More

    ಇಂದು ಅಜೇಯ ತಂಡಗಳ ನಡುವೆ ಟಿ20 ವಿಶ್ವಕಪ್ ಫೈನಲ್: ಉಭಯ ತಂಡದ ಫೈನಲ್ ಹಾದಿ ಇಲ್ಲಿದೆ!

    ಬ್ರಿಜ್‌ಟೌನ್: ಕಳೆದೊಂದು ದಶಕದ ಐಸಿಸಿ ಪ್ರಶಸ್ತಿ ಬರ ನೀಗಿಸುವ ನಿಟ್ಟಿನಲ್ಲಿ ಟೀಮ್ ಇಂಡಿಯಾ ಟಿ20 ವಿಶ್ವ ಕಿರೀಟಕ್ಕೆ ಮುತ್ತಿಡಲು ಇನ್ನೊಂದು ಗೆಲುವಿನ ದೂರದಲ್ಲಿದೆ. ಹಾಲಿ ಏಕದಿನ-ಟೆಸ್ಟ್ ಚಾಂಪಿಯನ್ ಆಸ್ಟ್ರೇಲಿಯಾ ಹಾಗೂ ಟಿ20 ವಿಶ್ವ ಚಾಂಪಿಯನ್ ಇಂಗ್ಲೆಂಡ್‌ಗೆ ಮಣ್ಣುಮುಕ್ಕಿಸಿದ ವಿಶ್ವಾಸದಲ್ಲಿರುವ ರೋಹಿತ್ ಶರ್ಮ ಪಡೆ, ಕೆನ್ಸಿಂಗ್‌ಟನ್ ಓವಲ್ ಕ್ರೀಡಾಂಗಣದಲ್ಲಿ ಶನಿವಾರ ನಡೆಯಲಿರುವ 9ನೇ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಪ್ರಶಸ್ತಿ ಸುತ್ತಿನ ಸೆಣಸಾಟದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದೆ. ಅಜೇಯ ತಂಡಗಳ ನಡುವಿನ ಈ ಕಾದಾಟ ತೀವ್ರ ಕುತೂಹಲ ಕೆರಳಿಸಿದೆ. 1983ರಲ್ಲಿ ಕೆರಿಬಿಯನ್ಸ್ ಎದುರು ಚೊಚ್ಚಲ ಐಸಿಸಿ ವಿಶ್ವಕಪ್ ಜಯಿಸಿದ್ದ ಭಾರತ, ಇದೀಗ ಕೆರಿಬಿಯನ್ ನಾಡಲ್ಲಿ ಪ್ರಶಸ್ತಿ ಎತ್ತಿಹಿಡಿಯುವ ತವಕದಲ್ಲಿದೆ. ಮತ್ತೊಂದೆಡೆ ದಕ್ಷಿಣ ಆಫ್ರಿಕಾ ಚೊಚ್ಚಲ ಐಸಿಸಿ ವಿಶ್ವಕಪ್ ಗೆಲುವಿನ ಕನಸಿನಲ್ಲಿದೆ.
    ಹತ್ತು ವರ್ಷಗಳ ಬಳಿಕ ಟಿ20 ವಿಶ್ವಕಪ್ ೈನಲ್ ಆಡಲಿರುವ ಟೀಮ್ ಇಂಡಿಯಾ 17 ವರ್ಷಗಳ ಬಳಿಕ ಚುಟುಕು ಕ್ರಿಕೆಟ್ ವಿಶ್ವ ಚಾಂಪಿಯನ್ ಎನಿಸುವ ತುಡಿತದಲ್ಲಿದೆ. ಕಳೆದ ವರ್ಷ ತವರಿನಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯ ಅದ್ಭುತ ಪ್ರದರ್ಶನವನ್ನು ಹಾಲಿ ಟೂರ್ನಿಯಲ್ಲೂ ಪುನರಾವರ್ತಿಸಿರುವ ರೋಹಿತ್ ಶರ್ಮ ಪಡೆ, ಆಲ್ರೌಂಡ್ ನಿರ್ವಹಣೆಯೊಂದಿಗೆ ಟೂರ್ನಿಯಲ್ಲಿ ಅಜೇಯವಾಗಿ ಉಳಿಯುವ ಮೂಲಕ ಪ್ರಶಸ್ತಿ ೇವರಿಟ್ ಆಗಿ ಕಣಕ್ಕಿಳಿಯಲಿದೆ.ಫೈನಲ್ ಹಾದಿ…

    ಭಾರತ
    *ಐರ್ಲೆಂಡ್ ಎದುರು 8 ವಿಕೆಟ್ ಗೆಲುವು
    *ಪಾಕಿಸ್ತಾನ ವಿರುದ್ಧ 6 ರನ್ ಜಯ
    *ಅಮೆರಿಕ ಎದುರು 7 ವಿಕೆಟ್ ಜಯ
    *ಕೆನಡಾ ವಿರುದ್ಧ ಪಂದ್ಯ ರದ್ದು
    ಸೂಪರ್-8
    *ಅ್ಘಾನಿಸ್ತಾನ ಎದುರು 47 ರನ್ ಜಯ
    *ಬಾಂಗ್ಲಾದೇಶ ವಿರುದ್ಧ 50 ರನ್ ಗೆಲುವು
    *ಆಸ್ಟ್ರೇಲಿಯಾ ಎದುರು 24 ರನ್ ಜಯ
    ಸೆಮಿೈನಲ್
    *ಇಂಗ್ಲೆಂಡ್ ಎದುರು 68 ರನ್ ಗೆಲುವು

    ದಕ್ಷಿಣ ಆಫ್ರಿಕಾ
    *ಶ್ರೀಲಂಕಾ ಎದುರು 6 ವಿಕೆಟ್ ಜಯ
    *ನೆದರ್ಲೆಂಡ್ ಎದುರು 4 ವಿಕೆಟ್ ಗೆಲುವು
    *ಬಾಂಗ್ಲಾದೇಶ ಎದುರು 4 ರನ್ ಜಯ
    *ನೇಪಾಳ ಎದುರು 1 ರನ್ ಗೆಲುವು
    ಸೂಪರ್-8
    *ಅಮೆರಿಕ ಎದುರು 18 ರನ್ ಜಯ
    *ಇಂಗ್ಲೆಂಡ್ ಎದುರು 7 ರನ್ ಗೆಲುವು
    *ವೆಸ್ಟ್ ಇಂಡೀಸ್ ವಿರುದ್ಧ 7 ವಿಕೆಟ್ ಜಯ
    ಸೆಮಿೈನಲ್
    *ಅ್ಘಾನಿಸ್ತಾನ ಎದುರು 9 ವಿಕೆಟ್ ಜಯ

    ಮುಖಾಮುಖಿ: 26
    ಭಾರತ: 14
    ದ.ಆಫ್ರಿಕಾ: 11
    ರದ್ದು: 1
    ವಿಶ್ವಕಪ್‌ನಲ್ಲಿ: 6
    ಭಾರತ: 4
    ದ.ಆಫ್ರಿಕಾ: 2

    ಆರಂಭ: ರಾತ್ರಿ 8.00
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ ಹಾಟ್‌ಸ್ಟಾರ್

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts