More

    ಪತಿಯಿಂದ ಸೋನಾಕ್ಷಿಗೆ ಸಿಕ್ತು ದುಬಾರಿ ಗಿಫ್ಟ್​: ಈ ಐಷಾರಾಮಿ ಕಾರಿನ ಬೆಲೆ ಗೊತ್ತಾದ್ರೆ ಬೆರಗಾಗ್ತೀರಾ!

    ಮುಂಬೈ: ಬಾಲಿವುಡ್ ಸ್ಟಾರ್ ಹೀರೋಯಿನ್ ಸೋನಾಕ್ಷಿ ಸಿನ್ಹಾ ಮತ್ತು ಬರಹಗಾರ ಜಹೀರ್ ಇಕ್ಬಾಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಜೂನ್ 23 ರಂದು ಕುಟುಂಬ ಸದಸ್ಯರು ಮತ್ತು ಅನೇಕ ಬಾಲಿವುಡ್ ಸೆಲೆಬ್ರಿಟಿಗಳ ಸಮ್ಮುಖದಲ್ಲಿ ಇಬ್ಬರ ಮದುವೆ ನಡೆಯಿತು.

    ಏಳು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ, ಇಬ್ಬರ ಧರ್ಮ ಬೇರೆಯಾಗಿರುವುದರಿಂದ ಸೋನಾಕ್ಷಿ ಕುಟುಂಬಸ್ಥರಿಗೆ ಈ ಮದುವೆ ಇಷ್ಟವಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿಯೇ ಸೋನಾಕ್ಷಿಯ ಒಡಹುಟ್ಟಿದವರು ಮದುವೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಅಲ್ಲದೆ, ಧರ್ಮ ಬೇರೆ ಎಂಬ ಕಾರಣಕ್ಕೆ ಕೆಲವರು ಈ ಮದುವೆಗೆ ವಿರೋಧ ಸಹ ವ್ಯಕ್ತಪಡಿಸಿದ್ದಾರೆ. ಆದರೆ, ಇದಕ್ಕೆಲ್ಲ ಕ್ಯಾರೆ ಎನ್ನದೆ ಸೋನಾಕ್ಷಿ ಮತ್ತು ಜಹೀರ್​ ವೈವಾಹಿಕ ಜೀವನಕ್ಕೆ ಧುಮುಕಿದ್ದಾರೆ. ಜಹೀರ್ ಇಕ್ಬಾಲ್ ತಮ್ಮ ಪತ್ನಿ ಸೋನಾಕ್ಷಿಗೆ ದುಬಾರಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಆ ಕಾರಿನ ಬೆಲೆ ಎಷ್ಟು ಗೊತ್ತಾ? ಗೊತ್ತಾದ್ರೆ ಒಂದು ಕ್ಷಣ ನಿಮ್ಮ ಹುಬ್ಬೇರದೇ ಇರದು.

    ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ ತಮ್ಮ ಗೆಳೆಯ ಜಹೀರ್ ಇಕ್ಬಾಲ್ ಅವರನ್ನು ವರಿಸಿದ್ದು ಗೊತ್ತೇ ಇದೆ. ಆದರೆ ಇದೀಗ ಈ ಜೋಡಿಗೆ ಸಂಬಂಧಿಸಿದ ಸುದ್ದಿಯೊಂದು ಹಾಟ್ ಟಾಪಿಕ್ ಆಗಿದೆ. ಏನದು? ಅಂದರೆ, ಮದುವೆಗೂ ಮುನ್ನ ಸೋನಾಕ್ಷಿಗೆ ಇಕ್ಬಾಲ್ ದುಬಾರಿ ಕಾರನ್ನು ಉಡುಗೊರೆಯಾಗಿ ನೀಡಿದ್ದರು ಎಂದು ತಿಳಿದುಬಂದಿದೆ. ಇದೀಗ ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಮದುವೆಯ ನಂತರದ ಸಂಭ್ರಮಾಚರಣೆಗಾಗಿ ಸೋನಾಕ್ಷಿ ದಂಪತಿ ದುಬಾರಿ ಬಿಎಂಡಬ್ಲ್ಯು ಐ7 ಎಲೆಕ್ಟ್ರಿಕ್​ ಸೆಡಾನ್​ ಕಾರಿನಲ್ಲಿ ಮುಂಬೈನ ರೆಸ್ಟೋರೆಂಟ್‌ಗೆ ಆಗಮಿಸಿದ್ದರು. ಇಕ್ಬಾಲ್ ಈ ಎಲೆಕ್ಟ್ರಿಕ್ ಕಾರನ್ನು ಸೋನಾಕ್ಷಿಗೆ ಉಡುಗೊರೆಯಾಗಿ ನೀಡಿದ್ದಾರಂತೆ. ಮಾರುಕಟ್ಟೆಯಲ್ಲಿ ಇದರ ಬೆಲೆ ಸುಮಾರು 2 ರಿಂದ 3 ಕೋಟಿ ರೂಪಾಯಿ ಇದೆ. ಅದರ ಬೆಲೆ ಗೊತ್ತಾದ್ರೂ ಹೆಂಡತಿಗೆ ಇಷ್ಟೊಂದು ದುಬಾರಿ ಕಾರನ್ನು ಗಿಫ್ಟ್ ಕೊಟ್ಟಿದ್ದಾನಾ ಎಂದು ಜನರು ಆಶ್ಚರ್ಯಚಕಿತರಾಗಿದ್ದಾರೆ. ಪತಿ ಕೊಟ್ಟ ಗಿಫ್ಟ್ ನೋಡಿ ಸೋನಾಕ್ಷಿ ಸಹ ಶಾಕ್ ಆಗಿದ್ದಾರೆ. (ಏಜೆನ್ಸೀಸ್​)

    ನಿಜ ಹೇಳ್ತೀನಿ 2 ಬಾರಿ ಅನುಷ್ಕಾ ಶರ್ಮಾರನ್ನು… ಮದ್ವೆ ಬಳಿಕ ಸ್ಫೋಟಕ ಸತ್ಯ ಬಿಚ್ಚಿಟ್ಟ ವಿಜಯ್​ ಮಲ್ಯ ಪುತ್ರ!

    ನಾನು ಕೂಡ ಅನೇಕ ರಿಲೇಶನ್​ಶಿಪ್​ನಲ್ಲಿದ್ದೆ ಕೊನೆಗೆ… ಕಿರಾತಕ ಬೆಡಗಿ ಓವಿಯಾ ಓಪನ್​ ಟಾಕ್​!

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts