More

    ಸೆಮಿಫೈನಲ್​ನಲ್ಲಿ ಭಾರತದ ವಿರುದ್ಧ ಮಾಡಿದ ಬ್ಲಂಡರ್​ ಒಪ್ಪಿಕೊಂಡ ಇಂಗ್ಲೆಂಡ್​ ನಾಯಕ ಜೋಸ್​ ಬಟ್ಲರ್!​

    ಗಯಾನಾ: ಟಿ20 ವಿಶ್ವಕಪ್​ ಸೆಮಿಫೈನಲ್​ ಪಂದ್ಯದಲ್ಲಿ ಭಾರತದ ಸ್ಪಿನ್ನರ್​ಗಳಾದ ಅಕ್ಷರ್​ ಪಟೇಲ್​ (23ಕ್ಕೆ 3) ಮತ್ತು ಕುಲದೀಪ್​ ಯಾದವ್​ (19ಕ್ಕೆ 3) ಕಡಿವಾಣ ಹೇರುವ ಮೂಲಕ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ತಂಡವನ್ನು ಕಟ್ಟಿಹಾಕಿದರು. ಅತ್ತ ಇಂಗ್ಲೆಂಡ್​ ತಂಡ ಮೂವರು ಸ್ಪಿನ್ನರ್​ಗಳನ್ನು ಮಾತ್ರ ಹೊಂದಿದ್ದರೂ, ಇಬ್ಬರಿಗೆ ಮಾತ್ರ ಬೌಲಿಂಗ್​ ನೀಡಿತು ಮತ್ತು ಅವರು ಒಂದು ವಿಕೆಟ್​ ಕಬಳಿಸಲಷ್ಟೇ ಶಕ್ತರಾದರು. ಜಾರ್ಜ್​ಟೌನ್​ನ ಸ್ಪಿನ್​ ಸ್ನೇಹಿ ಪಿಚ್​ನಲ್ಲಿ ತಂಡದ 3ನೇ ಸ್ಪಿನ್ನರ್​ ಆಗಿದ್ದ ಮೊಯಿನ್​ ಅಲಿಗೆ ಬೌಲಿಂಗ್​ ನೀಡದ ಎಡವಟ್ಟಿನ ಬಗ್ಗೆ ಇಂಗ್ಲೆಂಡ್​ ನಾಯಕ ಜೋಸ್​ ಬಟ್ಲರ್​ 68 ರನ್​ಗಳಿಂದ ಸೋಲುಂಡ ಬಳಿಕ ವಿಷಾದಿಸಿದರು. ಮೊಯಿನ್​ ಅಲಿಗೆ ಬೌಲಿಂಗ್​ ನೀಡದ್ದು ತಮ್ಮ ಕಾರ್ಯತಂತ್ರದ ಪ್ರಮಾದವಾಗಿತ್ತು ಎಂದೂ ಬಟ್ಲರ್​ ಒಪ್ಪಿಕೊಂಡಿದ್ದಾರೆ.

    ಭಾರತದ 172 ರನ್​ ಸವಾಲಿಗೆ ಪ್ರತಿಯಾಗಿ ಇಂಗ್ಲೆಂಡ್​, 16.4 ಓವರ್​ಗಳಲ್ಲೇ 103 ರನ್​ಗಳಿಗೆ ಸರ್ವಪತನ ಕಂಡಿತು. ಇನಿಂಗ್ಸ್​ನ 4ನೇ ಓವರ್​ನ ಮೊದಲ ಎಸೆತದಲ್ಲೇ ಬಟ್ಲರ್​, ಅಕ್ಷರ್​ ಪಟೇಲ್​ಗೆ ವಿಕೆಟ್​ ಒಪ್ಪಿಸಿದ ಬಳಿಕ ಇಂಗ್ಲೆಂಡ್​ ನಾಟಕೀಯ ಕುಸಿತ ಕಂಡಿತು. ಪವರ್​ಪ್ಲೇನಲ್ಲೇ 3 ವಿಕೆಟ್​ ಕಳೆದುಕೊಂಡಿತು. ನಂತರ 11ನೇ ಓವರ್​ ವೇಳೆ ತಂಡದ ಎಲ್ಲ 6 ಬ್ಯಾಟರ್​ಗಳು ಡಗೌಟ್​ ಸೇರುವುದರೊಂದಿಗೆ ಆಂಗ್ಲರ ಸೋಲು ಖಚಿತಗೊಂಡಿತು.

    ಭಾರತ ತಂಡ ನಮ್ಮನ್ನು ಎಲ್ಲ ವಿಭಾಗಗಳಲ್ಲೂ ಹಿಮ್ಮೆಟ್ಟಿಸಿತು. ಭಾರತ ಈ ಗೆಲುವಿಗೆ ಅರ್ಹ ತಂಡವಾಗಿದೆ. ಭಾರತವನ್ನು ನಾವು 145-150 ರನ್​ಗಳಿಗೆ ನಿಯಂತ್ರಿಸಬೇಕಾಗಿತ್ತು. ಆದರೆ ಅವರು ಅದಕ್ಕಿಂತ ದೊಡ್ಡ ಮೊತ್ತ ಗಳಿಸಿದರು. ಅದನ್ನು ಚೇಸಿಂಗ್​ ಮಾಡುವುದು ನಮಗೆ ಕಠಿಣವಾಗಿತ್ತು ಎಂದು ಬಟ್ಲರ್​ ವಿವರಿಸಿದರು. ಈ ಜಯದೊಂದಿಗೆ ಭಾರತ ತಂಡ 2022ರ ಟಿ20 ವಿಶ್ವಕಪ್​ ಸೆಮಿಫೈನಲ್​ ಸೋಲಿಗೆ ಸೇಡು ತೀರಿಸಿಕೊಂಡಿತು. ಆಗ ಇಂಗ್ಲೆಂಡ್​ 10 ವಿಕೆಟ್​ಗಳಿಂದ ಗೆದ್ದಿದ್ದರೆ, ಭಾರತ ಈ ಬಾರಿ ಆಂಗ್ಲರ ಎಲ್ಲ 10 ವಿಕೆಟ್​ ಕಬಳಿಸಿ ಲೆಕ್ಕ ಚುಕ್ತಾ ಮಾಡಿತು.

    ರಿಲಯನ್ಸ್ ಫೌಂಡೇಷನ್ ಸಹಯೋಗದಲ್ಲಿ ಪ್ಯಾರಿಸ್ ಒಲಿಂಪಿಕ್ಸ್​ಗೆ ಇಂಡಿಯಾ ಹೌಸ್ ನಿರ್ಮಾಣ

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts