More

    ಈ ಒಂದು ಕಾರಣಕ್ಕೆ ನನ್ನ ಮಗನಿಗೆ ಇನ್ನೂ ಮದುವೆಯಾಗಿಲ್ಲ; ಶಾಕಿಂಗ್​ ಹೇಳಿಕೆ ಕೊಟ್ಟ ಸಲ್ಮಾನ್​ ಖಾನ್​​​ ತಂದೆ

    ಮುಂಬೈ: ಬಿಟೌನ್‌ನ ಮೋಸ್ಟ್​​​​ ಬ್ಯಾಚುಲರ್​​​ ನಟ ಸಲ್ಮಾನ್ ಖಾನ್. 90ರ ದಶಕದಲ್ಲಿ ಮದುವೆಯಾಗಲು ನಿರ್ಧರಿಸಿದ್ದ ಅವರು ಇದುವರೆಗೂ ಒಂಟಿಯಾಗಿಯೇ ಇದ್ದಾರೆ. ಸಿನಿಮಾ ಜಗತ್ತಿನಲ್ಲಿ ಆಗಾಗ್ಗೆ ಸಲ್ಲು ಭಾಯಿ ಡೇಟಿಂಗ್​ ಮಾಡುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿರುತ್ತದೆ. ಅದರಲ್ಲಿ ಐಶ್ವರ್ಯಾ ರೈ, ಕತ್ರಿನಾ ಕೈಫ್, ಸೋಮಿ ಅಲಿ, ಸಂಗೀತಾ ಬಿಜಲಾನಿ ಮತ್ತು ಯುಲಿಯಾ ವಂತೂರ್ ಅವರ ಹೆಸರು ಕೇಳಿಬಂದಿದೆ.

    ಇದನ್ನು ಓದಿ: ದುಬಾರಿ ಬೆಲೆಗೆ ಮಾರಾಟವಾಯ್ತು ಕಲ್ಕಿ 2898 AD ಟಿಕೆಟ್​; ರೇಟ್​ ಎಷ್ಟು ಗೊತ್ತಾ?

    ಸಲ್ಮಾನ್​​​​ಖಾನ್​ 58 ವರ್ಷವಾದರೂ ಯಾಕೆ ಮದುವೆಯಾಗುತ್ತಿಲ್ಲ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದ್ದು, ಅದಕ್ಕೆ ಉತ್ತರ ತಿಳಿಯಲು ಕಾತುರದಿಂದ ಕಾಯುತ್ತಿದ್ದಾರೆ. ಕೊನೆಗೂ ಈಗ ಅವರ ತಂದೆ ಸಲೀಂ ಖಾನ್ ಅವರು ಸಲ್ಮಾನ್ ಖಾನ್​ ಯಾಕೆ ಬ್ರಹ್ಮಚಾರಿಯಾಗಿಯೇ ಉಳಿದಿದ್ದಾರೆ ಎಂಬ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.

    ಸಲೀಂ ಖಾನ್ ಅವರಿಗೆ ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರಿದ್ದಾರೆ. ಸಲ್ಮಾನ್ ಬಿಟ್ಟರೆ ಉಳಿದವರೆಲ್ಲ ಮದುವೆಯಾಗಿದ್ದಾರೆ. ಸಲ್ಮಾನ್​​ ಯಾಕೆ ಮದುವೆಯಾಗುತ್ತಿಲ್ಲ ಎಂಬ ಮಾತಿಗೆ ‘ಸಲ್ಮಾನ್​ ಸುಲಭವಾಗಿ ಸಂಬಂಧಗಳಿಗೆ ಬರುತ್ತಾರೆ, ಆದರೆ ಅವರಿಗೆ ಮದುವೆಯಾಗಲು ಧೈರ್ಯವಿಲ್ಲ’ ಎಂದು ಸಲೀಂ ಖಾನ್​​ ಅವರು ಹೇಳಿರುವ ವೀಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ವೀಡಿಯೊದಲ್ಲಿ ಸಲ್ಮಾನ್​ ಖಾನ್​ ಮದುವೆ ಆಗಲು ಯಾವ ರೀತಿಯ ಹುಡುಗಿ ಬೇಕು ಎಂಬುದನ್ನು ಅವರು ಹೇಳಿದ್ದಾರೆ. ‘ಸಲ್ಮಾನ್​ ಅವರಿಗೆ ತನ್ನ ತಾಯಿಯಂತೆ ಮನೆ ಮತ್ತು ಮಕ್ಕಳನ್ನು ನೋಡಿಕೊಳ್ಳುವ ಹುಡುಗಿ ಬೇಕು. ಅವರು ತುಂಬಾ ಸರಳ ಸ್ವಭಾವದವರಾಗಿದ್ದಾರೆ ಮತ್ತು ಬೇಗನೆ ಆಕರ್ಷಿತರಾಗುತ್ತಾರೆ. ಆದರೆ ಅವರು ಮದುವೆ ಆಗುವ ಹುಡುಗಿ ತನ್ನ ತಾಯಿಯಂತೆ ತನ್ನ ಗಂಡ ಮತ್ತು ಮಕ್ಕಳಿಗೆ ಮೀಸಲಾಗಿರಬೇಕು ಎಂದು ಬಯಸುತ್ತಾರೆ ಎಂದಿದ್ದಾರೆ.

    ಅವರು ಇದುವರೆಗೂ ಭೇಟಿಯಾದ ಎಲ್ಲ ಮಹಿಳೆಯರೂ ವೃತ್ತಿ ಆಧಾರಿತರಾಗಿದ್ದರು. ಮದುವೆಯಾಗುವ ಹುಡುಗಿ ಮಕ್ಕಳಿಗೆ ಅಡುಗೆ ಮಾಡಬೇಕು, ಬಟ್ಟೆ ಧರಿಸಲು ಸಹಾಯ ಮಾಡಬೇಕು ಮತ್ತು ಅವರಿಗೆ ಮನೆಕೆಲಸ ತಿಳಿದಿರಬೇಕು ಎಂದು ಭಾವಿಸುತ್ತಾರೆ. ಆದರೆ ಇಂದಿನ ಕಾಲದಲ್ಲಿ ಇದೆಲ್ಲಾ ಸುಲಭವಲ್ಲ. ಈ ಕಾರಣಕ್ಕಾಗಿಯೇ ಸಲ್ಮಾನ್​ ಖಾನ್​​​ ಮದುವೆಯಾಗುತ್ತಿಲ್ಲ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​​)

    ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಮುಂದಾದ ಸರ್ಕಾರ​​​​; ಜೀವಾವಧಿ ಶಿಕ್ಷೆ ಜತೆಗೆ 1 ಕೋಟಿ ರೂ. ದಂಡ

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts