More

    ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನಕ್ಕೆ ಇದೇ ಕಾರಣ! ಇದೊಂದು ಮಿಸ್ಟೇಕ್ ಸರಿಯಾದರೆ ‘ಕಿಂಗ್’ ಇಸ್​ ಬ್ಯಾಕ್​

    ನವದೆಹಲಿ: ಪ್ರಸಕ್ತ ವೆಸ್ಟ್ ಇಂಡೀಸ್​ನಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ 2024ರ ಸೂಪರ್ 8 ಹಂತದಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಸತತವಾಗಿ ಅದ್ಭುತ ಪ್ರದರ್ಶನ ನೀಡುತ್ತ ಬಂದಿದ್ದು, ಇದೀಗ ಸೆಮಿಫೈನಲ್​ಗೂ ಲಗ್ಗೆಯಿಟ್ಟಿದೆ. ತಂಡದ ನಾಯಕನಾಗಿ ತಮ್ಮ ಜವಾಬ್ದಾರಿಯನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗುತ್ತಿರುವ ರೋಹಿತ್​ಗೆ ಟೀಮ್​ನ ಸಹ ಆಟಗಾರರು ಸಖತ್ ಸಾಥ್ ಕೊಡುತ್ತಿದ್ದಾರೆ. ತಂಡವಾಗಿ ಎದುರಾಳಿಗಳ ಬೆವರಿಳಿಸುತ್ತಿರುವ ಭಾರತಕ್ಕೆ ಓಪನಿಂಗ್ ಬ್ಯಾಟ್ಸ್​ಮನ್​ ವಿರಾಟ್​ ಕೊಹ್ಲಿ ಅವರ ಸ್ಫೋಟಕ ಇನ್ನಿಂಗ್ಸ್​ ಮಾತ್ರ ಜತೆಗಿಲ್ಲದಂತಾಗಿದೆ.

    ಇದನ್ನೂ ಓದಿ: ನೀರಿನ ಕೊರತೆಯಿಂದ ಭಾರತದ ಆರ್ಥಿಕತೆಗೆ ಧಕ್ಕೆ: ಮೂಡೀಸ್ ರೇಟಿಂಗ್ಸ್​ ಎಚ್ಚರಿಕೆ

    ಟೀಮ್ ಇಂಡಿಯಾದ ಮಾಜಿ ನಾಯಕ, ದಾಖಲೆಗಳ ಸರದಾರ, ‘ರನ್ ಮಷಿನ್’​ ವಿರಾಟ್ ಕೊಹ್ಲಿ ಸದ್ಯ ಟಿ20 ವಿಶ್ವಕಪ್ ತಂಡದಲ್ಲಿದ್ದರು ಸಹ ಇಲ್ಲದಂತೆ ಇರುವುದು ಅಪಾರ ಕ್ರಿಕೆಟ್ ಅಭಿಮಾನಿಗಳಲ್ಲಿ ಬೇಸರ ತಂದಿದೆ. ಇದಕ್ಕೆ ಕಾರಣ ಸತತ ಕಳಪೆ ಪ್ರದರ್ಶನ. ಹೌದು, ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಪರ ಮೊದಲ ಪಂದ್ಯದಿಂದಲೂ ರೋಹಿತ್ ಶರ್ಮ ಅವರೊಟ್ಟಿಗೆ ಓಪನಿಂಗ್​ ಬರುತ್ತಿರುವ ವಿರಾಟ್, ಉತ್ತಮ ಪರ್ಫಾಮೆನ್ಸ್ ಕೊಡದೆ ಡಕ್ ಔಟ್​ ಆಗಿ ಪೆವಿಲಿಯನ್​ನತ್ತ ಮುಖ ಮಾಡುತ್ತಿರುವುದು ಕ್ರಿಕೆಟ್ ದಿಗ್ಗಜರಿಗೆ ಭಾರೀ ಅಚ್ಚರಿ ಮೂಡಿಸಿದೆ.

    ಪಾಕಿಸ್ತಾನ, ನ್ಯೂಯಾರ್ಕ್​, ಯುಎಸ್​ಎ, ಆಫ್ಘಾನಿಸ್ತಾನ ವಿರುದ್ಧದ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ತೋರಿದ್ದಾರೆ. ಕೊಹ್ಲಿ ಮೈದಾನಕ್ಕಿಳಿದರೆ ರನ್​ಗಳ ಸುರಿಮಳೆ ಖಚಿತ ಎಂದೇ ನಿರೀಕ್ಷಿಸುವ ಕ್ರಿಕೆಟ್ ಫ್ಯಾನ್ಸ್​, ವಿರಾಟ್​ ಅವರ ಈ ಪ್ರದರ್ಶನವನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ. ಕಳೆದ ಐಪಿಎಲ್​ ಲೀಗ್​ನಲ್ಲಿ ಆರ್​ಸಿಬಿ ಪರ ಓಪನಿಂಗ್ ಬಂದ ವಿರಾಟ್​, ಅತ್ಯಧಿಕ ರನ್​ಗಳನ್ನು ಗಳಿಸುವ ಮೂಲಕ ಆರೆಂಜ್ ಕ್ಯಾಪ್​ಗೆ ಅರ್ಹರಾದರು. ಈ ಮೂಲಕ ಅತ್ಯುತ್ತಮ ಫಾರ್ಮ್​ ಉಳಿಸಿಕೊಂಡಿದ್ದ ರನ್​ ಮಷಿನ್,​ ಮುಂದಿನ ಟಿ20 ವಿಶ್ವಕಪ್​ನಲ್ಲಿಯೂ ಇದೇ ರೀತಿ ಓಪನಿಂಗ್ ಆಡಿದರೆ, ತಂಡಕ್ಕೆ ದೊಡ್ಡ ಕೊಡುಗೆ ಸಿಗಲಿದೆ ಎಂದು ಹೇಳಲಾಗಿತ್ತು. ಇದಕ್ಕೆ ಕೆಲವು ಮಾಜಿ ಕ್ರಿಕೆಟಿಗರು ಆಕ್ಷೇಪಣೆ ಕೂಡ ವ್ಯಕ್ತಪಡಿಸಿದ್ದರು.

    ಇದನ್ನೂ ಓದಿ: ಗಾರ್ಮೆಂಟ್ಸ್ ಕ್ಷೇತ್ರಕ್ಕೆ ಪಿಎಲ್‌ಐ ಯೋಜನೆ ವಿಸ್ತರಿಸಲು ಚಿಂತನೆ: ಜವಳಿ ಸಚಿವ ಗಿರಿರಾಜ್ ಸಿಂಗ್

    ವಿರಾಟ್ ಕೊಹ್ಲಿ ಎಂದಿನಂತೆ ತಂಡದ ಪರ ಮೂರನೇ ಕ್ರಮಾಂಕದಲ್ಲಿಯೇ ವಿಶ್ವಕಪ್ ಪಂದ್ಯಗಳನ್ನು ಆಡಲಿ. ರೋಹಿತ್ ಜತೆ ಓಪನಿಂಗ್ ಹೋಗುವುದು ಬೇಡ. ಶರ್ಮ ಅವರೊಟ್ಟಿಗೆ ಯಶಸ್ವಿ ಜೈಸ್ವಾಲ್​ ಅವರನ್ನು ಆರಂಭಿಕ ಬ್ಯಾಟ್ಸ್​ಮನ್ ಆಗಿ ಕಳಿಸುವುದು ಉತ್ತಮ. ಕೊಹ್ಲಿ ಮೂರನೇ ಆರ್ಡರ್​ನಲ್ಲಿ ಬರುವುದೇ ಸರಿ. ಆಗ ಅವರ ಸ್ಫೋಟಕ ಪ್ರದರ್ಶನ, ಆಕರ್ಷಕ ಬ್ಯಾಟಿಂಗ್ ವೈಖರಿ ನೋಡಲು ಸಾಧ್ಯವಾಗುತ್ತದೆ ಎಂದು ಮಾಜಿ ಕ್ರಿಕೆಟಿಗರು ಅಂದೇ ತಮ್ಮ ಅಭಿಪ್ರಾಯಗಳನ್ನು ಹೊರಹಾಕಿದ್ದರು. ಪ್ರಸ್ತುತ ಈ ಮಾತುಗಳು ನಿಜವಾಗಿದ್ದು, ವಿರಾಟ್ ಅವರ ಕಳಪೆ ಪ್ರದರ್ಶನಕ್ಕೆ ಟಾಪ್ ಆರ್ಡರ್​ ಕಾರಣ ಎಂದೇ ಹೇಳಲಾಗುತ್ತಿದೆ.

    ಇದನ್ನು ಗಮನಿಸಿ ಹೇಳುವುದಾದರೆ, ವಿರಾಟ್ ಮೂರನೇ ಕ್ರಮಾಂಕದಲ್ಲಿ ಬರುವುದು ಸರಿ. ಎಂದಿನಂತೆ ದಾಖಲೆಗಳ ಸರದಾರ ತಮ್ಮ ಬ್ಯಾಟ್​ನಿಂದ ಸಿಡಿಸುವ ರನ್​ಗಳನ್ನು ನೋಡುವುದೇ ಒಂದು ಖುಷಿ. ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ವಿರಾಟ್​ರನ್ನು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಕಳುಹಿಸಲಿ ಎಂದು ಕೊಹ್ಲಿ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯಿಸಿದ್ದಾರೆ.

    ಎದೆಯಲ್ಲಿ ಕುದಿಯುತ್ತಿದ್ದ ಸೇಡು ಜ್ವಾಲೆಯಂತೆ ಸ್ಫೋಟ; ಈ ಕ್ಷಣಕ್ಕಾಗಿಯೇ ಕಾದು ಕುಳಿತಿದ್ದರು ಅಭಿಮಾನಿಗಳು

    ಭಾರತದ ಹೆಡ್​ ಕೋಚ್​ ಆಗುವುದಾದರೆ… ಗೌತಮ್ ಗಂಭೀರ್​ ಮುಂದಿಟ್ಟ 5 ಬೇಡಿಕೆಗಳಿಗೆ ದಂಗಾದ ಬಿಸಿಸಿಐ

    ಸಿನಿಮಾ

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_sticky', [[320, 50], [300, 50]], 'div-gpt-ad- 1719903699617-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_sticky --> <div id='div-gpt-ad-1719903699617-0' style='min-width: 300px; min-height: 50px;'> <script> googletag.cmd.push(function() { googletag.display('div-gpt-ad-1719903699617-0'); }); </script> </div>

    ಲೈಫ್‌ಸ್ಟೈಲ್

    <script async src="https://securepubads.g.doubleclick.net/tag/js/gpt.js"></script> <script> window.googletag = window.googletag || {cmd: []}; googletag.cmd.push(function() { googletag.defineSlot('/22637491760/Vijayavani.net_AP_300x250', [[300, 50], [250, 250], [300, 250], [200, 200]], 'div-gpt-ad-1719903811902-0').addService(googletag.pubads()); googletag.pubads().enableSingleRequest(); googletag.enableServices(); }); </script> <!-- /22637491760/Vijayavani.net_AP_300x250 --> <div id='div-gpt-ad-1719903811902-0' style='min-width: 200px; min-height: 50px;'> <script> googletag.cmd.push(function() { googletag.display('div-gpt-ad-1719903811902-0'); }); </script> </div>

    ಟೆಕ್ನಾಲಜಿ

    Latest Posts