More

    ಈತನಿಗೆ ‘ಆತ್ಮವಿಶ್ವಾಸ 100%, ಸ್ಕಿಲ್​ 0’; ಟೀಮ್ ಇಂಡಿಯಾ ಆಟಗಾರನನ್ನು ಟ್ರೋಲ್ ಮಾಡಿದ ಮಾಜಿ ಕ್ರಿಕೆಟಿಗ

    ನವದೆಹಲಿ: ಇಂದು ಬಾರ್ಬಡೋಸ್​ನಲ್ಲಿ ನಡೆಯಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐಸಿಸಿ ಟಿ20 ವಿಶ್ವಕಪ್ ಪಂದ್ಯಕ್ಕೆ ಇದೀಗ ಕ್ಷಣಗಣನೆ ಆರಂಭಗೊಂಡಿದ್ದು, ಅಂತಿಮ ಹಣಾಹಣಿಯಲ್ಲಿ ಸೌತ್ ಆಫ್ರಿಕಾ ತಂಡವನ್ನು ಮಣಿಸಿ, ವಿಶ್ವಕಪ್ ಪಟ್ಟಕ್ಕೇರಲು ಟೀಮ್ ಇಂಡಿಯಾ ಸನ್ನದ್ಧಗೊಂಡಿದೆ. ಒಂದೆಡೆ ಭಾರತ ಚಾಂಪಿಯನ್ ಆಗಿ ಹೊರಹೊಮ್ಮಲಿ ಎಂದು ಮಾಜಿ ಕ್ರಿಕೆಟಿಗರು ಶುಭಹಾರೈಸುತ್ತಿದ್ದರೆ, ಇತ್ತ ನವಜೋತ್ ಸಿಂಗು ಸಿಧು, ಟೀಮ್ ಇಂಡಿಯಾ ಆಟಗಾರನನ್ನು ಟ್ರೋಲ್ ಮಾಡಿ, ಟೀಕಿಸಿದ್ದಾರೆ.

    ಇದನ್ನೂ ಓದಿ: ಕೊಳಚೆ ಪ್ರದೇಶ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ:ಮಂಡಳಿ ಅಧ್ಯಕ್ಷ ಪ್ರಸಾದ್​ ಅಬ್ಬಯ್ಯ ಹೇಳಿಕೆ

    ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ನವಜೋತ್ ಸಿಂಗು ಸಿಧು, ಪ್ರಸ್ತುತ ಟಿ20 ವಿಶ್ವಕಪ್​ ಟೂರ್ನಿಯಲ್ಲಿ ಭಾರತ ತಂಡಕ್ಕೆ ಅತ್ಯುತ್ತಮ ಬೌಲಿಂಗ್ ಕೊಡುಗೆ ನೀಡುತ್ತ ಬಂದಿರುವ ಅರ್ಷದೀಪ್​ ಸಿಂಗ್​ ಬ್ಯಾಟಿಂಗ್ ವಿಡಿಯೋ ತುಣುಕನ್ನು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಟ್ರೋಲ್ ಮಾಡಿದ್ದಾರೆ.

    ವಿಡಿಯೋ ಮೇಲೆ ‘ಆತ್ಮವಿಶ್ವಾಸ 100, ಕೌಶಲ್ಯ 0’ ಎಂಬ ಶೀರ್ಷಿಕೆಯಿರುವ ವಿಡಿಯೋವನ್ನು ಸಿಧು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಅರ್ಷದೀಪ್ ಬಾಲ್ ಬರುವ ಮುನ್ನ ಕ್ರೀಸ್​ನಿಂದ ಮೂಲೆಗೆ ಹೋಗಿ, ನಂತರ ಬಾಲ್ ಬಂದ ತಕ್ಷಣ ಸ್ಮಾರ್ಟ್​ ಕ್ರಿಕೆಟರ್​ನಂತೆ ಸಿಕ್ಸ್ ಹೊಡೆಯಲು ಮುಂದಾಗುತ್ತಾರೆ. ಆದ್ರೆ, ಬಾಲ್ ಮಿಸ್​ ಆಗಿ ವಿಕೆಟ್ ಕೀಪರ್​ ಕೈಗೆ ಹೋಗುತ್ತದೆ. ಈ ವಿಡಿಯೋಗೆ ಅನೇಕರು ಕಿಡಿಕಾರಿದ್ದು, ಫೈನಲ್​ಗೆ ಶುಭಹಾರೈಸುವ ಬದಲಿಗೆ ಇಂತಹ ವ್ಯಂಗ್ಯವೇಕೆ? ಎಂದು ಪ್ರಶ್ನಿಸಿದ್ದಾರೆ,(ಏಜೆನ್ಸೀಸ್).

    ಈ ವಿಷಯದ ಬಗ್ಗೆ ಅನುಮಾನವೇ ಬೇಡ… ರೋಹಿತ್​ರನ್ನು ಕಪಿಲ್ ದೇವ್​​ಗೆ ಹೋಲಿಸಿದ ಮಾಜಿ ಕ್ರಿಕೆಟಿಗ

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts