More

    ಚಿಕ್ಕಳ್ಳಿ ಜನರಿಗೆ ದೋಣಿಯೇ ಆಶ್ರಯ: ಸುಸಜ್ಜಿತ ರಸ್ತೆ ನಿರ್ಮಾಣಕ್ಕೆ ಬೇಡಿಕೆ ; ಏಕೈಕ ರಸ್ತೆಯೂ ಜಲಾವೃತ

    ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

    ಪ್ರತಿ ವರ್ಷದ ಮಳೆಗೆ ನೆರೆಗೆ ತುತ್ತಾಗುವ ಸೌಪರ್ಣಿಕಾ ನದಿ ಪಾತ್ರದ ನಾಡ ಗ್ರಾಮದ ಚಿಕ್ಕಳ್ಳಿಯ ಜನರ ಸಮಸ್ಯೆ ಯಾರೂ ಕೇಳೋರೇ ಇಲ್ಲವಾಗಿದೆ.
    ಚಿಕ್ಕಳ್ಳಿ ಸುಮಾರು 30-35 ಜನ ವಾಸಿಸುವ ಚಿಕ್ಕ ಪ್ರದೇಶ. ಹೈನುಗಾರಿಕೆ, ಭತ್ತದ ಕೃಷಿ ಹಾಗೂ ತೆಂಗಿನ ತೋಟ ನೆಚ್ಚಿಕೊಂಡಿರುವ ಈ ಭಾಗದ ಜನರು ಮಳೆಗಾಲದಲ್ಲಿ ಅನುಭವಿಸುವ ತೊಂದರೆ ಅಷ್ಟಿಷ್ಟಲ್ಲ. ಗ್ರಾಮವನ್ನು ಸಂಪರ್ಕಿಸುವ ಏಕೈಕ ರಸ್ತೆ ಪರಿಸ್ಥಿತಿ ಅತ್ಯಂತ ಶೋಚನೀಯ. ಪ್ರತಿ ವರ್ಷ ಸಂಪರ್ಕಕ್ಕೆ ಇರುವ ಏಕೈಕ ರಸ್ತೆ, ಜಲಾವೃತಗೊಳ್ಳುತ್ತದೆ. ಈ ಬಾರಿಯೂ ಮತ್ತದೇ ಆತಂಕ ಮನೆ ಮಾಡಿದೆ.

    ಮನೆಯವರಿಗೆ ಆತಂಕ

    ಚಿಕ್ಕಳ್ಳಿಯ ಒಂದು ಕಡೆ 5 ಮನೆಗಳಿದ್ದು 30 ಜನರಿದ್ದಾರೆ. ಮತ್ತೊಂದೆಡೆ 7-8 ಮನೆಗಳಿದ್ದು, ಅಲ್ಲಿಯೂ 30ಕ್ಕೂ ಮಿಕ್ಕಿ ಜನರು ವಾಸವಾಗಿದ್ದಾರೆ. ಶಾಲೆಗೆ ಹೋಗುವ ಮಕ್ಕಳು, ಶಿಕ್ಷಕಿಯರಿದ್ದಾರೆ. ಅವರು ನಿತ್ಯ ಕಷ್ಟಪಟ್ಟುಕೊಂಡು ಹೋಗಬೇಕಾಗಿದೆ. ವಾಪಸ್ ಬರುವವರೆಗೆ ಮನೆಯವರಿಗೆ ಆತಂಕ ತಪ್ಪಿದ್ದಲ್ಲ.

    ಸಂಚಾರ ಅಸಾಧ್ಯ

    ನಾಡ ಪೇಟೆಯಿಂದ ಚಿಕ್ಕಳ್ಳಿಗೆ ಸಂಪರ್ಕಕ್ಕೆ ಇರುವುದು ಒಂದೇ ರಸ್ತೆ. ಒಟ್ಟು 3 ಕಿ.ಮೀ. ದೂರವಿರುವ ಆ ರಸ್ತೆಯ ಒಂದೂವರೆ ಕಿ.ಮೀ. ರಸ್ತೆಗೆ ಹಿಂದಿನ ಶಾಸಕರ ಮುತುವರ್ಜಿಯಲ್ಲಿ ಕಾಂಕ್ರೀಟಿಕರಣ ಆಗಿದೆ. ಆದರೆ ಬಾಕಿ ಉಳಿದ ಒಂದೂವರೆ ಕಿ.ಮೀ. ರಸ್ತೆಯಂತೂ ಈಗ ಕೆಸರು ಗದ್ದೆಗಿಂತ ಕಡೆಯಾಗಿದೆ. ವಾಹನ ಬಿಡಿ, ನಡೆದುಕೊಂಡು ಹೋಗಲು ಸಾಧ್ಯವಿಲ್ಲದ ಪರಿಸ್ಥಿತಿಯಿದೆ. ಕೆಲ ದಿನಗಳ ಹಿಂದೆ ಆ ರಸ್ತೆಗೆ ಜಡಿಮಣ್ಣು ಹಾಕಿದ್ದು, ಈಗ ಅದು ಇನ್ನಷ್ಟು ಸಮಸ್ಯೆ ತಂದೊಡ್ಡಿದೆ. ತುರ್ತಾಗಿ ಈ ರಸ್ತೆಗೆ ಸರಿಪಡಿಸದಿದ್ದಲ್ಲಿ ಸಂಚರಿಸಲು ಅಸಾಧ್ಯ. ಅದರಲ್ಲೂ ಕೊನೆಯಲ್ಲಿರುವ 4-5 ಮನೆಯವರಂತೂ ನಡೆದುಕೊಂಡು ಹೋಗಲು ಸಹ ತುಂಬಾ ಪ್ರಯಾಸಪಡಬೇಕಿದೆ.

    ನೆರೆ ಭೀತಿ

    ಪ್ರತಿ ವರ್ಷ ಮಳೆಗಾಲದಲ್ಲಿ ನೆರೆ ಕಟ್ಟಿಟ್ಟಬುತ್ತಿ. ನೆರೆ ಹಾವಳಿಯಿಂದ ಕಂಗೆಟ್ಟಿರುವ ಚಿಕ್ಕಳ್ಳಿ ಗ್ರಾಮದ ಅನೇಕರು ಕೃಷಿ ಚಟುವಟಿಕೆಯಿಂದ ದೂರ ಸರಿದಿದ್ದಾರೆ. ನೆರೆ ಬಂದರೆ ಇರುವ ಏಕೈಕ ರಸ್ತೆ ನೆರೆ ನೀರಿನಲ್ಲಿ ಜಲಾವೃತಗೊಳ್ಳುವುದರಿಂದ ದೋಣಿಯನ್ನು ಆಶ್ರಯಿಸುವಂತಾಗಿದೆ. ಬಾಕಿ ಉಳಿದಿರುವ ಒಂದೂವರೆ ಕಿ.ಮೀ. ಮಣ್ಣಿನ ರಸ್ತೆಯನ್ನು ಯಾವುದಾದರೂ ಅನುದಾನದಿಂದ ಕಾಂಕ್ರೀಟಿಕರಣ ಮಾಡಿ, ಅದರ ಜತೆಗೆ ಕಾಮಗಾರಿಗೂ ಮುನ್ನ ಈ ರಸ್ತೆಯನ್ನು ಕಲ್ಲು ಕಟ್ಟಿ ಎತ್ತರಿಸಿ, ಆಗ ನೆರೆ ಬಂದರೂ ವಾಹನ ಸಂಚರಿಸಲು ಅನುಕೂಲವಾಗಲಿದೆ.

    ಚಿಕ್ಕಳ್ಳಿ ಪ್ರದೇಶದ ಬಾಕಿ ಉಳಿದ ರಸ್ತೆ ಅಭಿವೃದ್ಧಿಗೆ ಹಿಂದೆ ಶಾಸಕರ ಗಮನಕ್ಕೆ ತರಲಾಗಿತ್ತು. ಆದರೆ ಅನುದಾನ ಇಲ್ಲದ್ದರಿಂದ ಆಗಿಲ್ಲ. ಈಗ ಮತ್ತೆ ಶಾಸಕರ ಗಮನಕ್ಕೆ ತಂದು, ದೊಡ್ಡಮಟ್ಟದ ಅನುದಾನ ನೀಡುವಂತೆ ಮನವಿ ಸಲ್ಲಿಸಲಾಗುವುದು.
    -ಸುಧಾಕರ ಶೆಟ್ಟಿ, ನಾಡ ಗ್ರಾಪಂ ಸದಸ್ಯ

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts