More

    ಡಿಜಿಟಲ್ ಸರ್ವೇ ಪ್ರಕ್ರಿಯೆ ಚುರುಕು: 20 ಸಾವಿರ ಹೆಕ್ಟೇರ್ ಭೂಮಿ ಅಳತೆ : 18 ಗ್ರಾಮಗಳಲ್ಲಿ ಕಾರ್ಯ ಪೂರ್ಣ

    ವಿಜಯವಾಣಿ ಸುದ್ದಿಜಾಲ ಕಾಸರಗೋಡು

    ಎಲ್ಲ ಭೂಮಿ ಹಾಗೂ ಭೂಮಿಗೆ ಸಂಬಂಧಿಸಿ ದಾಖಲೆ, ಸೇವೆಗಳನ್ನು ಸ್ಮಾರ್ಟ್‌ಗೊಳಿಸುವ ಉದ್ದೇಶದಿಂದ ಕೇರಳ ಸರ್ಕಾರ ಜಾರಿಗೆ ತಂದಿರುವ ಡಿಜಿಟಲ್ ಸಮೀಕ್ಷೆ ಚಟುವಟಿಕೆಗಳಿಗೆ ಜಿಲ್ಲೆಯಲ್ಲಿ ಚುರುಕುಮುಟ್ಟಿಸಲಾಗಿದೆ.

    ಮೊದಲ ಹಂತದಲ್ಲಿ ಎಲ್ಲ 18 ಗ್ರಾಮಗಳಲ್ಲಿ ಸಮೀಕ್ಷೆ ಪೂರ್ಣಗೊಳಿಸಲಾಗಿದೆ. ಇದರಲ್ಲಿ 17 ಗ್ರಾಮಗಳ ಸರ್ವೇ ದಾಖಲೆ ಕಂದಾಯ ಆಡಳಿತಕ್ಕೆ ಹಸ್ತಾಂತರವಾಗಬೇಕಾಗಿದೆ. ಮೊದಲ ಹಂತದಲ್ಲಿ ಕಾಸರಗೋಡು ಗ್ರಾಮ ಹಾಗೂ ಎರಡನೇ ಹಂತದಲ್ಲಿ ಪೇರಾಲ್, ಕುಂಜತ್ತೂರು, ಬಾರ, ಇಚ್ಲಂಗೋಡು, ಉದ್ಯಾವರ, ಬೇಕೂರು ಮತ್ತು ಚೀಮೇನಿ-2 ಗ್ರಾಮಗಳಲ್ಲಿ ಸರ್ವೇ ಪೂರ್ಣಗೊಳಿಸಿ ಪ್ರಕಟಿಸಲಾಗಿದೆ. ನಂತರ ಸಾರ್ವಜನಿಕರಿಗೆ ದಾಖಲೆ ಪರಿಶೀಲಿಸಲು ಅವಕಾಶ ಕಲ್ಪಿಸಲಾಗಿದ್ದು, ಈ ಬಗ್ಗೆ ದೂರುಗಳಿದ್ದಲ್ಲಿ, ಪರಿಹಾರ ಕಂಡುಕೊಂಡು ಸರ್ವೇ ಕಾರ್ಯ ಪೂರ್ತಿಗೊಳಿಸುವುದು ಗುರಿಯಾಗಿದೆ.

    ಭೂಮಾಲೀಕರು ದಾಖಲೆಗಳನ್ನು ಪರಿಶೀಲಿಸಿ ಸಂಪೂರ್ಣ ದೋಷರಹಿತವಾಗಿರುವುದಾಗಿ ಸ್ಪಷ್ಟಪಡಿಸಬೇಕು ಮತ್ತು ಕಂದಾಯ ಆಡಳಿತಕ್ಕೆ ಹಸ್ತಾಂತರಿಸಬೇಕು. ರಾಜ್ಯದ ಇನ್ನಷ್ಟು ಗ್ರಾಮಗಳು ಮೊದಲ ಹಂತದ ಸರ್ವೇ ಪೂರ್ತಿಗೊಂಡು ಕಂದಾಯ ಆಡಳಿತಕ್ಕೆ ಹಸ್ತಾಂತರಕ್ಕೆ ಸಿದ್ಧವಾಗಿದೆ. ನಂತರ ಎಲ್ಲ ಭೂಮಿಗೆ ಸಂಬಂಧಿಸಿದ ಸೇವೆಗಳು ಆನ್‌ಲೈನ್‌ನಲ್ಲಿ ಮಾತ್ರ ಲಭ್ಯವಿರಲಿದೆ. ಜಿಲ್ಲೆಯ ಎರಡನೇ ಹಂತದಲ್ಲಿ ಸೇರ್ಪಡೆಗೊಂಡ 14 ಗ್ರಾಮಗಳಲ್ಲಿ ಡಿಜಿಟಲ್ ಸಮೀಕ್ಷೆ ಆರಂಭಿಸಲಾಗಿದೆ. ಪಾಡಿ, ಕಿನಾನೂರು, ಚಿಮೇನಿ, ಪೆರಿಯ, ಕಿದೂರು, ನೆಕ್ರಾಜೆ, ಮಡಿಕೈ ಗ್ರಾಮಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಈ ಗ್ರಾಮಗಳ ಭೂ ಮಾಲೀಕರು ‘ಮೈ ಲ್ಯಾಂಡ್’ ಪೋರ್ಟಲ್‌ನಲ್ಲಿ ನಾಗರಿಕರ ಲಾಗಿನ್ ಮೂಲಕ ಸಮೀಕ್ಷೆ ಮಾಹಿತಿ ಪರಿಶೀಲಿಸಬಹುದು. ಶಿಬಿರ ಕಚೇರಿಗೆ ಭೇಟಿ ನೀಡಿ ಅಥವಾ ಉಸ್ತುವಾರಿ ಅಧಿಕಾರಿಗಳನ್ನು ಸಂಪರ್ಕಿಸಿ ಪರಿಶೀಲಿಸಬಹುದಾಗಿದೆ.

    ನನ್ನ ಭೂಮಿ ಪೋರ್ಟಲ್‌ನಲ್ಲಿ ಮಾಹಿತಿ

    ನನ್ನ ಭೂಮಿ ಪೋರ್ಟಲ್ ಲಾಗಿನ್ ವಿಳಾಸ(htpp://entebhoomi.kerala.gov.)ದ ಮೂಲಕ ಸಮೀಕ್ಷೆ ಮಾಹಿತಿ ಪಡೆದುಕೊಳ್ಳಬಹುದಾಗಿದೆ. ಡಿಜಿಟಲ್ ಸರ್ವೇ ನಡೆಯುವ ಗ್ರಾಮಗಳಲ್ಲಿರುವ ಜಮೀನು ಮಾಲೀಕರು ಜಮೀನು ಹೊಂದಿರುವವರು ತಮ್ಮ ಜಾಗದ ಗಡಿ ತೋರಿಸಿ, ನಿವೇಶನದ ಹಕ್ಕು ದಾಖಲೆ, ಮೊಬೈಲ್ ಸಂಖ್ಯೆ ಹಾಗೂ ಪಾಸ್ ಕೋಡ್ ನೀಡಿ ಸಹಕರಿಸುವಂತೆ ಪ್ರಕಟಣೆ ತಿಳಿಸಿದೆ.

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts