More

    ವಿರಾಟ್ ಕೊಹ್ಲಿ ಕಳಪೆ ಫಾರ್ಮ್​ಗೆ ಇದೇ ಬಲವಾದ ಕಾರಣ! ಶಾಕಿಂಗ್ ಸಂಗತಿ ತೆರೆದಿಟ್ಟ ರವಿಶಾಸ್ತ್ರಿ

    ಪ್ರಸಕ್ತ ನಡೆಯುತ್ತಿರುವ ಟಿ20 ವಿಶ್ವಕಪ್ ಟೂರ್ನಿ ಇದೀಗ ಅಂತಿಮ ಘಟಕ್ಕೆ ತಲುಪಿದ್ದು, ಬಾರ್ಬಡೋಸ್​​ನಲ್ಲಿ ನಡೆಯಲಿರುವ ಭಾರತ ಮತ್ತು ದಕ್ಷಿಣಾ ಆಫ್ರಿಕಾ ನಡುವಿನ ಫೈನಲ್ ಪಂದ್ಯದ ಮೂಲಕ ಮುಕ್ತಾಯಗೊಳ್ಳಲಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಯಶಸ್ವಿ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾ, ಈ ಸಮರದಲ್ಲಿ ಗೆದ್ದು ಬರಲಿ ಎಂದು ಕ್ರಿಕೆಟ್ ಅಭಿಮಾನಿಗಳು ದೇವರ ಮೊರೆ ಹೋಗಿ, ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದ್ದಾರೆ.

    ಇದನ್ನೂ ಓದಿ: ಹೃದಯ ಬಯಸಿದೆ ಸೌತ್ ಆಫ್ರಿಕಾ ಗೆಲುವು… ಎಬಿ ಡಿವಿಲಿಯರ್ಸ್​ ಮಾತಿನ ಹಿಂದಿದೆ ಈ ಅರ್ಥ! ಫ್ಯಾನ್ಸ್ ಶಾಕ್

    ಟೂರ್ನಿ ಆರಂಭದ ಮೊದಲ ಪಂದ್ಯದಿಂದಲೂ ರೋಹಿತ್ ಪಡೆ ಅತ್ಯುತ್ತಮ ಪ್ರದರ್ಶನ ನೀಡುತ್ತ ಬಂದಿದ್ದು, ಒಂದು ಮ್ಯಾಚ್​ನಲ್ಲಿಯೂ ಸೋಲನ್ನು ಕಾಣದೆ, ವಿಶ್ವಕಪ್ ಫೈನಲ್​ಗೆ ಬಂದು ನಿಂತಿದೆ. ಆದ್ರೆ, ಈ ಯಶಸ್ವಿ ಪಯಣದಲ್ಲಿ ಟೀಮ್ ಇಂಡಿಯಾದ ‘ರನ್ ಮಷಿನ್’, ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ಮಾತ್ರ ಸತತವಾಗಿ ಕಳಪೆ ಪ್ರದರ್ಶನ ತೋರುವ ಮೂಲಕ ಎಲ್ಲರ ಅಚ್ಚರಿಗೆ ಗುರಿಯಾಗಿದ್ದಾರೆ. ಇಂತಹ ಆಟವನ್ನು ಯಾರೊಬ್ಬರು ಸಹ ವಿರಾಟ್​ರಿಂದ ನಿರೀಕ್ಷಿಸಿರಲಿಲ್ಲ. ಸ್ವತಃ ತಂಡದ ನಾಯಕ ರೋಹಿತ್​ಗೂ ಇದು ಆಶ್ಚರ್ಯ ಉಂಟು ಮಾಡಿದ್ದೇ ಆದರೂ ಕೊಹ್ಲಿ ಜತೆ ನಿಂತು, ಅವರನ್ನು ಪ್ರೋತ್ಸಾಹಿಸಿದ್ದಾರೆ.

    ವಿಶ್ವಕಪ್ ಟೂರ್ನಿಯಲ್ಲಿ ಕೊಹ್ಲಿ ಕಳಪೆ ಫಾರ್ಮ್​ ಬಗ್ಗೆ ಮಾಜಿ ಕ್ರಿಕೆಟಿಗರು ತಮ್ಮ ತಮ್ಮ ಅನಿಸಿಕೆಯನ್ನು ಬಹಿರಂಗವಾಗಿ ಹೇಳಿ, ಭಾರೀ ಚರ್ಚೆಗೆ ಗ್ರಾಸವಾಗಿದ್ದರು. ಆದ್ರೆ, ಈ ಕುರಿತು ಇದೀಗ ಟೀಮ್ ಇಂಡಿಯಾದ ಮಾಜಿ ಹಿರಿಯ ಆಟಗಾರ, ಕಮೆಂಟೇಟರ್​ ಆದ ರವಿಶಾಸ್ತ್ರಿ ಮಾತನಾಡಿದ್ದು, ವಿರಾಟ್​ ಕಳಪೆ ಪ್ರದರ್ಶನದ ಹಿಂದಿರುವ ಕಾರಣವೇನು ಎಂಬುದನ್ನು ಅಭಿಮಾನಿಗಳ ಮುಂದೆ ವಿವರವಾಗಿ ಬಿಚ್ಚಿಟ್ಟಿದ್ದಾರೆ.

    ಇದನ್ನೂ ಓದಿ: ಅಪಘಾತಕ್ಕೆ ಯುವ ಉದ್ಯಮಿ ಬಲಿ : ಉಜಿರೆಯಲ್ಲಿ ಮುಂಜಾನೆ ಸಂಭವಿಸಿದ ಘಟನೆ

    “ವಿರಾಟ್ ಸಮಸ್ಯೆಯಾಗಿರುವುದು ಅವರ ಶಾಟ್ ಆಯ್ಕೆ. ಈ ಪಿಚ್​ಗಳಲ್ಲಿ ಅವರು ಹೊಸದೇನು ಪ್ರಯತ್ನಿಸುವ ಅಗತ್ಯವಿಲ್ಲ. ನೀವು ರೋಹಿತ್ ಗಮನಿಸಿದರೆ ತಿಳಿಯುತ್ತದೆ. ಅವರು ಹೇಗೆ ತಮ್ಮ ಪವರ್​ಫುಲ್ ಹಿಟ್ಟಿಂಗ್ ಮತ್ತು ಶಾಟ್​ ಸೆಲೆಕ್ಷನ್ ಮಾಡುತ್ತಿದ್ದಾರೆ ಎಂಬುದು. ಎದುರಾಳಿ ತಂಡದ ಬೌಲರ್​ಗಳನ್ನು ಬಹಳ ಆರಾಮದಾಯಕವಾಗಿ ಪರಿಗಣಿಸುವುದನ್ನು ರೋಹಿತ್​ ಚೆನ್ನಾಗಿ ಅರಿತಿದ್ದಾರೆ. ಇದೇ ರೀತಿ ಕೊಹ್ಲಿ ಕೂಡ ಅನುಸರಿಸಬೇಕು. ಆಗ ಎಲ್ಲವೂ ಸಾಧ್ಯ. ಆಕ್ರಮಣಕಾರಿಯಾಗಿರುವುದು ಒಳ್ಳೆಯದೇ. ಫೈನಲ್‌ನಲ್ಲಿ ವಿರಾಟ್​ ದಕ್ಷಿಣ ಆಫ್ರಿಕಾ ವಿರುದ್ಧ ರನ್ ಗಳಿಸುವ ಸಾಧ್ಯತೆಯಿದೆ” ಎಂದು ರವಿಶಾಸ್ತ್ರಿ ಹೇಳಿದ್ದಾರೆ,(ಏಜೆನ್ಸೀಸ್).

    ಹೃದಯ ಬಯಸಿದೆ ಸೌತ್ ಆಫ್ರಿಕಾ ಗೆಲುವು… ಎಬಿ ಡಿವಿಲಿಯರ್ಸ್​ ಮಾತಿನ ಹಿಂದಿದೆ ಈ ಅರ್ಥ! ಫ್ಯಾನ್ಸ್ ಶಾಕ್

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts