ಲವೋ.. ಎಂಬ ಗೊಂದಲವನ್ನು ಉಂಟು ಮಾಡಿದೆ. ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ನಿರ್ದೇಶಕ ನಾಗ್ ಅಶ್ವಿನ್​​ ನೀಡಿರುವ ಸ್ಪಷ್ಟನೆಯು ಅಭಿಮಾನಿಗಳ ಗೊಂದಲಕ್ಕೆ ತೆರೆ ಎಳೆದಿದೆ.

    ‘ಕಲ್ಕಿ 2898 ಎಡಿ’ ಚಿತ್ರದ ಕಥೆಯನ್ನು ಒಂದೇ ಚಿತ್ರಕ್ಕೆ ಸೀಮಿತಗೊಳಿಸಲಾಗುವುದಿಲ್ಲ ಎಂದು ನಿರ್ದೇಶಕ ನಾಗ್ ಅಶ್ವಿನ್​​ ದೃಢಪಡಿಸಿದ್ದಾರೆ. ಅಲ್ಲದೆ ಚಿತ್ರದ ಮುಂದಿನ ಭಾಗ ಮೂರು ವರ್ಷಗಳ ನಂತರ ಬಿಡುಗಡೆಯಾಗುವ ಸಾಧ್ಯತೆಯಿದೆ ಎಂದು ಖಚಿತಪಡಿಸಿದ್ದಾರೆ.

    ಪ್ರಭಾಸ್ ಕೂಡ ವಿವಿಧ ಸಂದರ್ಶನಗಳಲ್ಲಿ ಚಿತ್ರವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗುವುದು ಎಂದು ಸುಳಿವು ನೀಡಿದ್ದಾರೆ. ಎರಡನೇ ಭಾಗದಲ್ಲಿ ತನಗಾಗಿ ವಿಶೇಷ ಸ್ಥಾನವಿರುವುದಾಗಿ ತಿಳಿಸಿದ್ದಾರೆ. ಸಿನಿಮಾದಲ್ಲಿ ಅಶ್ವತ್ಥಾಮನಾಗಿ ಅಮಿತಾಬ್ ಬಚ್ಚನ್, ಭೈರವ ಪಾತ್ರದಲ್ಲಿ ಪ್ರಭಾಸ್, ಮತ್ತು ಕಮಲ್​​ ಹಾಸನ್​​ ಸುಪ್ರೀಮ್ ಯಾಸ್ಕಿನ್​​​ ಪಾತ್ರವನ್ನು ನಿರ್ವಹಿಸಿದ್ದಾರೆ.

    ಕಲ್ಕಿ 2898 AD ಮೊದಲನೇ ಭಾಗದ ಯಶಸ್ಸು ಮತ್ತು ಕ್ಲಿಫ್‌ಹ್ಯಾಂಗರ್ ಅಂತ್ಯವು ಮುಂದಿನ ಭಾಗಕ್ಕಾಗಿ ಪ್ರೇಕ್ಷಕರನ್ನು ಕುತೂಹಲದಿಂದ ಕಾಯುವಂತೆ ಮಾಡಿದೆ. ಅಶ್ವತ್ಥಾಮ ಮತ್ತು ಭೈರವ ಸಂಪೂರ್ಣ ಶಕ್ತಿಯುತವಾದ ಯಾಸ್ಕಿನ್ ಅನ್ನು ಎದುರಿಸಲು ಸಜ್ಜಾಗುವುದು ಸಿನಿಮಾ ಮುಂದುವರಿಕೆಯ ಭರವಸೆ ನೀಡುತ್ತದೆ. ಹಿರಿಯ ನಟರಾದ ಅಮಿತಾಭ್ ಬಚ್ಚನ್ ಮತ್ತು ಕಮಲ್ ಹಾಸನ್ ನಡುವಿನ ಕದನವು ಮುಂದಿನ ಭಾಗದ ಪ್ರಮುಖ ಅಂಶವಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ. (ಏಜೆನ್ಸೀಸ್​​)

    ರಿಯಾಸಿ ಭಯೋತ್ಪಾದನ ದಾಳಿ: ಜಮ್ಮು ಕಾಶ್ಮೀರದ ಹಲವು ಸ್ಥಳಗಳಲ್ಲಿ ಎನ್​ಐಎ ಶೋಧ

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts