More

    ಹೊಸ ಕಾನೂನಿನಿಂದ ದೇಶದಲ್ಲಿ ಅಸುರಕ್ಷತೆ, ಅರಾಜಕತೆ ಸೃಷ್ಟಿ

    ವಕೀಲ ಎಂ.ಶಾಂತಾರಾಮ ಶೆಟ್ಟಿ ಅಭಿಪ್ರಾಯ | ಉಡುಪಿಯಲ್ಲಿ ವಿಚಾರ ಸಂಕಿರಣ

    ವಿಜಯವಾಣಿ ಸುದ್ದಿಜಾಲ ಉಡುಪಿ
    ಸಮರ್ಪಕ ಚರ್ಚೆ ನಡೆಸದೆ, ಪಕ್ಷದ ಪ್ರಣಾಳಿಕೆಯಲ್ಲೂ ಉಲ್ಲೇಖಿಸದೆ, ಸಂವಿಧಾನದತ್ತ ಮಾನವ ಹಕ್ಕು ಉಲ್ಲಂಘಿಸುವ ಹೊಸ ಮೂರು ಕಾನೂನುಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಈ ಕಾನೂನಿನಿಂದ ದೇಶದಲ್ಲಿ ಅಸುರಕ್ಷತೆ ಹಾಗೂ ಅರಾಜಕತೆ ಸೃಷ್ಟಿಯಾಗುವ ಎಲ್ಲ ಸಾಧ್ಯತೆ ಇದೆ ಎಂದು ಹಿರಿಯ ವಕೀಲ ಎಂ.ಶಾಂತಾರಾಮ ಶೆಟ್ಟಿ ಅಭಿಪ್ರಾಯಪಟ್ಟರು.

    ಉಡುಪಿ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ಉಡುಪಿ ವಕೀಲರ ಸಂಘ ಶುಕ್ರವಾರ ಆಯೋಜಿಸಿದ್ದ ಹೊಸ ಮೂರು ಕಾನೂನುಗಳಾದ ಭಾರತೀಯ ನ್ಯಾಯ ಸಂಹಿತೆ-2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ-2023, ಭಾರತೀಯ ಸಾಕ್ಷ್ಯ ಅಧಿನಿಯಮ- -2023ರ ಸಾಧಕ-ಬಾಧಕ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

    ದೂರದೃಷ್ಟಿತ್ವ ಇಲ್ಲದ ಮಸೂದೆ

    ಹೊಸ ಕಾನೂನು ಜಾರಿಗೊಳಿಸುವ ಬದಲು ಇಂದಿನ ಕಾಲಮಾನಕ್ಕೆ ತಕ್ಕಂತೆ ಒಂದಿಷ್ಟು ಬದಲಾವಣೆ ಮಾಡಬಹುದಿತ್ತು. ಆದರೆ, ಸುರಕ್ಷತೆಯ ಹೆಸರಲ್ಲಿ ಹೊಸ ಮಸೂದೆಗಳನ್ನು ದೇಶಕ್ಕೆ ನೀಡಲಾಗುತ್ತಿದೆ. ಬ್ರಿಟಿಷರು ಈ ಹಿಂದೆ ಜಾರಿಗೊಳಿಸಿದ್ದ ಐಪಿಸಿಯಲ್ಲಿ ಹಾಗೂ ಇನ್ನಿತರ ಕಾನೂನಿನಲ್ಲಿ ದೂರದೃಷ್ಟಿತ್ವ ಇತ್ತು. ಮಾನವ ಹಕ್ಕುಗಳನ್ನು ರಸುವ ಎಲ್ಲ ಅಂಶಗಳೂ ಅಡಕವಾಗಿದ್ದವು. ಆದರೆ, ಈ ಮೂರು ಹೊಸ ಕಾನೂನುಗಳು ಸಮಾಜದಲ್ಲಿ ಶಾಂತಿ, ಸುವ್ಯವಸ್ಥೆಯನ್ನು ಖಂಡಿತ ಹಾಳು ಮಾಡಲಿದೆ ಎಂದರು.

    ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯದ ನಿರ್ದೇಶಕಿ ಡಾ. ನಿರ್ಮಲಾಕುಮಾರಿ ವಿಚಾರ ಸಂಕಿರಣ ಉದ್ಘಾಟಿಸಿದರು. ವಕೀಲೆ ರೂಪಶ್ರೀ ಪ್ರಾರ್ಥಿಸಿದರು. ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್​ ಪ್ರವೀಣಕುಮಾರ್​ ಸ್ವಾಗತಿಸಿದರು. ವಕೀಲರ ಸಂಘದ ಪ್ರ.ಕಾರ್ಯದರ್ಶಿ ರಾಜೇಶ್​ ಎ.ಆರ್​. ವಂದಿಸಿದರು. ವಕೀಲೆ ಸಹನಾ ಕುಂದರ್​ ಕಾರ್ಯಕ್ರಮ ನಿರೂಪಿಸಿದರು.

    ಮೂವರು ‘ಪಿ’ಗಳಿಗೆ ಪ್ರಾಧಾನ್ಯತೆ

    ಪೊಲೀಸ್​, ಪೊಲಿಟೀಷಿಯನ್​ ಹಾಗೂ ಪವರ್ ಫುಲ್ ಕಮ್ಯುನಿಟಿಗಳೆಂಬ ಮೂರು ‘ಪಿ’ಗಳಿಗೆ ಈ ಹೊಸ ಕಾನೂನು ಮಾಡಿದಂತಿದೆ. ಯಾವುದೇ ಪ್ರಕರಣಗಳಿಗೆ ಸಂಬಂಧಿಸಿ ದೂರು ದಾಖಲಿಸುವ, ಸೆಕ್ಷನ್​ ಅಳವಡಿಸುವ ಹಕ್ಕನ್ನು ಜಿಲ್ಲಾ ಪೊಲೀಸ್​ ವರಿಷ್ಠರಿಗೆ ನೀಡಲಾಗಿದೆ. ಇದರಿಂದ ಸಮಾಜದಲ್ಲಿರುವ ಬಲಾಢ್ಯರು, ರಾಜಕಾರಣಿಗಳು ಹಣಬಲದಿಂದ ಅಪರಾಧ ಮಾಡಿಯೂ ತಪ್ಪಿಸಿಕೊಳ್ಳುವ ಸಾಧ್ಯತೆ ಹೆಚ್ಚಲಿದೆ. ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸುವ ಅವಕಾಶವೂ ಸಾಮಾನ್ಯ ಜನರಿಗೆ ಇನ್ನು ಸುಲಭವಿಲ್ಲ. ಹೊಸ ಕಾನೂನುಗಳಿಂದ ವಕೀಲರಿಗೆ ಯಾವುದೇ ತೊಂದರೆಯಾಗದು. ಯಾವುದೇ ಸೆಕ್ಷನ್​ ಬದಲಿಸಿದರೂ ವಕಾಲತು ಮಾಡುತ್ತೇವೆ. ಆದರೆ, ನ್ಯಾಯಕ್ಕಾಗಿ ಸಾಮಾನ್ಯ ಜನರು ಎಲ್ಲಿಗೆ ಹೋಗಬೇಕು? ಅವರು ಆತ್ಮಹತ್ಯೆಯ ಮಾರ್ಗವನ್ನೇ ಹಿಡಿಯಯಬೇಕಾದೀತು ಎಂದು ಎಂ.ಶಾಂತಾರಾಮ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts