More

    ಇದು ಸೂಕ್ತ ಸಮಯ; ವಿರಾಟ್​ ಬಳಿಕ ಅಂತಾರಾಷ್ಟ್ರೀಯ ಟಿ20ಗೆ ವಿದಾಯ ಘೋಷಿಸಿದ ರೋಹಿತ್​ ಶರ್ಮಾ

    ಬಾರ್ಬಡೋಸ್​: ಇಲ್ಲಿನ ಕೆನ್ಸಿಂಗ್ಟನ್​ ಓವಲ್​ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್​ನ ಫೈನಲ್​ ಪಂದ್ಯದಲ್ಲಿ ಆಲ್ರೌಂಡ್​ ಪ್ರದರ್ಶನದ ಫಲವಾಗಿ ಭಾರತ ತಂಡವು ಗೆದ್ದು ಬೀಗಿದ್ದು, ಚುಟುಕು ವಿಶ್ವಸಮರದಲ್ಲಿ ಎರಡನೇ ಬಾರಿಗೆ ವಿಶ್ವ ಚಾಂಪಿಯನ್​ ಪಟ್ಟ ಅಲಂಕರಿಸಿದೆ. ಚೊಚ್ಚಲ ವಿಶ್ವಕಪ್​ಅನ್ನು ಗೆದ್ದು ಚೋಕರ್ಸ್​ ಎಂಬ ಹಣೆಪಟ್ಟಿಯನ್ನು ಕಳಚಿಕೊಳ್ಳುವಲ್ಲಿ ದಕ್ಷಿಣ ಆಫ್ರಿಕಾ ಮತ್ತೊಮ್ಮೆ ವಿಫಲವಾಗಿದ್ದು, ಫೈನಲ್​ ಸೋಲಿನೊಂದಿಗೆ ತನ್ನ ಅಭಿಯಾನವನ್ನು ಮುಗಿಸಿದೆ.

    ಭಾರತ ಎರಡನೇ ಬಾರಿ ಚುಟುಕು ವಿಶ್ವಸಮರ​ ಗೆಲ್ಲುತ್ತಿದ್ದಂತೆ ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮಾ ಅಂತಾರಾಷ್ಟ್ರೀಯ ಟಿ20 ಮಾದರಿಗೆ ನಿವೃತ್ತಿ ಘೋಷಿಸಿದ್ದಾರೆ. ವಿರಾಟ್​ ಕೊಹ್ಲಿ ಬಳಿಕ ರೋಹಿತ್​ ಶರ್ಮಾ ನಿವೃತ್ತಿ ಘೋಷಿಸಿದ್ದು, ಈ ಇಬ್ಬರ ನಿರ್ಧಾರ ಹಲವರಿಗೆ ಅಚ್ಚರಿ ಮೂಡಿಸಿದೆ.

    ಈ ಕುರಿತು ಮಾತನಾಡಿದ ರೋಹಿತ್​, ಅಂತಾರಾಷ್ಟ್ರೀಯ ಟಿ20 ಮಾದರಿಯಲ್ಲಿ ಇದುವೇ ನನ್ನ ಕೊನೆ ಪಂದ್ಯವಾಗಿದ್ದು, ವಿದಾಯ ಹೇಳಲು ಇದು ಸೂಕ್ತ ಸಮಯವಾಗಿದೆ. ನಾನು ತಂಡಕ್ಕೆ ಟ್ರೋಫಿಯನ್ನು ಗೆಲ್ಲಿಸಬೇಕು ಎಂದುಕೊಂಡಿದ್ದೆ ಅದೇ ರೀತಿ ಆಗಿದೆ. ಇದನ್ನು ವರ್ಣಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಈ ಬಾರಿ ನಾವು ಗೆದ್ದಿರುವುದು ಖುಷಿ ನೀಡಿದೆ ಎಂದು ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮಾ ಹೇಳಿದ್ದಾರೆ.

    ಇದನ್ನೂ ಓದಿ: ವಿಶ್ವಕಪ್ ಬಳಿಕ ಕೊಹ್ಲಿ-ರೋಹಿತ್​​ಗೆ ಕೊಕ್, ಪಾಂಡ್ಯಾಗೆ ನಾಯಕನ ಪಟ್ಟ..? ಸೂರ್ಯಕುಮಾರ್​​ಗೂ ಇದೆ ಅವಕಾಶ!

    ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿದ ರೋಹಿತ್​ ಶರ್ಮಾ ವಿರಾಟ್​ ಕೊಹ್ಲಿ (76 ರನ್, 59 ಎಸೆತ, 6 ಬೌಂಡರಿ, 2 ಸಿಕ್ಸರ್), ಅಕ್ಷರ್​ ಪಟೇಲ್​ (47 ರನ್, 31 ಎಸೆತ, 1 ಬೌಂಡರಿ, 4 ಸಿಕ್ಸರ್) ಬಿರುಸಿನ ಬ್ಯಾಟಿಂಗ್​ ಫಲವಾಗಿ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 176 ರನ್​ ಗಳಿಸಿತ್ತು. ಗೆಲ್ಲುವ ಆಸೆಯೊಂದಿಗೆ ಗುರಿ ಬೆನ್ನತ್ತಿದ್ದ ಹರಿಣಗಳಿಗೆ ಆರಂಭದಲ್ಲೇ ಶಾಕ್​ ನೀಡಿದ ಭಾರತದ ಬೌಲರ್​ಗಳು ದಿಟ್ಟ ಪ್ರತಿರೋಧದ ನಡುವೆಯೂ ಎದುರಾಳಿ ತಂಡವನ್ನು 20 ಓವರ್​ಗಳಲ್ಲಿ 169 ರನ್​ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು.

    ಟೀಮ್​ ಇಂಡಿಯಾ ಪರ ಹಾರ್ದಿಕ್​ ಪಾಂಡ್ಯ (3-0-20-3), ಅರ್ಷ್​ದೀಪ್​ ಸಿಂಗ್​ (4-0-20-2), ಜಸ್ಪ್ರೀತ್​ ಬುಮ್ರಾ (4-0-18-2), ಅಕ್ಷರ್​ ಪಟೇಲ್​ (4-0-49-1), ಕುಲ್ದೀಪ್​ ಯಾದವ್ (4-0-45-0), ರವೀಂದ್ರ ಜಡೇಜಾ (1-0-12-0) ರನ್​ ನೀಡಿ ವಿಕೆಟ್​ ಪಡೆಯುವ ಮೂಲಕ ಟೀಮ್​ ಇಂಡಿಯಾಗೆ ಕಪ್​ ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts