More

    ರೋಹಿತ್ ಶರ್ಮ ಕೇವಲ ಒಬ್ಬ ಕ್ಯಾಪ್ಟನ್​ ಅಲ್ಲ, ಅವರು… ಪಿಯೂಷ್ ಚಾವ್ಲಾ ಮಾತಿಗೆ ತಲೆಬಾಗಿದ ಕ್ರಿಕೆಟ್ ಫ್ಯಾನ್ಸ್​

    ನವದೆಹಲಿ: ಸತತ ಗೆಲುವಿನ ಮೂಲಕ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಮಿಂಚುತ್ತಿರುವ ರೋಹಿತ್ ಪಡೆ, ಇಂದು ಬಾರ್ಬಡೋಸ್​ನಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ವಿಶ್ವಕಪ್ ಟ್ರೋಫಿಗಾಗಿ ಸೆಣಸಾಡಲಿದೆ. ಪಂದ್ಯ ಆರಂಭದ ಬೆನ್ನಲ್ಲೇ ಮಾಜಿ ಕ್ರಿಕೆಟಿಗರು ಟೀಮ್ ಇಂಡಿಯಾ ಗೆಲುವಿಗೆ ಶುಭಹಾರೈಸುತ್ತಿದ್ದು, ವಿಶ್ವಕಪ್ ಕಿರೀಟಕ್ಕೆ ಟೀಮ್ ಇಂಡಿಯಾ ಮುತ್ತಿಡಲಿ ಎಂದು ಆಶಿಸಿದ್ದಾರೆ. ಈ ಮಧ್ಯೆ ಭಾರತ ಗೆದ್ದು ಬರಲಿ ಎಂದು ಸ್ಪಿನ್ನರ್ ಪಿಯೂಷ್ ಚಾವ್ಲಾ ಹಂಬಲ ವ್ಯಕ್ತಪಡಿಸಿದ್ದು, ಕ್ಯಾಪ್ಟನ್ ರೋಹಿತ್ ಶರ್ಮಾ ಬಗ್ಗೆ ಕೆಲವು ವಿಷಯಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಲಿ

    ಪ್ರಸಕ್ತ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ತಂಡವನ್ನು ಯಶಸ್ಸಿನತ್ತ ಮುನ್ನಡೆಸಿಕೊಂಡು ಹೋಗಿರುವ ರೋಹಿತ್ ಶರ್ಮ ಅವರಿಗೆ ಎಷ್ಟು ಮೆಚ್ಚುಗೆ, ಅಭಿನಂದನೆ ತಿಳಿಸಿದರೂ ಸಾಲದು. ದಕ್ಷಿಣ ಆಫ್ರಿಕಾವನ್ನು ಫೈನಲ್​ನಲ್ಲಿ ಮಣಿಸಿ, ವಿಶ್ವಕಪ್ ಟ್ರೋಫಿ ಎತ್ತಿಹಿಡಿಯಲು ಟೀಮ್ ಇಂಡಿಯಾ ಕಾತರದಿಂದ ಕಾಯುತ್ತಿದೆ. ನಾಯಕತ್ವ ವಿಷಯ ಬಂದರೆ ಅದರಲ್ಲಿ ರೋಹಿತ್ ಸದಾ ಮೇಲುಗೈ. ಲೀಡರ್​ಶೀಪ್​ ಸ್ಥಾನದಲ್ಲಿ ಹಿಟ್​ಮ್ಯಾನ್​ ಅಗ್ರಸ್ಥಾನದಲ್ಲಿದ್ದಾರೆ ಎಂದರು.

    ಈ ಹಿಂದೆಯೇ ನಾನು ಹೇಳಿದ್ದೆ. ರೋಹಿತ್ ಶರ್ಮಾ ಕೇವಲ ಒಬ್ಬ ಕ್ಯಾಪ್ಟನ್ ಅಲ್ಲ. ಅವರೊಬ್ಬ ನಿಜವಾದ ನಾಯಕ. ತಂಡದ ಜವಾಬ್ದಾರಿ ಹೊತ್ತು, ಹೇಗೆ ಸಹ ಆಟಗಾರರನ್ನು ಮುನ್ನಡೆಸಿಕೊಂಡು ಹೋಗಬೇಕು ಎಂಬುದು ಅವರಿಗೆ ಸ್ಪಷ್ಟವಾಗಿ ತಿಳಿದಿದೆ. ಇಂದು ರೋಹಿತ್​ ಒಬ್ಬ ಲೀಡರ್ ಆಗಿ ಇತರರಿಗೆ ಅದ್ಭುತ ಉದಾಹರಣೆಯಾಗಿ ನಿಂತಿದ್ದಾರೆ. ಅವರ ಕ್ಯಾಪ್ಟನ್ಸಿ ತಂಡದ ಮೇಲೆ ಉತ್ತಮ ಪ್ರಭಾವ ಬೀರಿದೆ ಎಂದು ಹೇಳಿದ್ದಾರೆ. ಚಾವ್ಲಾ ಮಾತಿಗೆ ಫಿದಾ ಆದ ರೋಹಿತ್ ಅಭಿಮಾನಿಗಳು, ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).

    ಈ ವಿಷಯದ ಬಗ್ಗೆ ಅನುಮಾನವೇ ಬೇಡ… ರೋಹಿತ್​ರನ್ನು ಕಪಿಲ್ ದೇವ್​​ಗೆ ಹೋಲಿಸಿದ ಮಾಜಿ ಕ್ರಿಕೆಟಿಗ

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts